ಕಾರ್ಯಾಗಾರ

0
426

ವರದಿ: ಶ್ಯಾಮ್ ‍ಪ್ರಸಾದ್ ಬದಿಯಡ್ಕ
ಹೊಸ ಆರ್ಥಿಕ ವ್ಯವಸ್ಥೆಗೆ ನಮ್ಮನ್ನು ನಾವು ಹೊಂದಿಸಿಕೊಳ್ಳುವುದು ಹೇಗೆ ಎಂಬ ವಿಷಯದಲ್ಲಿ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಅಧ್ಯಾಪಕ ವೃಂದಕ್ಕೆ ಮಾಹಿತಿ ಶಿಬಿರವನ್ನು ಗುರುವಾರ ಸಂಜೆ ನಡೆಸಲಾಯಿತು.
 
 
ಸಂಪನ್ಮೂಲ ವ್ಯಕ್ತಿಯಾಗಿ ಡಿ.ಸಿ.ಎಸ್. ಶಾಲಾ ಮಾಲಿಕೆಯ ಲೆಕ್ಕಪರಿಶೋಧಕ ಕಾರ್ತಿಕೇಯ ತರಗತಿಯನ್ನು ನಡೆಸಿ ಸರಕಾರದ ತೀರ್ಮಾನದಿಂದ ಮುಂದಿನ ಕೆಲವು ವರ್ಷಗಳಲ್ಲಿ ದೇಶದ ಆರ್ಥಿಕತೆಯಲ್ಲಿ ಅಪಾರ ಅಭಿವೃದ್ಧಿ ಉಂಟಾಗಲಿದೆ ಎಂದರು.
 
 
ಈ ವ್ಯವಸ್ಥೆಗೆ ನಮ್ಮನ್ನು ನಾವು ಹೊಂದಿಕೊಳ್ಳುವ ಬಗ್ಗೆ ಸೂಕ್ತ ಮಾಹಿತಿಗಳನ್ನು ಒದಗಿಸಿದರು. ನಗದು ವ್ಯವಹಾರ ಮತ್ತು ನಗದುರಹಿತ ವ್ಯವಹಾರಗಳ ಸ್ಥೂಲ ಚಿತ್ರಣವನ್ನು ಒದಗಿಸಿದರು. ಶಾಲಾ ಸಂಚಾಲಕ ಜಯಪ್ರಕಾಶ ಪಜಿಲ ಸ್ವಾಗತಿಸಿ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಧನ್ಯವಾದವನ್ನಿತ್ತರು.

LEAVE A REPLY

Please enter your comment!
Please enter your name here