ಕಾವೇರಿ ವಿವಾದದಲ್ಲಿ ಮಧ್ಯಪ್ರವೇಶಿಸಿ: ಸಿಎಂ

0
267

ರಾಷ್ಟ್ರೀಯ ಪ್ರತಿನಿಧಿ ವರದಿ
ಕಾವೇರಿ ನೀರಿನ ವಿವಾದದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ. ಕಾವೇರಿ ವಿವಾದದಲ್ಲಿ ಮಧ್ಯಪ್ರವೇಶಿಸುವಂತೆ ಸಿಎಂ ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾರೆ.
 
 
ಪತ್ರದಲ್ಲಿ ಏನಿದೆ?
ಕಾವೇರಿ ವಿವಾದದ ಬಗ್ಗೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆಯುವಂತೆ ಸಿಎಂ ಮನವಿ ಮಾಡಿದ್ದಾರೆ. 15,000 ಕ್ಯೂಸಕ್ಸ್ ನೀರು ಹರಿಸಲು ಸುಪ್ರೀಂಕೋರ್ಟ್ ಆದೇಶಿಸಿದೆ. ಹೀಗಾಗಿ ಸುಪ್ರೀಂಕೋರ್ಟ್ ಆದೇಶದಿಂದ ಕರ್ನಾಟದಲ್ಲಿ ಗೊಂದಲ ಸೃಷ್ಠಿಯಾಗಿದೆ. ಕಾವೇರಿ ಕಣಿವೆ ಪ್ರದೇಶ, ಬೆಂಗಳೂರಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇ ರೀತಿ ನೀರು ಹರಿಸಿದರೆ ಕುಡಿಯಲು ನೀರು ಇರಲ್ಲ. ಬೆಂಗಳೂರು ನಗರಕ್ಕಷ್ಟೇ ಅಲ್ಲದೇ ರೈತರಿಗೂ ತೀವ್ರ ಕಷ್ಟವಾಗುತ್ತದೆ. ತಮಿಳುನಾಡಿನ ಮೆಟ್ಟೂರು ಡ್ಯಾಂನಲ್ಲಿ ನೀರು ಸಂಗ್ರಹವಿದ್ದು, ನೈಋತ್ಯ ಮಾನ್ಸೂನ್ ಮಳೆ ಸುರಿದಿದೆ. ಸಾಂಬಾ ಬೆಳೆಗೆ ಬೇಕಿರುವುದಕ್ಕಿಂತಲೂ ಹೆಚ್ಚು ನೀರಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
 
 
ಸೆ.6ರಂದು ಕರ್ನಾಟಕದಲ್ಲಿ ಸರ್ವಪಕ್ಷಗಳ ಸಭೆ ನಡೆದಿತ್ತು. ಸಭೆ ವೇಳೆ ರಾಜ್ಯ ಬಿಜೆಪಿ ನೀರು ಹರಿಸದಂತೆ ಆಗ್ರಹಿಸಿದ್ದರು. ಕೋರ್ಟ್ ಆದೇಶ ಪಾಲಿಸದಂತೆ ರಾಜ್ಯ ಬಿಜೆಪಿ ಆಗ್ರಹಿಸಿತ್ತು. ಆದರೆ ಸಾಂವಿಧಾನಿಕ ಪ್ರತಿನಿಧಿಯಾದ ನಾನು ಪಾಲಿಸಿದ್ದೇನೆ. ಸುಪ್ರೀಂ ಆದೇಶದಂತೆ ಕಾವೇರಿ ನೀರು ಬಿಡುಗಡೆಯಾಗಿದೆ. ಇದರಿಂದಾಗಿ ರಾಜ್ಯದಲ್ಲಿ ಮತ್ತಷ್ಟು ಬಿಗುವಿನ ವಾತಾವರಣ ಸೃಷ್ಠಿಯಾಗಿದೆ. ಪ್ರತಿಭಟನೆಗಳಿಂದಾಗಿ ರಾಜ್ಯದ ಆರ್ಥಿಕತೆ ಮೇಲೆ ಪರಿಣಾಮ ಬೀರುತ್ತಿದೆ. ಮುಖ್ಯವಾಗಿ ತಾಂತ್ರಿಕ ಆರ್ಥಿಕತೆ ಮೇಲೆ ದೊಡ್ಡ ಪರಿಣಾಮ ಬೀಳುತ್ತಿದೆ. ಹೆಚ್ಚು ಆದಾಯ ತಂದು ಕೊಡುವ ಐಟಿ ಕ್ಷೇತ್ರಕ್ಕೆ ತೊಂದರೆಯಾಗಲಿದೆ. ಬಿಗುವಿನ ಸ್ಥಿತಿಯಿಂದ ಜನಸಾಮಾನ್ಯರು ಬದುಕಲು ಕಷ್ಟಕರವಾಗಿದೆ ಎಂದು ಸಿಎಂ ಪತ್ರದಲ್ಲಿ ತಿಳಿಸಿದ್ದಾರೆ.
 
 
 
ನೀವು ಪ್ರಧಾನಿಯಲ್ಲದೇ, ಒಕ್ಕೂಟದ ಮುಖ್ಯಸ್ಥರಾಗಿದ್ದೀರಿ. ಹೀಗಾಗಿ ಮುಖ್ಯಮಂತ್ರಿಗಳ ಸಭೆ ಕರೆದು ಚರ್ಚೆ ನಡೆಸಬೇಕು. 1995ರಲ್ಲೂ ಇದೇ ರೀತಿಯ ಸಂದರ್ಭದಲ್ಲಿ ಮಧ್ಯಪ್ರವೇಶವಾಗಿತ್ತು. ಈ ಸಂಬಂಧ ನಿಮ್ಮ ಪ್ರತಿಕ್ರಿಯೆಗಾಗಿ ಕಾಯುತ್ತಿರುತ್ತೇನೆ ಎಂದು ಸಿಎಂ ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here