ಕೆಎಸ್ ಆರ್ ಟಿ ಸಿ ಶಾಕ್

0
149


ನಮ್ಮ ಪ್ರತಿನಿಧಿ ವರದಿ

ಬಸ್ ಪ್ರಯಾಣಿಕರಿಗೆ ರಾಜ್ಯ ಸರ್ಕಾರ ಶಾಕ್ ನೀಡಿದೆ. ಹೌದು ಸರ್ಕಾರ ಬಿಎಂಟಿಸಿ ಹೊರತುಪಡಿಸಿ ಉಳಿದ ಕೆಎಸ್ ಆರ್ ಟಿಸಿ, ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆ ಮತ್ತು ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆಗಳ ಬಸ್ ಪ್ರಯಾಣ ದರವನ್ನು ಏರಿಕೆ ಮಾಡಿದೆ. ಬಸ್ ಪ್ರಯಾಣ ದರ ಶೇ.12ರಷ್ಟು ಏರಿಕೆಯಾಗಿದ್ದು, ಮಂಗಳವಾರ ಮಧ್ಯರಾತ್ರಿಯಿಂದಲೇ ಜಾರಿಯಾಗಿದೆ.

ಕೆಲವೊಂದು ರಿಯಾಯಿತಿ:
ಕೆಎಸ್ ಆರ್ ಟಿಸಿಯು ವಿದ್ಯಾರ್ಥಿಗಳಿಗೆ ಹಾಗೂ ವಿಶಿಷ್ಟಚೇತನರಿಗೆ ನೀಡಿರುವ ರಿಯಾಯಿತಿ ಪಾಸ್ ದರಗಳನ್ನು ಹೆಚ್ಚಳ ಮಾಡಿಲ್ಲ. ಗ್ರಾಮೀಣ ಪ್ರದೇಶದಲ್ಲಿ 3ಕಿ.ಮೀ.ವರೆಗಿನ ಪ್ರಯಾಣಕ್ಕೆ 7 ರೂ. ಇದ್ದ ದರವನ್ನು 5ರೂ.ಗೆ ಇಳಿಸಲಾಗಿದೆ. ಸಾಮಾನ್ಯ ಸಾರಿಗೆಗಳ ಮೊದಲ 12 ಮತ್ತು 15ಕಿ.ಮೀ. ಪ್ರಯಾಣಕ್ಕೆ ಯಾವುದೇ ದರ ಹೆಚ್ಚಳ ಮಾಡಿಲ್ಲ. ಅಲ್ಲದೆ ವೇಗದೂತ ಸಾರಿಗೆಗಳಲ್ಲಿ ಮೊದಲ 6ಕಿ.ಮೀ. ಪ್ರಯಾಣಕ್ಕೂ ದರ ಹೆಚ್ಚಳ ಮಾಡಿಲ್ಲವೆಂದು ಕೆಎಸ್ ಆರ್ ಟಿಸಿ ಸ್ಪಷ್ಟಪಡಿಸಿದೆ.

LEAVE A REPLY

Please enter your comment!
Please enter your name here