ಕೆರ್ರಿಯನ್ನೂ ಕಾಡಿದ ವರುಣ

0
195

ರಾಷ್ಟ್ರೀಯ ಪ್ರತಿನಿಧಿ ವರದಿ
‘ನೀವೆಲ್ಲಾ ಕಾರ್ಯಕ್ರಮಕ್ಕೆ ಬಂದಿದ್ದು ಸಂತೋಷ ತಂದಿದೆ. ಮಳೆಯಿಂದಾಗಿ ದೆಹಲಿಯಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ. ಕಾರ್ಯಕ್ರಮಕ್ಕೆ ನೀವೆಲ್ಲಾ ಬೋಟ್ ನಲ್ಲಿ ಬಂದಿದ್ದೀರಾ? ಎಂದು ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರ್ರಿ ವಿದ್ಯಾರ್ಥಿಗಳನ್ನು ಪ್ರಶ್ನಿಸಿದ್ದಾರೆ.
 
 
ಭಾರತ ಪ್ರವಾಸದಲ್ಲಿರುವ ಜಾನ್ ಕರ್ರಿ ಐಐಟಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಜಾನ್ ಕೆರ್ರಿ ಭಾಷಣ ಮಾಡಿದ್ದಾರೆ. ಭಾಷಣದ ವೇಳೆ ಟ್ರಾಫೀಕ್ ಜಾಮ್, ಮಳೆ ಬಗ್ಗೆ ಉಲ್ಲೇಖ ಮಾಡಿದ್ದಾರೆ.
 
 
 
ರಾಷ್ಟ್ರರಾಜಧಾನಿ ದೆಹಲಿ ವರುಣನ ಅರ್ಭಟಕ್ಕೆ ನಲುಗಿದೆ. ದೆಹಲಿಯಲ್ಲಿ ಜಾನ್ ಕೆರ್ರಿ ಓಡಾಟಕ್ಕೆ ಮಳೆರಾಯ ಅಡ್ಡಿಯಾಗಿದ್ದಾನೆ. ಮಳೆ ನೀರು ನಿಂತ ರಸ್ತೆಯಲ್ಲೇ ಓಡಾಡಿದ್ದಾರೆ. ಇದರಿಂದ ನೊಂದ ಕೆರ್ರಿ ವಿದ್ಯಾರ್ಥಿಗಳನ್ನು ಹೀಗೆ ಪ್ರಶ್ನಿಸಿದ್ದಾರೆ ಎ‍ನ್ನಲಾಗಿದೆ.
 
 
 
ಭಾರೀ ಮಳೆಯಿಂದಾಗಿ ಭಾರತ ಭೇಟಿಯಲ್ಲಿರುವ ಅಮೆರಿಕ ರಾಜ್ಯ ಕಾರ್ಯದರ್ಶಿ ಜಾನ್ ಕೆರ್ರಿ ದೆಹಲಿ ಸುತ್ತಮುತ್ತ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡುವ ಯೋಜನೆಯನ್ನು ರದ್ದುಗೊಳಿಸಿದ್ದಾರೆ.

LEAVE A REPLY

Please enter your comment!
Please enter your name here