ಕಾಲ ಅಂತರ್ಜಾಲ ಮಾಧ್ಯಮ ಲೋಕಾರ್ಪಣೆ

0
936

ಮೂಡುಬಿದಿರೆ: ಕಾಲ ಸಮೂಹ ಮಾಧ್ಯಮ ಸಂಸ್ಥೆಯ ಲೋಗೋ ಅನಾವರಣ ಹಾಗೂ ಅಂತರ್ಜಾಲ ಲೋಕಾರ್ಪಣೆ ಇಂದು ಬೆಳಗ್ಗೆ ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ನಡೆಯಿತು, ಖ್ಯಾತ ಹಿರಿಯ ಪತ್ರಕರ್ತ ಹರೀಶ್ ಕೆ ಅದೂರ್ ಅವರ ಮುಖ್ಯಸ್ಥಿಕೆಯನ್ನ ಈ ಸಂಸ್ಥೆ ಹೊಂದಿದ್ದು, ಹರೀಶ್ ಕೆ ಆದೂರು ಸಾರಥ್ಯದ ಮೂರನೇ ಅಂತರ್ಜಾಲ ಮಾಧ್ಯಮ ಇದಾಗಿದೆ, ಈ ಹಿಂದೆ ವಾರ್ತೆ ಹಾಗೂ ಇ-ಕನಸು ಎಂಬ ಎರಡು ಅಂತರ್ಜಾಲ ಮಾಧ್ಯಮಗಳನ್ನ ಜನಮಾನಸಕ್ಕೆ ಪರಿಚಯಿಸಿದ್ದ ಹರೀಶ್ ಕೆ ಆದೂರು , ಇದೀಗ ಕಾಲ ಎಂಬ ಹೊಸ ಅಂತರ್ಜಾಲ ಸುದ್ದಿ ಮಾಧ್ಯಮವನ್ನು ಲೋಕಾರ್ಪಣೆ ಮಾಡಿದ್ದಾರೆ. “ನೋ ನೆಗೆಟೀವ್ ಓನ್ಲೀ ಪಾಸಿಟೀವ್’ ಎಂಬ ಪರಿಕಲ್ಪನೆಯೊಂದಿಗೆ ಮಾಧ್ಯಮ ರಂಗದಲ್ಲಿ ಕ್ರಾಂತಿ ತರುವ ಉದ್ದೇಶವನ್ನ ಕಾಲ ತಂಡ ಹೊಂದಿದೆ.

ಕಾಲ ಅಂತರ್ಜಾಲ ಮಾಧ್ಯಮವನ್ನ ಉದ್ಘಾಟನೆ ಮಾಡಿದ ಆಳ್ವಾಸ್ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಡಾ| ಎಂ. ಮೋಹನ್ ಆಳ್ವ ” ಮಾಧ್ಯಮ ರಂಗ ಬದಲಾಗುವ ಕಾಲ ಬಂದಿದೆ, ಮಾಧ್ಯಮಗಳು ಸಮಾಜವನ್ನ ಕೆಡವುವ ಕೆಲಸ ಮಾಡದೇ ಸಮಾಜವನ್ನ ಕಟ್ಟುವ ಕೆಲಸವನ್ನ ಮಾಡಬೇಕಿದೆ, ಸಮಾಜಮುಖಿ ಚಿಂತನೆಗಳನ್ನ ಜನರಲ್ಲಿ ಮೂಡಿಸಬೇಕಿದೆ, ಮಾಧ್ಯಮಗಳು ಮನುಷ್ಯನ ಕ್ರಿಯಾಶೀಲತೆಯನ್ನ ಹೆಚ್ಚಿಸಬೇಕಿದೆ.” ಎಂದರು.
ಅಧ್ಯಕ್ಷೀಯ ಭಾಷಣ ಮಾಡಿದ ಉಧ್ಯಮಿ ಶ್ರೀಪತಿ ಭಟ್ ಅವರು “ಮಾಧ್ಯಮಗಳು ಕೇವಲ ನಕಾರಾತ್ಮಕ ಚಿಂತನೆಗಳಿಗೆ ವೇದಿಕೆ ಮಾಡದೆ, ಸಕಾರಾತ್ಮಕ ಚಿಂತನೆಗಳನ್ನು ಬಿತ್ತರಿಸಬೇಕಿದೆ, ಈ ನಿಟ್ಟಿನಲ್ಲಿ ಕಾಲ ಶ್ರಮಿಸಬೇಕಿದೆ.” ಎಂದರು.

ಕಾಲ ತಂಡದ ಸಧಸ್ಯರಿಗೆ ಸಮವಸ್ತ್ರ ವಿತರಿಸಿದ ಡಾ| ಕೃಷ್ಣಮೋಹನ ಪ್ರಭು “ಕಾಲ ಬದಲಾಗುತ್ತಲಿರುತ್ತದೆ, ಇಂದಲ್ಲ ನಾಳೆ ಶ್ರಮಿಸಿದವರಿಗೆ ಯಶಸ್ಸು ಸಿಕ್ಕೆ ಸಿಗುತ್ತದೆ, ಮಾಧ್ಯಮ ಕ್ಷೇತ್ರದಲ್ಲಿ ಎರಡು ದಶಕ ದುಡಿದ ಹರೀಶ್ ಆದೂರು ಅವರಿಗೆ ಇದೀಗ ಯಶಸ್ಸಿನ ಗುರಿ ಮುಟ್ಟುವ ಕಾಲ ಬಂದಿದೆ, ಅದರ ಜೊತೆಗೆ ಮಾಧ್ಯಮ ಲೋಕದಲ್ಲಿ ಹೊಸ ಕ್ರಾಂತಿಯ ಕಾಲ ಬಂದಿದೆ” ಎಂದರು.

ಕಾಲ ಸಮೂಹ ಮಾಧ್ಯಮ ಸಂಸ್ಥೆಯ ಸಂಸ್ಥಾಪಕರಾದ ಹರೀಶ್ ಕೆ ಆದೂರು “ಕಳೆದ ಎರಡು ದಶಕಗಳಿಂದ ಮಾಧ್ಯಮದ ಎಲ್ಲಾ ರಂಗಗಳಲ್ಲಿ ದುಡಿದಿದ್ದೇನೆ, ಮಾಧ್ಯಮದಲ್ಲಿ ಕ್ರಾಂತಿ ಮೂಡಿಸುವ ಮೊದಲ ಹೆಜ್ಜೆ ಕಾಲ ಅಂತರ್ಜಾಲ ಮಾಧ್ಯಮ, ಕಾಲ ಕೇವಲ ಅಂತರ್ಜಾಲ ಮಾಧ್ಯಮಕ್ಕೆ ಸೀಮಿತವಾಗಿರದೆ ಸುದ್ದಿ ವಾಹಿನಿಯೂ ಆಗಲಿದೆ, ನಾವು ಹೊಸತನದ ಅನ್ವೇಷಣೆಯ ಜೊತೆ ಜೊತೆಗೆ ವಸ್ತುನಿಷ್ಠತೆಯನ್ನೂ ಹೊತ್ತು ತರಲಿದ್ದೇವೆ” ಎಂದರು.

ಉಳಿದಂತೆ ರಾಘವೇಂದ್ರ ಯು.ಜಿ ವೇದಿಕೆಯನ್ನ ಹಂಚಿಕೊಂಡರು, ದಿವ್ಯವರ್ಮ ಸ್ವಾಗತ ಭಾಷಣ ಹಾಗೂ ರೇಷ್ಮಾ ಅವರು ವಂದನಾರ್ಪಣೆ ಮಾಡಿದರು, ನಾಗರಾಜ್ ಬಾಳೆಗದ್ದೆ ನಿರೂಪಣೆ ನಡೆಸಿಕೊಟ್ಟರು.

Advertisement

LEAVE A REPLY

Please enter your comment!
Please enter your name here