ಕಾರ್ಯಾಗಾರ

0
365

 
ಉಡುಪಿ ಪ್ರತಿನಿಧಿ ವರದಿ
ಕರ್ನಾಟಕ ರಾಜ್ಯ ಭಾಲಭವನ ಸೊಸೈಟಿ(ರಿ.) ಬೆಂಗಳೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಡುಪಿ, ಜಿಲ್ಲಾ ಭವನ ಸಮಿತಿ ಉಡುಪಿ ಹಾಗೂ ತಾಲೂಕು ಆರೋಗ್ಯಾಧಿಕಾರಿ ಕಚೇರಿ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಸರ್ಕಾರಿ ಶಾಲಾ ಮಕ್ಕಳ ಸಂಗೀತ, ನೃತ್ಯ, ಕಲೆ ಕ್ಷೇತ್ರಗಳ ಎರಡು ದಿನದ ಕಾರ್ಯಾಗಾರ ಸೋಮವಾರ ಉಡುಪಿಯ ಜಿಲ್ಲಾ ಬಾಲಭವನದಲ್ಲಿ ನಡೆಯಿತು.
 
udupi karyagara1
 
ಕಾರ್ಯಾಗಾರದಲ್ಲಿ ಸುಮಾರು 200 ಮಕ್ಕಳು ಭಾಗವಹಿಸಿದ್ದು, ಸಂಗೀತ ಕುರಿತು ಪವನ್ ಆಚಾರ್, ನೃತ್ಯ ಕುರಿತು ಭಾಗ್ಯಲಕ್ಷ್ಮಿ ಉಪ್ಪೂರು, ಕರಕುಶಲ ಕಲೆ ಕುರಿತು ಸುಮತಿ ಕಾಮತ್, ಜೇಡಿಮಣ್ಣಿನ ಕಲೆ ಕುರಿತು ರೋಹಿತ್ ಕುಮಾರ್, ಚಿತ್ರಕಲೆ ಕುರಿತು ದಿನಮಣಿ ಶಾಸ್ತ್ರಿ ಅವರು ಮಕ್ಕಳಿಗೆ ತರಬೇತಿ ನೀಡಿದರು.
ತಾಲೂಕು ವೈದ್ಯಾಧಿಕಾರಿಗಳ ಕಚೇರಿಯಿಂದ ಮಕ್ಕಳಿಗೆ ಆರೋಗ್ಯದ ಕುರಿತು ರಸಪ್ರಶ್ನೆ ಕಾರ್ಯಕ್ರಮ ನಡೆಸಿ, ಬಹುಮಾನ ವಿತರಿಸಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ ನಿದರ್ೇಶಕ ಗ್ರೇಸಿ ಗೋನ್ಸಾಲ್ವಿಸ್ ಶಿಬಿರ ಉದ್ಘಾಟಿಸಿದರು.

LEAVE A REPLY

Please enter your comment!
Please enter your name here