ಕಾಲೇಜು ಕ್ಯಾಂಪಸ್ ಗೆ ಮುಕ್ತ ಪ್ರವೇಶವಿಲ್ಲ

0
208

ಬೆಂಗಳೂರು ಪ್ರತಿನಿಧಿ ವರದಿ
ಇನ್ಮುಂದೆ ರಾಜ್ಯದ ಪದವಿ ಕಾಲೇಜು ಕ್ಯಾಂಪಸ್ ಗಳಿಗೆ ಹೊರಗಿನವರಿಗೆ ಮುಕ್ತ ಪ್ರವೇಶವಿಲ್ಲ. ಕಾಲೇಜು ಶಿಕ್ಷಣ ಇಲಾಖೆ, ಕಾಲೇಜು ಕ್ಯಾಂಪಸ್ ಒಳಗೆ ಹೊರಗಿನವರು ಪ್ರವೇಶಿಸಬಾರದೆಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.
 
 
ಒಳಗೆ ಪ್ರವೇಶಿಸುವವರು ಪ್ರಾಂಶುಪಾಲರ ಸಮ್ಮತಿ ತೆಗೆದುಕೊಳ್ಳದೆ ಒಳಹೋದರೆ ಹತ್ತಿರದ ಪೊಲೀಸ್ ಸ್ಟೇಷನ್ ಗೆ ಹೋಗಬೇಕಾಗುತ್ತದೆ. ಡಿಗ್ರಿ ಕಾಲೇಜುಗಳಲ್ಲಿ ಅಧ್ಯಯನ ಮಾಡುವ ಹೆಣ್ಣು ಮಕ್ಕಳ ರಕ್ಷಣೆಗೆ ಈ ಕ್ರಮ ತೆಗೆದುಕೊಳ್ಳಲಾಗಿದೆ.ಈ ಸಂಬಂಧ ಅಧಿಕೃತ ಪ್ರಕಟಣೆ ಸದ್ಯದಲ್ಲಿಯೇ ಕಾಲೇಜುಗಳನ್ನು ತಲುಪಲಿದೆ.

LEAVE A REPLY

Please enter your comment!
Please enter your name here