ಕಾಲೇಜು ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು

0
526

ಮ0ಗಳೂರು ಪ್ರತಿನಿಧಿ ವರದಿ
ಕರಾವಳಿ ಉತ್ಸವದ ಅಂಗವಾಗಿ ನಡೆಯಲಿರುವ ಕರಾವಳಿ ಯುವ ಉತ್ಸವ 2016ರ ಸಂಬಂಧ ಕಾಲೇಜು ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲು ಉದ್ದೇಶಿಸಲಾಗಿದೆ.
 
 
ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಕಾಲೇಜು ವಿದ್ಯಾರ್ಥಿಗಳಿಗೆ ದೊಡ್ಡ ಪ್ರಮಾಣದಲ್ಲಿ ಅಯೋಜಿಸಲಾಗುತ್ತಿರುವ ಯುವಜನೋತ್ಸವಕ್ಕೆ ಕಾಲೇಜುಗಳು ತಮ್ಮ ಕಾಲೇಜಿನ ವಿದ್ಯಾರ್ಥಿಗಳನ್ನು ಸ್ಪರ್ಧೆಗಳಲ್ಲಿ ಭಾಗವಹಿಸಲು ವಿನಂತಿಸಲಾಗಿದೆ. ಭಾಗವಹಿಸುವ ಸ್ಪರ್ಧಿಗಳ ಹಾಗೂ ತಂಡದ ವ್ಯವಸ್ಥಾಪಕರ ಹೆಸರು , ಮೊಬೈಲ್ ಸಂಖ್ಯೆ ಒಳಗೊಂಡಿರುವ ವಿವರಗಳನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರು ರಥಬೀದಿ ಇಲ್ಲಿನ ಈ-ಮೇಲ್ gಜಿgಛಿmಛಿeveಟಿಣ[email protected]ಚಿiಟ.ಛಿom ವಿಳಾಸಕ್ಕೆ ಕಳುಹಿಸಬೇಕು.
 
 
ಡಿ. 21 ಮತ್ತು 22 ರಂದು ಸ್ಪರ್ದೆಯ ಆಡಿಷನ್ ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ. ಆಯ್ಕೆಯಾದ ಸ್ಪರ್ಧಿಗಳಿಗೆ / ತಂಡಗಳಿಗೆ ಕರಾವಳಿ ಯುವ ಉತ್ಸವ 2016 ರಲ್ಲಿ ಪ್ರದರ್ಶನಕ್ಕೆ ಅವಕಾಶ ನೀಡಲಾಗುವುದು. ತಂಡ ಪ್ರಶಸ್ತಿಗೆ ಟ್ರೋಫಿ, ಪ್ರಮಾಣ ಪತ್ರದೊಂದಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ವಿಜೇತರಿಗೆ ನಗದು ಬಹುಮಾನವಿದೆ. ಇದಲ್ಲದೇ, ಕರಾವಳಿಯ ಅತ್ಯುತ್ತಮ ಕಾಲೇಜು-2016, ಕರಾವಳಿ ವರ್ಷದ ವ್ಯಕ್ತಿಯಾಗಿ ಕರಾವಳಿ ಯುವ ಉತ್ಸವ ಅತ್ಯುತ್ತಮ ಪ್ರತಿಭೆ ಯುವಕ -2016 ಮತ್ತು ಯುವತಿ 2016 ಪ್ರಶಸ್ತಿಗಳನ್ನು ಸಹ ನೀಡಲಾಗುವುದು. ಯುವ ಉತ್ಸವವನ್ನು ಡಿಸಂಬರ್ 29 ಮತ್ತು 30ರಂದು ಕದ್ರಿ ಪಾರ್ಕಿನ ರಂಗ ಮಂದಿರದಲ್ಲಿ ನಡೆಸಲಾಗುವುದು.

LEAVE A REPLY

Please enter your comment!
Please enter your name here