ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ…

0
1950

 
ಹರೀಶ್ ಕೆ.ಆದೂರು
ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎಂಬ ಮಾತು ಅಕ್ಷರಶಃ ಇಲ್ಲಿ ನಿಜವಾಗಿದೆ. ಮೂಡಬಿದಿರೆಯ ಕೊಡಂಗಲ್ಲು ಪ್ರದೇಶದಲ್ಲಿರುವ ಅತ್ಯಂತ ಪ್ರಾಜೀನ `ನ್ಯಾಯ ಬಸದಿ’ ಕಾಲ ಗರ್ಭದಲ್ಲಿ ಹುದುಗಹೊರಟಿದೆ. ಕುಡಿತ-ಕುಣಿತ, ಮೋಜು-ಮಸ್ತಿಗಳ ತಾಣವಾಗಿ ಪರಿಣಮಿಸಿದೆ. ಹಿರಿಯರಿಂದ ಬಳವಳಿಯಾಗಿ ಬಂದ `ಪರಂಪರೆ’ ಉಳಿಸಿ ಬೆಳೆಸುವಲ್ಲಿ ಇಂದಿನ ಜನತೆ ಅಕ್ಷರಶಃ ಸೋಲುತ್ತಿದ್ದಾರೆ. ಪರಿಣಾಮ ಐತಿಹಾಸಿಕ ತಾಣಗಳು ಅವನತಿಯ ಹಾದಿ ತುಳಿಯುವಂತಾಗಿದೆ.
 
 
mood_story_kodangalu1
 
ಮೂಡಬಿದಿರೆಯಿಂದ ವೇಣೂರಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಲ್ಲಿ ಎರಡು ಕಿಲೋಮೀಟರ್ ಬಂದರೆ ಕೊಡಂಗಲ್ಲು ಪ್ರದೇಶ ಸಿಗುತ್ತದೆ. ದ.ಕ.ಜಿ.ಪ.ಹಿ.ಪ್ರಾಥಮಿಕ ಶಾಲೆ ಕೊಡಂಗಲ್ಲು ಇದರ ಆವರಣಕ್ಕೆ ಒತ್ತಿಕೊಂಡಂತೇ ಇರುವ ಅತ್ಯಂತ ಪುರಾತನ, ಆಕರ್ಷಕ ಕಲ್ಲ ಕಂಬಗಳಿಂದ ಕೂಡಿದ ಕರಿಕಲ್ಲ `ನ್ಯಾಯ ಬಸದಿ’ ಕಾಲನ ಕೈಗೆ ಸಿಲುಕಿ ಅಕ್ಷರಶಃ ನಲುಗುತ್ತಿದೆ.
 
mood_story_kodangalu2
 
ತೋಟಗಾರಿಕಾ ಇಲಾಖೆಯು 7.3 ಎಕ್ಕರೆ ವಿಸ್ತೀರ್ಣದಲ್ಲಿರುವ ಮೂಡಬಿದಿರೆಯ ಈ ನ್ಯಾಯಬಸದಿ ಕ್ಷೇತ್ರದಲ್ಲಿ ತಂತಿ ಬೇಲಿ, ನೀರಿನ ಟ್ಯಾಂಕ್ ಹಾಗೂ ಗೇಟು ನಿರ್ಮಿಸಿದೆ. ಒಂದೊಮ್ಮೆ ಅತ್ಯಂತ ಸುಂದರವಾಗಿ ಹಸಿರಿನಿಂದಾವೃತವಾಗಿದ್ದ ಈ ನ್ಯಾಯ ಬಸದಿ ಆವರಣದಲ್ಲಿ ಕಲ್ಲು ಬೆಂಚುಗಳು ಮಿನಿ ಪಾರ್ಕ್ ರಚನೆಯಾಗಿತ್ತು. ಅದರ ನಿರ್ವಹಣೆಯಲ್ಲಾದ ತೊಡಕಿನಿಂದಾಗಿ ಸಂಪೂರ್ಣ ನಾಶವಾಗಿ ಹೋಗಿದೆ. 24/7 ಎಂಬಂತೆ ಗೇಟೊಂದು ತೆರೆದೇ ಇರುತ್ತದೆ. ತಂತಿ ಬೇಲಿ ಹೆಸರಿಗೆ ಮಾತ್ರ ಎಂಬಂತಾಗಿದೆ. ಪಾರ್ಕ್ ನ ಒಳಭಾಗದಲ್ಲಿದ್ದ ಉತ್ತಮ ಮರಗಳು ಕೊಡಲಿಯೇಟಿಗೆ ಬಲಿಯಾಗಿವೆ. ಪಡ್ಡೆ ಹುಡುಗರ ಮೋಜಿನ ತಾಣವಾಗಿ ಮಾರ್ಪಾಡಾಗಿದೆ. ಎಲ್ಲೆಂದರಲ್ಲಿ ಕಸ, ಬಾಟಲಿಗಳು ತಮ್ಮ ಸಾಮ್ರಾಜ್ಯ ಸ್ಥಾಪಿಸಿದೆ. ಸಂಬಂಧ ಪಟ್ಟ ಇಲಾಖೆ, ಸ್ಥಳೀಯಾಡಳಿತಗಳು ಇದರತ್ತ ಗಮನ ಹರಿಸಬೇಕು. ಅಳಿದುಳಿದ ನಿರ್ಮಿತಿಗಳನ್ನಾದರೂ ಕಾಪಾಡುವತ್ತ ಚಿತ್ತ ಹರಿಸಬೇಕು.
 
mood_story_kodangalu3
ಹುಟ್ಟುಗುಣ ಸತ್ತರೂ ಬಿಡದು!
ಐದು ಸೆಂಟ್ಸ್ ಮನೆಗಳ ಕಾಲನಿಯ ಸಮೀಪವೇ ಇರುವ ಈ ಪುರಾತನ ಬಸದಿ ಕ್ಷೇತ್ರಕ್ಕೆ ನಿರಂತರ ಕಾಲೇಜು ವಿದ್ಯಾರ್ಥಿಗಳು, ಪಡ್ಡೆ ಹುಡುಗರು ಆಗಮಿಸಿ ಮೋಜು ಮಸ್ತಿಯಲ್ಲಿ ಕಾಲ ಕಳೆಯುತ್ತಿರುತ್ತಾರೆ. `ಹುಟ್ಟುಗುಣ ಸತ್ತರೂ ಬಿಡದು’. ನಾವು ಹೇಳುವುದನ್ನೇ ಬಿಟ್ಟಿದ್ದೇವೆ. ಇದ್ದ ಒಂದು ಸುಂದರ ತಾಣವೂ ನಶಿಸುತ್ತಿದೆ ಎಂದು ಸ್ಥಳೀಯರು ಬೇಸರ ವ್ಯಕ್ತ ಪಡಿಸುತ್ತಿದ್ದಾರೆ.
 
mood_story_kodangalu4
ಇದಾಗಲಿ...
* ಶೀಘ್ರ ಆವರಣ ವ್ಯವಸ್ಥೆ ಆಗಲಿ
* ಪುನಶ್ಚೇತನಕ್ಕೆ ವ್ಯವಸ್ಥೆ – ನಿರ್ವಹಣೆಗೆ ಸೂಕ್ತ ಸಮಿತಿ
* ಪ್ರವೇಶ – ನಿರ್ಗಮನಕ್ಕೆ ಸಮಯ ನಗಧಿ

LEAVE A REPLY

Please enter your comment!
Please enter your name here