ಕಾವೇರಿ ವಿವಾದ: ಇಂದು ಮೇಲ್ಮನವಿ ಅರ್ಜಿ ವಿಚಾರಣೆ

0
231

ರಾಷ್ಟ್ರೀಯ ಪ್ರತಿನಿಧಿ ವರದಿ
ಇಂದು ಕಾವೇರಿ ನದಿ ನೀರು ವಿವಾದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಯಲಿದೆ.  ಕಾವೇರಿ ಜಲವಿವಾದ ನ್ಯಾಯಮಂಡಳಿ 2007ರಲ್ಲಿ ನೀಡಿದ್ದ ಐ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಯಲಿದೆ.
 
 
 
ಈ ಬಗ್ಗೆ ಕರ್ನಾಟಕ, ತಮಿಳುನಾಡು ಮತ್ತು ಕೇರಳ ಸರ್ಕಾರಗಳು ಅರ್ಜಿ ಸಲ್ಲಿಸಿತ್ತು. ಮೂರು ರಾಜ್ಯಗಳ ಅರ್ಜಿ ವಿಚಾರಣೆ ಇಂದು ಮಧ್ಯಾಹ್ನ ಸುಪ್ರೀಂಕೋರ್ಟ್ ಕೈಗೆತ್ತಿಕೊಳ್ಳಲಿದೆ.
 
ಫೆಬ್ರವರಿ 5, 2007ರಂದು ನ್ಯಾಯಾಧಿಕಾರಣದ ಅಂತಿಮ ತೀರ್ಪು ಹೊರಬಂದಿತ್ತು. ತಮಿಳುನಾಡಿಗೆ 419 ಟಿಎಂಸಿ ನೀರು ಹಂಚಿಕೆಯಾಗಿದ್ದು, ಕರ್ನಾಟಕಕ್ಕೆ ಕೇವಲ 270 ಟಿಎಂಸಿ ನೀರು ಹಂಚಿಕೆಯಾಗಿತ್ತು. ಅಲ್ಲದೆ ಬೆಂಗಳೂರು ಕಾವೇರಿ ಕಣಿವೆ ವ್ಯಾಪ್ತಿಗೆ ಬರುವುದಿಲ್ಲವೆಂದು ತೀರ್ಪು ನೀಡಲಾಗಿತ್ತು. ಈ ತೀರ್ಪಿನಿಂದ ಕರ್ನಾಟಕಕ್ಕೆ ನೀರಿನ ಹಂಚಿಕೆಯಲ್ಲಿ ಭಾರೀ ಅನ್ಯಾಯವಾಗಿದೆ. ತೀರ್ಪು ಪ್ರಶ್ನಿಸಿ 2007ರಲ್ಲಿ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿತ್ತು.
 
 
 
ನೀರಾವರಿ ಉದ್ದೇಶಕ್ಕೆ 418 ಟಿಎಂಸಿ ನೀರು ಕೊಡಿ ಹಾಗೂ ಕುಡಿಯುವ ಉದ್ದೇಶಕ್ಕೆ 47 ಟಿಎಂಸಿ ನೀರು ನೀಡಿ ಎಂದು ಬೇಡಿಕೆ ಇಟ್ಟಿದ್ದರು. ತಮಿಳುನಾಡಿಗೆ ಬೆಳೆಗೆ ಬೇಕಿರೋ ನೀರಿನ ಪರಿಗಣನೆ ಬೇಡ. ತಮಿಳುನಾಡಿಗೆ ಹಂಚಿಕೆ ಮಾಡಿರೋ ನೀರು ಕಡಿಮೆ ಮಾಡಿ. ಅಂತೆಯೇ ಕಾವೇರಿ ನೀರು ನಿರ್ವಹಣಾ ಮಂಡಳಿ, ನಿಯಂತ್ರಣ ಸಮಿತಿ ರಚನೆ ಬೇಡ ಅಂತ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

LEAVE A REPLY

Please enter your comment!
Please enter your name here