ಕಾರ್ಯಾಗಾರ

0
362

ಮ0ಗಳೂರು ಪ್ರತಿನಿಧಿ ವರದಿ
ಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ಜಂಟಿ ನಿರ್ದೇಶಕರ ಕಛೇರಿ, ಮಂಗಳೂರು ವಲಯದ ವತಿಯಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರು, ರಥಬೀದಿ, ಇವರ ಆಶ್ರಯದಲ್ಲಿ ಮಾ. 04 ರಂದು ಉಡುಪಿ, ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಯ ವಿವಿಧ ಸರ್ಕಾರಿ ಕಾಲೇಜುಗಳ ಪ್ರಾಂಶುಪಾಲರು ಹಾಗೂ ನ್ಯಾಕ್ / ಐಕ್ಯೂಎಸಿ ಸಂಯೋಜಕರಿಗೆ ಒಂದು ದಿನದ ನ್ಯಾಕ್ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.
 
 
 
ಮಂಗಳೂರಿನ ಸಂತ ಅಲೋಶಿಯಸ್ ಸ್ವಾಯತ್ತ ಕಾಲೇಜಿನ ಕುಲಸಚಿವರಾದ ಪ್ರೊ. ಎ. ಎಂ ನರಹರಿಯವರು ಈ ಕಾರ್ಯಾಗಾರವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ, ತಮ್ಮ ಉದ್ಘಾಟನಾ ಭಾಷಣದಲ್ಲಿ “ಸರ್ಕಾರಿ ಕಾಲೇಜುಗಳಲ್ಲಿ ಅತ್ಯುತ್ತಮ ಅನುಭವವುಳ್ಳ ಮಾನವ ಸಂಪನ್ಮೂಲವಿದೆ. ಎಲ್ಲಾ ಉಪನ್ಯಾಸಕರು ಒಂದು ತಂಡವಾಗಿ ಬದ್ಧತೆಯಿಂದ ಹಾಗೂ ಆತ್ಮ ವಿಶ್ವಾಸದಿಂದ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿದರೆ ನ್ಯಾಕ್ ಮೌಲ್ಯಮಾಪನವನ್ನು ಯಶಸ್ವಿಯಾಗಿ ಎದುರಿಸಿ ಉನ್ನತ ಶ್ರೇಣಿ ಪಡೆಯಬಹುದು” ಎಂಬ ಸಂದೇಶ ಕೊಟ್ಟರು.
 
 
ಕಾಲೇಜು ಶಿಕ್ಷಣ ಇಲಾಖೆಯ ಮಂಗಳೂರು ವಲಯದ ಜಂಟಿನಿರ್ದೇಶಕರಾದ ಪ್ರೊ. ಎ.ಹೆಚ್. ಫಾರೂಕಿಯವರು ಮಾತನಾಡಿ ಈಗಾಗಲೇ ನ್ಯಾಕ್‍ನಿಂದ ಮಾನ್ಯತೆ ಹೊಂದಿದ, ಹೊಂದಬೇಕಾಗಿರುವ ಹಾಗೂ ನೂತನವಾಗಿ ಆರಂಭಗೊಂಡ ಸರಕಾರಿ ಕಾಲೇಜುಗಳು ನ್ಯಾಕ್‍ನಿಂದ ಉತ್ತಮ ಗ್ರೇಡ್ ಪಡೆಯಲು ವಹಿಸಿಬೇಕಾದ ಸಲಹೆಗಳನ್ನು ನೀಡಿ ಪ್ರಾಂಶುಪಾಲರುಗಳು ಕಾಲೇಜನ್ನು ಒಂದು ತಂಡವಾಗಿ ಪರಿಗಣಿಸಿ ಕಾರ್ಯನಿರ್ವಹಿಸಬೇಕಾದ ಅಗತ್ಯತೆಯನ್ನು ವಿವರಿಸಿದರು ಅಲ್ಲದೇ ಆಂತರಿಕ ಗುಣಮಟ್ಟ ಭರವಸಾ ಕೋಶ ಮಹತ್ವವನ್ನು ವಿವರಿಸಿ ಶೈಕ್ಷಣಿಕ ಗುಣಮಟ್ಟ ಕಾಪಾಡುವ ನಿಟ್ಟಿನಲ್ಲಿ ಐಕ್ಯೂಎಸಿ ಸಂಯೋಜಕರು ವಹಿಸಬೇಕಾದ ಜವಾಬ್ದಾರಿ, ನಿರ್ವಹಿಸಬೇಕಾದ ವಿವಿಧ ಕೋಶ, ಸಮಿತಿಗಳು ಹಾಗೂ ಇಡಬೇಕಾದಂತಹ ದಾಖಲೆಗಳ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡಿದರು ಮತ್ತು ಹಮ್ಮಿಕೊಳ್ಳಬೇಕಾದ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.
 
ತರಬೇತಿದಾರರಾಗಿ 28 ಕಾಲೇಜುಗಳಿಗೆ ನ್ಯಾಕ್ ಪರಿಶೀಲನಾ ಸದಸ್ಯರಾಗಿ ಕಾರ್ಯನಿರ್ವಹಿಸಿ ಅಪಾರ ಅನುಭವ ಹೊಂದಿದ ಸ್ಥಳೀಯ ಸಂತ ಆನ್ಸ್ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರಾದ ಸಿಸ್ಟರ್ ಸಿ. ಕ್ಲೇರ್ ಮಿನೇಜಸ್ ಇವರು ತರಬೇತಿ ನೀಡಿ ನ್ಯಾಕ್ ಪರಿಶೀಲನೆಗೆ ಮಾಡಬೇಕಾದ ತಯಾರಿ, ದಾಖಲೀಕರಣದ ಬಗ್ಗೆ ಅತ್ಯುತ್ತಮ ಮಾಹಿತಿ ನೀಡಿದರು.
 
ಲೀಡ್ ಕಾಲೇಜು ಪ್ರಾಂಶುಪಾಲರಾದ ಪ್ರೊ. ರಾಜಶೇಕರ್ ಹೆಬ್ಬಾರ್ ಸಿ. ಇವರು ಆರಂಭದಲ್ಲಿ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿ ಮಧ್ಯಾಹ್ನದ ಅವಧಿಯಲ್ಲಿ ದಾಖಲೆಗಳ ನಿರ್ವಹಣೆ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಜಂಟಿ ನಿರ್ದೇಶಕರ ಕಛೇರಿಯ ಲೆಕ್ಕ ಪತ್ರ ವಿಭಾಗದ ಅಧೀಕ್ಷಕರಾದ ಗಣೇಶ್ ನಾಯಕ್, ಅಧಿಕಾರಿಗಳಾದ ಸುಮುಖ ಆರ್ಯ, ನವೀನ್‍ಚಂದ್ರ ಅವರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here