ಕುಟುಂಬಕ್ಕೆ ಅಚ್ಚರಿಯೇ ಕಾದಿತ್ತು!!!

0
4128


ನಿತ್ಯ ಅಂಕಣ:೭೪-ತಾರಾನಾಥ್‌ ಮೇಸ್ತ,ಶಿರೂರು
ಶ್ರೀ ದತ್ತಾತ್ರೇಯ ಗಣಪತಿ ಮುಗ್ವೆ ಎಂಬುವರು ನಿತ್ಯಾನಂದರ ಭಕ್ತರಾಗಿದ್ದರು. ಇವರು ಮಾತ್ರ ಅಲ್ಲ ಇವರ ಕುಟುಂಬ ಪರಿವಾರವೇ ನಿತ್ಯಾನಂದರ ಭಕ್ತರಾಗಿದ್ದರು. ಇವರು ಮುಂಬಯಿ ಗಾಂವ್ ದೇವಿ ಇಲ್ಲಿಯ ನಿವಾಸಿಯಾಗಿದ್ದರು. ಬಿಡುವ ಸಿಕ್ಕಾಗ ಗರುದೇವರ ದರ್ಶನ ಪಡೆದು ಹೋಗುತ್ತಿದ್ದರು. ದಿನಚರಿಯಲ್ಲಿ ಯಾವೊಂದು ಪ್ರಗತಿಯ ಲಕ್ಷಣಗಳು ಕಾಣದಿರುವುದರಿಂದ, ದತ್ತಾತ್ರೇಯ ಅವರ ಮುಂದಿನ ಭವಿಷ್ಯಫಲ ಹೇಗಿದೆ ಎಂದು ತಿಳಿದುಕೊಳ್ಳಲು ಮನೆಯವರು ಜಾತಕವನ್ನು ಜ್ಯೋತಿಷಿ ಬಳಿಯಲ್ಲಿ ಪರಿಶೀಲಿಸಲು ನೀಡುತ್ತಾರೆ. ಜ್ಯೋತಿಷಿಗಳು ರಾಶಿ ನಕ್ಷತ್ರ ಗಹ್ರಗಳ ಚಲನೆಗಳ ಗುರುತಿಸಿ, ದತ್ತಾತ್ರೇಯ ಅವರಿಗೆ ಬಹಳ ಕಂಟಕ ಇದೆ. 1956 ರ ಆಗಸ್ಟ್ ಮಾಸದಲ್ಲಿ ಅವರು ದೊಡ್ಡ ಪ್ರಮಾಣದ ಅವಘಡವನ್ನು ಎದುರಿಸಬೇಕಾಗುತ್ತದೆ. ಯಾವೂದೊಂದು ಕಾರಣಕ್ಕೆ ಜೈಲು ಸೇರಬೇಕಾದ ಸಂದರ್ಭವು ಇದೆ, ಹೀಗೆಂದು ಭವಿಷ್ಯ ನುಡಿಯುತ್ತಾರೆ. ಭವಿಷ್ಯವಾಣಿ ಮುಗ್ವೆ ಕುಟುಂಬದವರಿಗೆ ಭಯ ಹುಟ್ಟಿಸುತ್ತದೆ.

ಜಾತಕದಲ್ಲಿ ಕಂಡುಬಂದಿರುವ ಕಂಟಕ ಪರಿಹಾರಕ್ಕಾಗಿ ಹೋಮ, ದಂಪತಿ ಭೋಜನ, ಸಾಧು ಭೋಜನ ಇತ್ಯಾದಿ ಧಾರ್ಮಿಕ ಪ್ರಕ್ರಿಯೆಗಳು ನಡೆಸಬೇಕಾಗುತ್ತದೆ. ಇವುಗಳಿಲ್ಲದರ ವೆಚ್ಚವು 800 ರೂಪಾಯಿ ತಗಲುತ್ತದೆ, ಎಂದು ಜ್ಯೋತಿಷಿಗಳು ಹೇಳುತ್ತಾರೆ. 1956 ರ ಸಮಯದಲ್ಲಿ 800 ರೂಪಾಯಿ ಅಂದರೆ, ಅದು ಬಹಳ ದೊಡ್ಡ ಮಟ್ಟದ ಹಣ ಅದು. ದತ್ತಾತ್ರೇಯ ಮುಗ್ವೆ ಅವರಿಗೆ ಜ್ಯೋತಿಷಿಗಳು ಪರಿಹಾರ ವಿಧಾನಗಳಿಗೆ ಹೇಳಿದ ಖರ್ಚು ಕೇಳಿ ದಿಕ್ಕು ತೋರದಾಗುತ್ತದೆ. ಛೇ..! ಇವರಿಗೆ ಇಷ್ಟೊಂದು ಹಣ ನೀಡುವುದಕ್ಕಿಂತ ನಿತ್ಯಾನಂದರ ಚರಣಗಳಿಗೆ ನೂರಾ ಎಂಟು ರೂಪಾಯಿಗಳನ್ನು ಇಟ್ಟು ಅವರಲ್ಲಿ ಪರಿಹಾರ ಪಡೆದು ಕೊಳ್ಳುವುದು ಉತ್ತಮ ಎಂದು ನಿರ್ಧರಿಸುತ್ತಾರೆ.

ನಿರ್ಧಾರದಂತೆ ದತ್ತಾತ್ರೇಯರು ತಮ್ಮ ಪರಿವಾರದೊಂದಿಗೆ ಗಣೇಶಪುರಿಗೆ ತೆರಳಿ, ಸದ್ಗುರು ನಿತ್ಯಾನಂದರ ದರ್ಶನ ಪಡೆಯುತ್ತಾರೆ. ಆವಾಗ ಗರುದೇವರು ನೀವೆಲ್ಲಾ ರಾಮ ಭಟ್ಟರ ‘ಗೋಕರ್ಣ ನಿವಾಸ’ ಹೊಟೇಲಿಗೆ ಹೋಗಿ ಊಟ ಮಾಡಿ ಬನ್ನಿ ಎಂದು ಆಜ್ಞೆ ಇತ್ತರು. ಗುರುದೇವರ ಆಜ್ಞೆಯಂತೆ ಎಲ್ಲರೂ ರಾಮ ಭಟ್ಟರ ಹೊಟೇಲಿಗೆ ಬರುತ್ತಾರೆ. ದತ್ತಾತ್ರೇಯನನ್ನು ಕಂಡ ರಾಮ ಭಟ್ಟರು, ನನಗೆ ಗುರುದೇವರು ನಿಮ್ಮ ಸೇವಾರ್ಥವಾಗಿ ನಾಲ್ಕು ಜೋಡಿ ದಂಪತಿಗಳಿಗೆ, ಐವರು ಸಂತರಿಗೆ ಭೋಜನವನ್ನು ಹಾಗೂ ಗೋವಿಗೆ ಅನ್ನವನ್ನು ನೀಡುವಂತೆ ಹೇಳಿಟ್ಟಿದ್ದಾರೆ. ರಾಮ ಭಟ್ಟರ ಮಾತು ಆಲಿಸಿದ ದತ್ತಾತ್ರೇಯ ಮುಗ್ವೆ ಅವರ ಕುಟುಂಬ ಪರಿವಾರವು ಅಚ್ಚರಿ ಪಡುವಂತರಾಗುತ್ತಾರೆ. ನಮ್ಮಂತಹ ಭಕ್ತರು ಬಂದಿರುವ ಉದ್ದೇಶ ಏನೆಂದು ಮುಂಚಿತವಾಗಿ ಗುರುದೇವರು ತಿಳಿದು ಬಿಟ್ಟರಲ್ಲ..! ಅಲ್ಲದೆ ಪೂರ್ವ ಯೋಜನೆ ಹಾಕಿ ವ್ಯವಸ್ಥೆ ಮಾಡಿದರಲ್ಲ..! ಎಂದು ವಿಸ್ಮಯ ಪಡುತ್ತಾರೆ. ಎಲ್ಲಾ ಕಾರ್ಯಗಳು ನಡೆದ ಬಳಿಕ ಮುಗ್ವೆ ಪರಿವಾರದವರು ಪುನಃ ನಿತ್ಯಾನಂದರ ಚರಣಗಳಿಗೆ 108 ರೂಪಾಯಿ ಗುರುಕಾಣಿಕೆ ಸಮರ್ಪಿಸಿ ನಮಸ್ಕರಿಸುತ್ತಾರೆ. ಗುರುದೇವರು ಆರ್ಶಿವದಿಸಿ, “ಇನ್ನೆಲ್ಲಿಯ ಭಯ..!! ಭಯವು ಹೋಗಿ ಬಿಟ್ಟಿತು. ಇವತ್ತು ನೀವು ಇಲ್ಲಿಯೆ ವಾಸ್ತವ್ಯ ಮಾಡಿ ಮರುದಿನ ಹೋಗಿರಿ” ಎಂದು ಒಂದು ದಿನ ನಿಲ್ಲಿಸಿ ಮರದಿನ ಗುರುದೇವರು ಪ್ರೀತಿಯಿಂದ ಕಳುಹಿಸಿಕೊಟ್ಟರು.

ಗಣೇಶಪುರಿಯಿಂದ ಗಾಂವ್ ದೇವಿಯಲ್ಲಿರುವ ಮನೆಗೆ ದತ್ತಾತ್ರೇಯ ಮುಗ್ವೆಯವರು ಮುಟ್ಟಿದ ಮರುದಿನ ಅಚ್ಚರಿಯ ಸಂಗತಿ ನಡೆದು ಹೋಗುತ್ತದೆ. ಅಗಸ್ಟ್ 27 ರಂದು, ಭಾರತದ ಅಂದಿನ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್ ಅವರಿಂದ ಸ್ವರ್ಣಪದಕ ಪಡೆಯಲು ಮುಗ್ವೆ ಅವರು ಆಯ್ಕೆ ಆಗಿದ್ದಾರೆಂದು ಸುದ್ದಿ ಮುಟ್ಟಿರುತ್ತದೆ. ಅವರು ಮಾಡಿರುವ ಸಾಮಾಜಿಕ ಸೇವೆಗೆ ಸಂದಿರುವ ಗೌರವವು ಅದಾಗಿತ್ತು. ಜ್ಯೋತಿಷಿ ಅವರು ಜೈಲುವಾಸ ಅನುಭವಿಸುವ ಕಂಟಕ ಇದೆ ಎಂದು ಹೇಳಿದ್ದರು. ಮುಗ್ವೆ ಕುಟುಂಬಿಕರು ಭಯ ಪಟ್ಟಿದ್ದರು. ಇವಾಗ ಗುರುದೇವರ ಅನುಗ್ರಹದಿಂದ ಸಂತೋಷ ಪಡುವಂತರಾದೆವು ಎಂದು ದತ್ತಾತ್ರೇಯ ಮುಗ್ವೆ ಅವರು ಆನಂದ ಪಡುವಂತರಾದರು.

LEAVE A REPLY

Please enter your comment!
Please enter your name here