ಕಿರಿಯ ವಯಸ್ಸಿನಲ್ಲೇ ವಿದಾಯ

0
566

 
ಸ್ಪೋರ್ಟ್ಸ್ ಪ್ರತಿನಿಧಿ ವರದಿ
ಇಂಗ್ಲೆಂಡ್ ನ ಪ್ರತಿಭಾನ್ವಿತ ಕ್ರಿಕೆಟ್ ಆಟಗಾರ ಜೇಮ್ಸ್ ಟೇಲರ್ ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ದಾರೆ. ಎಲ್ಲಾ ಪ್ರಕಾರದ ಕ್ರಿಕೆಟ್ ನಿಂದ ಜೇಮ್ಸ್ ಟೇಲರ್ ನಿವೃತ್ತಿ ಹೊಂದಿದ್ದಾರೆ.
 
 
26 ವರ್ಷದ ವಯಸ್ಸಿನ ಜೇಮ್ಸ್ ಟೇಲರ್ ಇಂಗ್ಲೆಂಡ್ ತಂಡದಲ್ಲಿ ಬಲಗೈ ಬ್ಯಾಟ್ಸ್ ಮನ್ ಆಗಿದ್ದು, ಹೈದಯ ಬೇನೆಯಿಂದ ಬಳಲುತ್ತಿದ್ದಾರೆ. ಪರೀಕ್ಷೆ ವೇಳೆ ಟೇಲರ್ ಎಆರ್‌ವಿಸಿ(ಆರಿತ್ಮೊಜೆನಿಕ್ ರೈಟ್ ವೆಂಟ್ರಿಕ್ಯುಲರ್ ಆರಿತ್ಮಿಯಾ) ಕಾಯಿಲೆಯಿಂದ ಬಳಲುತ್ತಿದ್ದು ಅವರ ಹೃದಯ ಬಹಳ ಗಂಭೀರ ಸ್ಥಿತಿಯಲ್ಲಿದೆ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯ್ಲಲಿ ಕ್ರಿಕೆಟ್ ಲೋಕಕ್ಕೆ ಟೇಲರ್ ವಿದಾಯ ಘೋಷಿಸಿದ್ದಾರೆ.
 
 
27 ಏಕದಿನ ಪಂದ್ಯಗಳನ್ನಾಡಿರುವ ಟೇಲರ್ 1 ಶತಕ, 7 ಅರ್ಧಶತಕ ಒಳಗೊಂಡಂತೆ 887 ರನ್ ದಾಖಲಿಸಿದರೆ, 7 ಟೆಸ್ಟ್‌ನಲ್ಲಿ 2 ಅರ್ಧಶತಕದೊಂದಿಗೆ 312 ರನ್ ಬಾರಿಸಿದ್ದಾರೆ.

LEAVE A REPLY

Please enter your comment!
Please enter your name here