ಕೆಪಿಎಸ್ ಸಿ ಅಭ್ಯರ್ಥಿಗಳ ಹೋರಾಟಕ್ಕೆ ಜಯ

0
358

ಬೆಂಗಳೂರು ಪ್ರತಿನಿಧಿ ವರದಿ
2011ರ ಗೆಜೆಟೆಡ್ ಪ್ರೊಬೆಷನರಿ ನೇಮಕಾತಿ ವಿವಾದದ ಹಿನ್ನೆಲೆಯಲ್ಲಿ 362 ಅಭ್ಯರ್ಥಿಗಳಿಗೆ ಕೆಲಸ ನೀಡುವಂತೆ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ(ಕೆಎಟಿ) ಆದೇಶಿಸಿದೆ. 2 ತಿಂಗಳಲ್ಲಿ ನೇಮಕಾತಿ ಆದೇಶ ಹೊರಡಿಸಲು ಸರ್ಕಾರಕ್ಕೆ ಕೆಎಟಿಯಿಂದ ಸೂಚನೆ ಬಂದಿದೆ.
 
 
ಕೆಎಟಿ ಹಿಂದಿನ ನೇಮಕಾತಿ ರದ್ದು ಆದೇಶವನ್ನು ವಜಾಗೊಳಿಸಿದೆ. 2014ರ ಕೆಪಿಎಸ್ ಸಿ ನೇಮಕಾತಿ ರದ್ದು ಆದೇಶವನ್ನು ವಜಾಗೊಳಿಸಲಾಗಿದೆ. ಇದರಿಂದ ಕೊನೆಗೂ ಕೆಪಿಎಸ್ ಸಿ ಅಭ್ಯರ್ಥಿಗಳ ಹೋರಾಟಕ್ಕೆ ಜಯ ದೊರಕಿದೆ.
 
 
2011ರಲ್ಲಿ ಗ್ರೂಪ್ ಎ&ಬಿ ಹುದ್ದೆಗಳಿಗೆ ನೇಮಕವಾಗಿತ್ತು. ನೇಮಕಾತಿಯಲ್ಲಿ ಅಕ್ರಮ ಆರೋಪಿಸಿ ನೇಮಕಾತಿ ರದ್ದು ಮಾಡಲಾಗಿದೆ. ಆ ನೇಮಕಾತಿಯನ್ನು ರದ್ದುಪಡಿಸುವಂತೆ ಸರ್ಕಾರದಿಂದ 2014ರಲ್ಲಿ ಆದೇಶ ಬಂದಿತ್ತು. ಈ ಆದೇಶ ಪ್ರಶ್ನಿಸಿ ಅಭ್ಯರ್ಥಿಗಳು ಕೆಎಟಿ ಮೊರೆಹೋಗಿದ್ದರು. ಈಗ ರಾಜ್ಯ ಸರ್ಕಾರದ ಆದೇಶ ರದ್ದುಗೊಳಿಸಿ ಕೆಎಟಿ ತೀರ್ಪು ನೀಡಿದೆ.
 
ನೇಮಕಾತಿ ರದ್ದು ವಿರೋಧಿಸಿ ಬೃಹತ್ ಹೋರಾಟವಾಗಿತ್ತು. ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಅಭ್ಯರ್ಥಿಗಳು ಹೋರಾಟ ನಡೆಸಿದ್ದರು. ಕೊನೆಗೂ ಕೆಪಿಎಸ್ ಸಿ ಅಭ್ಯರ್ಥಿಗಳ ಪರ ಕೆಎಟಿ ತೀರ್ಪು ನೀಡಿದೆ.
ಸೇನಾ ಹೆಲಿಕಾಪ್ಟರ್ ಅಭ್ಯಾಸ ವೇಳೆ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

LEAVE A REPLY

Please enter your comment!
Please enter your name here