ಕುಟುಂಬ ಕಲಹಗಳಿರಲಿಲ್ಲ : ಗಣಪತಿ ಪತ್ನಿ ಸ್ಪಷ್ಟನೆ

0
140

ನಮ್ಮ ಪ್ರತಿನಿಧಿ ವರದಿ
ಮಂಗಳೂರು ಡಿವೈಎಸ್​​​​​​​​​​​​ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಊಹಾಪೋಹಗಳು ಹುಟ್ಟುತ್ತಿರುವ ಬೆನ್ನಲ್ಲೇ ಡಿವೈಎಸ್ ಪಿ ಗಣಪತಿ ಅವರ ಪತ್ನಿ ಸ್ಪಷ್ಟನೆ ನೀಡಿದ್ದಾರೆ. ಕುಟುಂಬದಲ್ಲಿ ಯಾವುದೇ ರೀತಿಯ ಕಲಹಗಳಿರಲಿಲ್ಲ. ಇದರಿಂದ ಆತ್ಮಹತ್ಯೆ ನಡೆದಿಲ್ಲ. ಆತ್ಮಹತ್ಯೆಗೂ ಮೊದಲು ಪತಿ ಹೇಳಿದ ಹೇಳಿಕೆಗಳನ್ನು ಆಧಾರದಲ್ಲಿಟ್ಟುಕೊಂಡು ತನಿಖೆ ನಡೆಸಬೇಕಾಗಿದೆ ಎಂದವರು ಒತ್ತಾಯಿಸಿದ್ದಾರೆ. ಸಿ.ಐ.ಡಿ ಪ್ರಾಥಮಿಕ ವರದಿಗೆ ತೀವ್ರ ಅಸಾಮಾಧಾನ ವ್ಯಕ್ತಪಡಿಸಿದರಲ್ಲದೆ ಇಲಾಖೆಯ ಒತ್ತಡಕ್ಕೆ ಮಣಿದೇ ಅವರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಿದ್ದಾರೆ.

LEAVE A REPLY

Please enter your comment!
Please enter your name here