ಕುಲಾಲ\ಕುಂಬಾರರ ಯುವ ವೇದಿಕೆಯ ಪದಗ್ರಹಣ

0
580

ವರದಿ: ರಂಜಿತ್ ಮಡಂತ್ಯಾರು
ಕುಲಾಲ, ಕುಂಬಾರರು ಎಲ್ಲಾ ಕ್ಷೇತ್ರದಲ್ಲಿಯೂ ಸಾಧನೆ ಮಾಡಿದವರು, ಧಾರ್ಮಿಕ, ಸಾಮಾಜಿಕ, ರಾಜಕೀಯ ಹೀಗೆ ಎಲ್ಲಾ ಕ್ಷೇತ್ರದಲ್ಲಿಯೂ ತಮ್ಮ ತಮ್ಮ ಸಾಮಥ್ರ್ಯಕ್ಕೆ ತಕ್ಕಂತೆ ಸಾಧನೆ ಮಾಡಿದ್ದಾರೆ, ಆದರೆ ರಾಜಕೀಯವಾಗಿ ಕುಲಾಲ, ಕುಂಬಾರರನ್ನು ಕಡೆಗಣಿಸಲಾಗಿದೆ, ಈ ಹಿನ್ನಲೆಯಲ್ಲಿ ಈ ಭಾರೀಯ ಚುನಾವಣೆಯಲ್ಲಿ ಸೂಕ್ತ ಉತ್ತರ ನೀಡುತ್ತೇವೆ ಎಂದು ಕುಲಾಲ\ಕುಂಬಾರರ ಯುವ ವೇದಿಕೆಯ ಸ್ಥಾಪಕಧ್ಯಕ್ಷರಾದ ಡಾ|.ಅಣ್ಣಯ್ಯ ಕುಲಾಲ್ ಹೇಳಿದರು.
 
 
 
ಅವರು ಗುರುವಾಯನಕೆರೆಯ ಕುಲಾಲ ಮಂದಿರದಲ್ಲಿ ನಡೆದ ಕುಲಾಲ\ಕುಂಬಾರರ ಯುವ ವೇದಿಕೆಯ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತಾನಾಡಿದರು. ಬೆಳ್ತಂಗಡಿ ತಾಲೂಕಿನಲ್ಲಿ 25,000 ಕ್ಕಿಂತಲೂ ಹೆಚ್ಚು ಕುಲಾಲ, ಕುಂಬಾರರ ಸಮುದಾಯದ ಮತದಾರರು ಇದ್ದರೆ, ಈ ಭಾರೀ ಚುನಾಚಣೆಯಲ್ಲಿ ಕುಲಾಲ, ಕುಂಬಾರರ ಶಕ್ತಿ ಏನು ಎಂಬುದನ್ನು ತೋರಿಸುತ್ತೇವೆ, ಈ ಹಿನ್ನಲೆಯಲ್ಲಿ ಪ್ರತಿ ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ಒಬ್ಬ ಸಂಚಾಲಕರನ್ನಾಗಿ ಆಯ್ಕೆ ಮಾಡಿದೆ, ಹಾಗೂ ಪ್ರತಿ ಗ್ರಾಮದಲ್ಲಿಯೂ ಗ್ರಾಮ ಸಮಿತಿಯನ್ನು ಮಾಡಲಾಗಿದೆ ಎಂದು ತಿಳಿಸಿದರು.
 
 
 
ಈ ಸಂದರ್ಭದಲ್ಲಿ ಕುಲಾಲ\ಕುಂಬಾರರ ಯುವ ವೇದಿಕೆಯ ಗೌರವ ಅಧ್ಯಕ್ಷರಾದ ಹರೀಶ್ ಕಾರಿಂಜ ನಾವೂರು, ಅಧ್ಯಕ್ಷರಾದ ಲೋಕೆಶ್ ಕುಲಾಲ್ ಗುರುವಾಯನಕೆರೆ, ಪ್ರಧಾನ ಕಾರ್ಯದರ್ಶಿ ದಿನಕರ್ ಕುಲಾಲ್ ಕುಂಡದಬೆಟ್ಟು, ಜೊತೆ ಕಾರ್ಯದರ್ಶಿಗಳಾದ ಮಹೇಶ್ ಕುಲಾಲ್ ವಿವೇಕಾನಂದ ನಗರ, ನವೀನ್ ಕುಲಾಲ್ ಗುರುವಾಯನಕೆರೆ, ಉಪಾಧ್ಯಕ್ಷರಾದ ಶ್ರೀನಿವಾಸ್ ಕುಲಾಲ್ ಚಾರ್ಮಾಡಿ, ಮಿಥುನ್ ಕುಲಾಲ್ ಅಳಕ್ಕೆ, ಸೋಮನಾಥ್ ಕೆ.ವಿ.ಕುಕ್ಕೇಡಿ, ರವಿಚಂದ್ರ ಕುಲಾಲ್ ಗುರುವಾಯನಕೆರೆ, ಕೋಶಾಧಿಕಾರಿ ಉಮೇಶ್ ಕುಲಾಲ್ ಗುರುವಾಯನಕೆರೆ, ಸಾಂಸ್ಕೃತಿಕ ಕಾರ್ಯದರ್ಶಿ ಅಶ್ವಿತ್ ಮೂಲ್ಯ ಓಡಿಲ್, ಕ್ರೀಡಾ ಕಾರ್ಯದರ್ಶಿ ತಿಲಕ್ರಾಜ್ ಕುಲಾಲ್ ಗುರುವಾಯನಕೆರೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here