ಕಾವೇರಿಗಾಗಿ ಸರ್ವಪಕ್ಷ ಸಭೆ

0
309

 
ಬೆಂಗಳೂರು ಪ್ರತಿನಿಧಿ ವರದಿ
ಇಂದು ಕಾವೇರಿ ಜಲ ವಿವಾದದ ಬಿಕ್ಕಟ್ಟು ಕುರಿತು ಚರ್ಚೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ವಿಧಾನಮಂಡಲದ ಉಭಯ ಸದನಗಳ ನಾಯಕರ ಸಭೆ ಕರೆಯಲಾಗಿದೆ.
 
 
 
ಇಂದು ಮಧ್ಯಾಹ್ನ 12 ಗಂಟೆಗೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಯಲಿದೆ. ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ, ಜೆಡಿಎಸ್ ರಾಜ್ಯಾಧ್ಯಕ್ಷ-ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ, ಕೇಂದ್ರ ಸಚಿವರು, ಕಾವೇರಿ ಜಲಾಯನ ಪ್ರದೇಶಗಳ ಜಿಲ್ಲಾ ಉಸ್ತುವಾರಿ ಸಚಿವರು ಸಭೆಯಲ್ಲಿ ಭಾಗಿಯಾಗಲಿದ್ದಾರೆ.
 
 
 
ಮಳೆಯಿಲ್ಲದೆ ನೀರಿನ ಕೊರತೆ, ತಮಿಳುನಾಡು ನೀರಿಗಾಗಿ ಇಟ್ಟಿರುವ ಬೇಡಿಕೆ ಮತ್ತು ಕರ್ನಾಟಕ ರೈತರ ಹೊರಾಟದ ಕುರಿತು ಸಭೆಯಲ್ಲಿ ಚರ್ಚೆಯಾಗಲಿದೆ. ತಮಿಳುನಾಡಿನ ಒತ್ತಡ ಹಾಗೂ ಕಾನೂನು ಹೋರಾಟದ ಸಮಸ್ಯೆ ಬಗ್ಗೆಯೂ ಚರ್ಚೆ ನಡೆಯಲಿದೆ.
 
 
ಈ ಸಭೆಯಲ್ಲಿ ಕರ್ನಾಟಕ ಸರ್ಕಾರ ಕೈಗೊಳ್ಳಬೇಕಿರೋ ಕ್ರಮಗಳ ಬಗ್ಗೆ ತೀರ್ಮಾನವಾಗುವ ಸಾಧ್ಯತೆ ಇದೆ. ತಮಿಳುನಾಡಿಗೆ ಸ್ವಲ್ಪ ಪ್ರಮಾಣದ ನೀರು ಹರಿಸುವಂತೆ ವಕೀಲ ಫಾಲಿ ನಾರಿಮನ್ ಸಲಹೆ ನೀಡಿದ್ದರು. ಫಾಲಿ ಸಲಹೆ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಲಿದೆ.

LEAVE A REPLY

Please enter your comment!
Please enter your name here