ಕಿಂಗ್ ಫಿಷರ್ ವಿಲ್ಲಾಗೆ ಸೀಲ್

0
296

 
ರಾಷ್ಟ್ರೀಯ ಪ್ರತಿನಿಧಿ ವರದಿ
ಬ್ಯಾಂಕ್ ಗಳಲ್ಲಿ ಸಾಲ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ಉದ್ಯಮಿ ವಿಜಯ ಮಲ್ಯ ಅವರು ಆಸ್ತಿ ಜಪ್ತಿ ಮಾಡಲು ಇಡಿ ನಿರ್ಧರಿಸಿದೆ. ಬಹುತೇಕ ಆಸ್ತಿಗಳನ್ನು ಜಪ್ತಿ ಮಾಡಲು ಜಾರಿ ನಿರ್ದೇಶನಾಲಯ ನಿರ್ಧರಿಸಿದೆ.
 
 
ಮಲ್ಯರ ಸ್ಥಿರ, ಚರಾಸ್ತಿಯನ್ನು ಇಡಿ ಗುರುತಿಸಿದೆ. ಪಿಎಂಎಲ್ ಎ ಕಾಯ್ದೆಯಡಿ ಆಸ್ತಿ ಜಪ್ತಿಗೆ ಇಡಿ ನಿರ್ಧರಿಸಿದೆ. ಮುಂದಿನ 10 ದಿನಗಳಲ್ಲಿ ಆಸ್ತಿ ಜಪ್ತಿ ಮಾಡುವ ಸಾಧ್ಯತೆ ಇದೆ.
 
 
 
ಮಲ್ಯ ಒಡೆತನದ ಗೋವಾದ ಕಿಂಗ್ ಫಿಷರ್ ವಿಲ್ಲಾಗೆ ಸೀಲ್ ಹಾಕಲಾಗಿದೆ. 90ಕೋಟಿ ಮೌಲ್ಯದ ಕಿಂಗ್ ಫಿಷರ್ ವಿಲ್ಲಾಗೆ ಸೀಲ್ ಬಿದ್ದಿದೆ. ಗೋವಾದಲ್ಲಿ ಅಪಾರ ಪ್ರಮಾಣ ವಸ್ತುಗಳನ್ನು ದಾಸ್ತಾನು ಮಾಡಲಾಗಿದೆ.
 
 
ಅಕ್ರಮವಾಗಿ ಬ್ಯಾಂಕ್ ಗಳ ಸಾಲದ ಹಣವನ್ನು ವಿದೇಶಕ್ಕೆ ಸಾಗಾಟ ಮಾಡಲಾಗಿದೆ ಎಂದು ಮಲ್ಯ ವಿರುದ್ಧ ಆರೋಪಿಸಲಾಗಿದೆ.

LEAVE A REPLY

Please enter your comment!
Please enter your name here