ಕುಸ್ತಿಪಟು ಸತ್ಯವ್ರತ್ ಜತೆ ಸಾಕ್ಷಿ ವಿವಾಹ

0
403

ಸ್ಪೋರ್ಟ್ಸ್ ಪ್ರತಿನಿಧಿ ವರದಿ
ರಿಯೋ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಗೆದ್ದು ಭಾರತದ ಸಿಂಹಣಿ ಎಂದು ಪ್ರಸಿದ್ಧಿ ಪಡೆದ ಕುಸ್ತಿಪಟು ಸಾಕ್ಷಿ ಮಲಿಕ್ ಈ ವರ್ಷವೇ ಮದುವೆಯಾಗಲಿದ್ದಾರೆ. 23 ವರ್ಷದ ಸಾಕ್ಷಿ ಮಲಿಕ್‌‌ ಕುಸ್ತಿಪಟು ಸತ್ಯವ್ರತ್ ಕಡಿಯನ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
 
 
 
ಸತ್ಯವ್ರತ್ ಕೂಡ ಹರಿಯಾಣದ ರೋಹ್ಟಕ್ ಜಿಲ್ಲೆಯವರಾಗಿದ್ದಾರೆ. ರಿಯೋ ಒಲಿಂಪಿಕ್ಸ್​ಗೂ ಮೊದಲೇ ಸಾಕ್ಷಿ ಮಲಿಕ್ ಜೊತೆ ವಿವಾಹ ಆಗ್ಬೇಕು ಅನ್ನೋದು ಅವರ ಆಸೆಯಾಗಿತ್ತು. ಸತ್ಯವ್ರತ್ ಕೂಡ ಅಂತರಾಷ್ಟ್ರೀಯ ಮಟ್ಟದ ಕುಸ್ತಿಪಟು. ಭಾರತದ ಪಾಲಿಗೆ ರಿಯೋ ಒಲಿಂಪಿಕ್ಸ್​ನಲ್ಲಿ ಮೊದಲ ಪದಕ ಗೆದ್ದುಕೊಟ್ಟ ಸಾಕ್ಷಿ ಮಲಿಕ್ ಅವರಿಗೆ ಫೇಸ್ ಬುಕ್ ಮೂಲಕ ಮೊದಲು ಶುಭಾಶಯ ಹೇಳಿದವರು ಸತ್ಯವ್ರತ್.
 
ಮದುವೆ ನಂತರವೂ ಒಳ್ಳೆಯ ಸ್ನೇಹಿತ ಸಿಗುತ್ತಾನೆ..
ಭಾವಿ ಪತಿ ನನಗೆ ತುಂಬಾ ಸಪೋರ್ಟಿವ್, ಎಲ್ಲ ಕೆಲಸ ಕಾರ್ಯಗಳಲ್ಲಿ ಅವರು ನನಗೆ ಸಹಾಯ ಮಾಡಿದ್ದಾರೆ. ಅವರೊಂದಿಗೆ ಮದುವೆಯಾಗುವುದು ನಿಜಕ್ಕೂ ತುಂಬಾ ಖುಷಿಯ ಕ್ಷಣ. ಮದುವೆ ನಂತರವೂ ಸಹ ನನಗೊಬ್ಬ ಒಳ್ಳೆಯ ಸ್ನೇಹಿತ ಸಿಗುತ್ತಾನೆ. ಹಾಗೆಯೇ ಮದುವೆ ನಂತರ ಸಹ ಕುಸ್ತಿಯಲ್ಲಿ ಮುಂದುವರಿಯುವುದಾಗಿ ಸಾಕ್ಷಿ ಮಲಿಕ್ ಹೇಳಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here