ಕುವೆಂಪು ವಿವಿ ತಂಡ ಚಾಂಪಿಯನ್

0
291

 
ಉಜಿರೆ ಪ್ರತಿನಿಧಿ ವರದಿ
ಕುವೆಂಪು ವಿಶ್ವವಿದ್ಯಾನಿಲಯದ ಎನ್ಎಸ್ಎಸ್ ತಂಡ ರಾಜ್ಯಮಟ್ಟದ ರಾಷ್ಟ್ರೀಯ ಸೇವಾ ಯೋಜನೋತ್ಸವದ ಸಾಂಸ್ಕೃತಿಕ ಸ್ಪರ್ಧೆಗಳ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಬೀದರ್ ನ ಕರ್ನಾಟಕ ಪಶು ವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ಮಹಾವಿದ್ಯಾಲಯದ ತಂಡವು ರನ್ನರ್ ಅಪ್ ಪ್ರಾಶಸ್ತ್ಯ ಪಡೆದುಕೊಂಡಿದೆ.
 
ಎಸ್ ಡಿ ಎಂ ಕಾಲೇಜ್ ನಲ್ಲಿ ಸಮಾರೋಪಗೊಂಡ ಎನ್ಎಸ್ಎಸ್ ಯೋಜನೋತ್ಸವದ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧಾ ವಿಜೇತ ತಂಡಗಳಿಗೆ ಪ್ರಶಸ್ತಿ ಫಲಕಗಳನ್ನು ನೀಡಿ ಗೌರವಿಸಲಾಯಿತು. ಬಹುಮಾನ ವಿಜೇತರನ್ನು ಪ್ರೊ.ಕುಮಾರ್ ಹೆಗ್ಡೆ ಘೋಷಿಸಿದರು. ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ. ಡಿ.ಟಿ.ಕೆಂಪರಾಜು, ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ.ಯಶೋವರ್ಮ, ಎಸ್ ಡಿ ಎಂ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ.ಎಸ್.ಮೋಹನ ನಾರಾಯಣ ಪ್ರಶಸ್ತಿ ಫಲಕಗಳನ್ನು ಪ್ರದಾನ ಮಾಡಿದರು.
 
 
ಸ್ಪರ್ಧಾ ವಿಜೇತರ ವಿವರ:
ಸುಗಮ ಸಂಗೀತ: ಮೈಸೂರು ವಿಶ್ವವಿದ್ಯಾನಿಲಯದ ಸುಮುಖ್ ಎಸ್.ವಿ (ಪ್ರಥಮ), ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯದ ವಾಸವಿ ಹೆಗಡೆ (ದ್ವಿತೀಯ), ಮಂಗಳೂರು ವಿಶ್ವವಿದ್ಯಾನಿಲಯದ ಅರ್ಪಣ ಎನ್ (ತೃತೀಯ)
ಸುಗಮ ಸಂಗೀತ ಸಮೂಹ ಗೀತೆ: ಕುವೆಂಪು ವಿಶ್ವವಿದ್ಯಾನಿಲಯ (ಪ್ರಥಮ), ಮೈಸೂರು ವಿಶ್ವವಿದ್ಯಾನಿಲಯ (ದ್ವಿತೀಯ), ಬೀದರಿನ ಕರ್ನಾಟಕ ಪಶು ವೈದ್ಯಕೀಯ ಮತ್ತು ಮೀನುಗಾರಿಕೆ ವಿಜ್ಞಾನಗಳ ಮಹಾವಿದ್ಯಾಲಯ (ತೃತೀಯ)
ಪ್ರಹಸನ ಸ್ಪರ್ಧೆ: ಬೀದರಿನ ಕರ್ನಾಟಕ ಪಶು ವೈದ್ಯಕೀಯ ವಿಶ್ವವಿದ್ಯಾಲಯ (ಪ್ರಥಮ), ಕುವೆಂಪು ವಿಶ್ವವಿದ್ಯಾನಿಲಯ(ದ್ವಿತೀಯ), ಮಂಗಳೂರು ವಿಶ್ವವಿದ್ಯಾನಿಲಯ (ತೃತೀಯ)
ರಸಪ್ರಶ್ನೆ ಸ್ಪರ್ಧೆ: ಕುವೆಂಪು ವಿಶ್ವವಿದ್ಯಾನಿಲಯ (ಪ್ರಥಮ), ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯ (ದ್ವಿತೀಯ), ವಿಶ್ವೇಶರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ (ತೃತೀಯ)
ಚರ್ಚಾ ಸ್ಪರ್ಧೆ: ಬೀದರಿನ ಕರ್ನಾಟಕ ಪಶು ವೈದ್ಯಕೀಯ ಮತ್ತು ಮೀನುಗಾರಿಕೆ ವಿದ್ಯಾಲಯ (ಪ್ರಥಮ), ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯ (ದ್ವಿತೀಯ), ಕುವೆಂಪು ವಿಶ್ವವಿದ್ಯಾನಿಲಯ (ತೃತೀಯ)
ಚಿತ್ರಕಲಾ ಸ್ಪರ್ಧೆ: ಕುವೆಂಪು ವಿಶ್ವವಿದ್ಯಾನಿಲಯದ ಪೂರ್ಣಚಂದ್ರ (ಪ್ರಥಮ), ರಾಜೀವಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯದ ವೀಕ್ಷಣ್ ಶೆಟ್ಟಿ (ದ್ವಿತೀಯ), ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಪ್ರತೀಕ್ಷ ವಿ (ತೃತೀಯ)
ಪ್ರಬಂಧ ಸ್ಪರ್ಧೆ: ಕುವೆಂಪು ವಿಶ್ವವಿದ್ಯಾನಿಲಯದ ನಾಗರಾಜ್ ಕೆ.ವಿ (ಪ್ರಥಮ), ಉದ್ಯೋಗ ಮತ್ತು ಕೈಗಾರಿಕ ತರಬೇತಿ ವಿಶ್ವವಿದ್ಯಾಲಯದ ಹೇಮಂತ್ (ದ್ವಿತೀಯ), ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ವಿಶ್ವವಿದ್ಯಾನಿಲಯದ ಸರ್ವೊತ್ತಮ (ತೃತೀಯ)
ನೃತ್ಯ ವೈಯಕ್ತಿಕ ಸ್ಪರ್ಧೆ: ಮಂಗಳೂರು ವಿಶ್ವವಿದ್ಯಾನಿಲಯದ ಡಿಂಪಲ್ ಎಸ್.ಎನ್(ಪ್ರಥಮ), ಬಹುಮಾನವನ್ನು ರಾಜೀವಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯದ ಜಿನ್ಯ ನಂಬಿಯಾರ್(ದ್ವಿತೀಯ), ಬಹುಮಾನವನ್ನು ಬೀದರಿನ ಕರ್ನಾಟಕ ಪಶು ವೈದ್ಯಕೀಯ ಮತ್ತು ಮೀನುಗಾರಿಕೆ ವಿದ್ಯಾಲಯದ ಸಂಧ್ಯಾರಾಣಿ (ತೃತೀಯ)
ವಸ್ತು ಪ್ರದರ್ಶನ ಸ್ಪರ್ಧೆ: ಬೀದರಿನ ಕರ್ನಾಟಕ ಪಶು ವೈದ್ಯಕೀಯ ಮತ್ತು ಮೀನುಗಾರಿಕೆ ವಿದ್ಯಾಲಯ (ಪ್ರಥಮ), ಕುವೆಂಪು ವಿಶ್ವವಿದ್ಯಾನಿಲಯ (ದ್ವಿತೀಯ), ಮಂಗಳೂರು ವಿಶ್ವವಿದ್ಯಾಲಯ (ತೃತೀಯ).

LEAVE A REPLY

Please enter your comment!
Please enter your name here