ದೇಶಪ್ರಮುಖ ಸುದ್ದಿರಾಜ್ಯವಾರ್ತೆ

ಕಾವೇರಿ ಕೊಳ್ಳದಲ್ಲಿ ಕೇಂದ್ರ ತಂಡ

ಮಂಡ್ಯ ಪ್ರತಿನಿಧಿ ವರದಿ
ಕೇಂದ್ರ ಜಲಆಯೋಗದ ಅಧ್ಯಕ್ಷ ಜಿ ಎಸ್ ಝಾ ನೇತೃತ್ವದ ತಂಡ ಕಾವೇರಿಕೊಳ್ಳದಲ್ಲಿ ವಾಸ್ತವತೆ ತಿಳಿಯಲು ತಜ್ಷರತಂಡ ಪ್ರವಾಸ ಕೈಗೊಂಡಿದೆ. ನಿನ್ನೆ ಕೆಆರ್ ಎಸ್, ಹೇಮಾವತಿ ಜಲಾಶಗಳಲ್ಲಿ ಪರಿಶೀಲನೆ ನಡೆಸಿದೆ.
 
 
ತಾಂತ್ರಿಕ ಉನ್ನತಾಧಿಕಾರ ತಂಡದ ಇಂದಿನ ಪ್ರವಾಸದ ವಿವರ:
ಇಂದು ಬೆಳಗ್ಗೆ 9 ಗಂಟೆಗೆ ಕೆಆರ್ ಎಸ್ ಜಲಾಶಯದ ವೀಕ್ಷಣೆ ನಡೆಸಲಿದೆ. ನಂತರ ಹೆಲಿಕಾಪ್ಟರ್ ಮೂಲಕ ಕೆ ಆರ್ ಪೇಟೆಗೆ ಪ್ರಯಾಣಿಸಲಿದೆ.
ಕೆಆರ್ ಪೇಟೆ ತಾಲೂಕಿನ ಮುರುಕಹಳ್ಳಿ, ತೆಂಡೆಕೆರೆಗೆ ಭೇಟಿ ನೀಡಲಿದ್ದಾರೆ. ಬಳಿಕ ಪಾಂಡವಪುರ ತಾಲೂಕಿನ ಅಶೋಕನಗರ ಗ್ರಾಮ, ಚಿನಕುರಳಿ ಗ್ರಾಮದಲ್ಲಿ ಕೇಂದ್ರ ತಂಡದಿಂದ ಪ್ರವಾಸ ನಡೆಯಲಿದೆ.
 
 
ನಂತರ ತಂಡ ಹಾಸನ ಜಿಲ್ಲೆಯ ಹೊಳೆನರಸೀಪುರಕ್ಕೆ ಪ್ರಯಾಣಿಸಲಿದೆ. ಅಲ್ಲಿ ಹೇಮಾವತಿ ಜಲಾಶಯಗಳನ್ನು ವೀಕ್ಷಿಸಲಿದೆ. ಕೇಂದ್ರ ತಂಡ ಮಧ್ಯಾಹ್ನ ಊಟ ಮುಗಿಸಿ ಅರಕಲಗೂಡು ಹೇಮಾವತಿ ಬಲದಂಡೆ ನಾಲೆಯನ್ನು ವೀಕ್ಷಣೆ ಮಾಡಲಿದೆ. ಬಳಿಕ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ತಂಡ ವಾಪಸ್ ತೆರಳಲಿದೆ.
ಇಂದು ರಾತ್ರಿ 8ಗಂಟೆಗೆ ಮೆಟ್ಟೂರು ಜಲಾಶಯದತ್ತ ಪ್ರಯಾಣಿಸಲಿದೆ.
 
 
ಕೇಂದ್ರ ತಂಡಕ್ಕೆ ಸಾಕ್ಷಾತ್‌ ದರ್ಶನ
ಕಾವೇರಿ ಕಣಿವೆ ಜಲಾಶಯಗಳಲ್ಲಿನ ನೀರಿನ ಸಂಗ್ರಹ ಪ್ರಮಾಣ ಹಾಗೂ ಕೃಷಿ ಚಟುವಟಿಕೆಗಳ ಬಗ್ಗೆ ಪರಿಶೀಲನೆಗೆ ಆಗಮಿಸಿರುವ ಕೇಂದ್ರ ಉನ್ನತಾಧಿಕಾರ ತಾಂತ್ರಿಕ ಸಮಿತಿಯು ಮೊದಲ ದಿನವಾದ ಶುಕ್ರವಾರ ಕೆಆರ್‌ಎಸ್‌ ವ್ಯಾಪ್ತಿಯಲ್ಲಿ ಪ್ರವಾಸ ಕೈಗೊಂಡು ಮಾಹಿತಿ ಸಂಗ್ರಹಿಸಿತು. ಈ ಸಂದರ್ಭದಲ್ಲಿ ಕೇಂದ್ರ ಸಮಿತಿಗೆ ರಾಜ್ಯದ ರೈತರ ಸಂಕಷ್ಟ ಹಾಗೂ ನೀರಿನ ತೀವ್ರ ಕೊರತೆಯ ಸಾಕ್ಷಾತ್‌ ದರ್ಶನ ದೊರೆಯಿತು.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here