ಕುಡಿಯುವ ನೀರು ಸರಬರಾಜಿಗೆ ಮೊದಲ ಆದ್ಯತೆ ನೀಡಿ ಕೆಲಸ – ಕಾಗೋಡು ತಿಮ್ಮಪ್ಪ

0
264

ಬೆಂಗಳೂರು ಪ್ರತಿನಿಧಿ ವರದಿ
ರಾಜ್ಯದಲ್ಲಿ ಮುಂಬರುವ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಗಂಭೀರ ಪರಿಸ್ಥಿತಿ ಎದುರಾಗಬಹುದೆಂದು ಅಂದಾಜಿಸಲಾಗಿದ್ದು, ಕುಡಿಯುವ ನೀರು ಸರಬರಾಜಿಗೆ ಮೊದಲ ಆದ್ಯತೆ ನೀಡಿರುವ ಸರ್ಕಾರ ಇದಕ್ಕೆ 350 ಕೋಟಿ ರೂ. ಹಣ ಬಿಡುಗಡೆ ಮಾಡಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ತಿಳಿಸಿದರು.
 
 
 
 
ವಿಧಾನ ಸೌಧದ ತಮ್ಮ ಕಛೇರಿಯಲ್ಲಿ ಇಂದು ಸುದ್ಧಿಗಾರರೊಂದಿಗೆ ಮಾತನಾಡಿದ ಸಚಿವರು ಬರ ಅಧ್ಯಯನಕ್ಕೆ ಸಚಿವರ ನಾಲ್ಕು ತಂಡಗಳು ತೆರಳಿದ್ದು, ಅಧ್ಯಯನ ಮುಗಿದಿದೆ. ವರದಿ ಬಂದ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದ ಸಚಿವರು ಬರದಿಂದ ರಾಜ್ಯದಲ್ಲಿ ಸುಮಾರು ಮೂರು ಸಾವಿರ ಕೋಟಿ ರೂ. ನಷ್ಠ ಆಗಿದೆ. ಕೇಂದ್ರದಿಂದ ರೂ. 1754 ಕೋಟಿ ಬಂದಿದ್ದು, ಇನ್ನೂ 900 ಕೋಟಿ ರೂ. ಹಣ ನೀರಿಕ್ಷಿಸಲಾಗಿದೆ ಎಂದರು.
 
 
 
 
ನಮಗೆ ಬೆಳೆ ಪರಿಹಾರದ ಹಣ ಮೂರು ಸಾವಿರ ಕೋಟಿ ರೂ. ಆಗಿದ್ದು ರೈತರಿಗೆ ನಿಯಮಾವಳಿ ಪ್ರಕಾರ ಒಂದು ಹೆಕ್ಟೇರ್ ಪ್ರದೇಶಕ್ಕೆ 6350 ರೂ. ಪರಿಹಾರ ನೀಡಬೇಕಾಗುತ್ತದೆ ಎಂದ ಸಚಿವರು ಮುಂದಿನ ಮಾರ್ಚ್, ಏಪ್ರಿಲ್ ವೇಳೆಗೆ ಬೇಸಿಗೆ ಇನ್ನೂ ಗಂಭೀರವಾಗಲಿದ್ದು ಕುಡಿಯುವ ನೀರು ಪೂರೈಕೆಗಾಗಿಯೇ ನಮಗೆ 1500 ಕೋಟಿ ರೂ. ಹಣ ಬೇಕಾಗುತ್ತದೆ. ಸರ್ಕಾರ ಹೊಸ 33 ತಾಲ್ಲೂಕುಗಳ ರಚನೆಗೆ ಚಿಂತನೆ ನಡೆಸಿದ್ದು ಮುಂದಿನ ದಿನಗಳಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

LEAVE A REPLY

Please enter your comment!
Please enter your name here