ಕಾಳು ಮೆಣಸು-ಜೀರಿಗೆ ಸಾರು

0
462

 
ವಾರ್ತೆ ರೆಸಿಪಿ
ಬೇಕಾಗುವ ಸಾಮಾನುಗಳು:
1/2 ಚಮಚ ಕಾಳು ಮೆಣಸು 1 ಚ. ಜೀರಿಗೆ, ಬೆಲ್ಲದ ಪುಡಿ, 4 ಬೆಳ್ಳುಳ್ಳಿ ಎಸಳು, 1/4 ಚ.ಅರಸಿನ, 1ಚ. ಸಾಸಿವೆ, ತುಪ್ಪ, ರುಚಿಗೆ ತಕ್ಕಷ್ಟು ಉಪ್ಪು, ನಿಂಬೆ ಗಾತ್ರದಷ್ಟು ಹುಣಸೆ ಹುಳಿ, 10ಎಸಳು ಬೇವಿನೆಲೆ, ಚಿಟಿಕಿ ಇಂಗು.
 
 
ತಯಾರಿಸುವ ವಿಧಾನ :
ಮೊದಲಿಗೆ ಜೀರಿಗೆ ಮತ್ತು ಕಾಳು ಮೆಣಸನ್ನು ಕುಟ್ಟಿ ಪುಡಿ ಮಾಡಿಕೊಳ್ಳಿ. ಹುಣಸೆ ಹಣ್ಣನ್ನು ಕಾಲು ಲೋಟ ಬಿಸಿ ನೀರಿನಲ್ಲಿ ಹತ್ತು ನಿಮಿಷ ನೆನೆಸಿ ಇಟ್ಟು, ಬಳಿಕ ಅದನ್ನು ಹಿಂಡಿ ರಸ ಬೇರ್ಪಡಿಸಿ ಇಟ್ಟುಕೊಳ್ಳಿ. ನಾಲ್ಕು ಲೋಟ ನೀರು ಬಿಸಿ ಮಾಡಿ ಅದರಲ್ಲಿ ಜೀರಿಗೆ,ಕಾಳು ಮೆಣಸಿನ ಪುಡಿ,ಹುಣಸೆ ರಸ ,ಬೆಲ್ಲ ಹಾಕಿ ಕುದಿಸಿ. ಒಗ್ಗರಣೆ ಸೌಟಿನಲ್ಲಿ ತುಪ್ಪ, ಸಾಸಿವೆ,ಅರಸಿನ, ಬೆಳ್ಳುಳ್ಳಿ ಹಾಕಿ ಬಿಸಿ ಮಾಡಿ. ಸಾಸಿವೆ ಚಟಪಟ ಸಿಡಿಯುತ್ತಿದ್ದಂತೆ ಇಂಗು, ಬೇವಿನೆಲೆ ಹಾಕಿ ಕಲಕಿ, ಕುದಿಯುತ್ತಿರುವ ಕಾಳು ಮೆಣಸು, ಜೀರಿಗೆ ನೀರಿಗೆ ಹಾಕಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಕಲಕಿ.ಇನ್ನೂ ಎರಡು ನಿಮಿಷ ಕುದಿಸಿ,ಒಲೆ ಆರಿಸಿ. ನಾಲಗೆಗೆ ರುಚಿ, ದೇಹಕ್ಕೆ ಹಿತವಾದ ಕಾಳು ಮೆಣಸು-ಜೀರಿಗೆ ಸಾರು ತಯಾರಾಯಿತು. ಕಾಳು ಮೆಣಸು,ಜೀರಿಗೆ ಕೆಮ್ಮು,ಕಫಕ್ಕೆ ಅತ್ಯುತ್ತಮ ಔಷಧಿ!

LEAVE A REPLY

Please enter your comment!
Please enter your name here