ಕುಖ್ಯಾತ ಪಾತಕಿ ನಯೀಂ ಮಟಾಷ್

0
277

ರಾಷ್ಟ್ರೀಯ ಪ್ರತಿನಿಧಿ ವರದಿ
ಕುಖ್ಯಾತ ಪಾತಕಿ ನಯೀಂ ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ. ತೆಲಂಗಾಣ ನಕ್ಸಲ್ ನಿಗ್ರಹ ಪಡೆ-ಗ್ರೇಹಾಂಡ್ ಗೆ ಬಲಿಯಾಗಿದ್ದಾನೆ.
 
 
ಈತ ಮೆಹಬೂಬ್ ನಗರದ ಶಾದ್ ನಗರದಲ್ಲಿರುವ ಮೀಲೇನಿಯಂ ಟೌನ್ ಶಿಪ್ ನ ಮನೆಯೊಂದರಲ್ಲಿ ಆಡಗಿಕೊಂಡಿದ್ದ. ಈತ ಹಲವು ಪ್ರಕರಣಗಳ ಆರೋಪಿಯಾಗಿದ್ದ.
 
 
ನಯೀಂನನ್ನು ಪೊಲೀಸರು ಕರೆದೊಯ್ಯಲು ಬಂದಾಗ ಪಾತಕಿ ನಯೀಂ ಪೊಲೀಸರ ಮೇಲೆ ಗುಂಡು ಹಾರಿಸಿದ್ದ. ಇದಕ್ಕೆ ಗ್ರೇಹಾಂಡ್ ಪೊಲೀಸರು ಪ್ರತಿದಾಳಿ ನಡೆಸಿದಾಗ ನಹೀಂ ಹತ್ಯೆಯಾಗಿದ್ದಾನೆ.
 
 
ನಯೀಂ ಮೂಲತಃ ನಲ್ಗೊಂಡ ಜಿಲ್ಲೆ ಭುವನಗಿರಿ ನಿವಾಸಿಯಾಗಿದ್ದಾನೆ. ಐಪಿಎಸ್ ಅಧಿಕಾರಿ ವ್ಯಾಸ್, ಹಲವು ಮಾಜಿ ನಕ್ಸಲರ ಕೊಲೆ ಸೇರಿ ಇನ್ನಿತರ ಹಲವು ಪ್ರಕರಣಗಳ ಆರೋಪಿಯಾಗಿದ್ದಾನೆ.

LEAVE A REPLY

Please enter your comment!
Please enter your name here