ಮ0ಗಳೂರು ಪ್ರತಿನಿಧಿ ವರದಿ
ಜುಲೈ 3 ರಂದು ಅಪರಾಹ್ನ ಗಂಟೆ 2-30 ಕ್ಕೆ ಜಿಲ್ಲಾ ವೆನ್ಲಾಕ್ ಆಸ್ಪತ್ರೆ, ಮಕ್ಕಳ ವಿಭಾಗದ ಆರ್.ಎ.ಪಿ.ಪಿ.ಸಿ. ಸಭಾಂಗಣದಲ್ಲಿ ಕೆ.ಪಿ.ಎಂ.ಇ.ಎ ನೋಂದಣಿ ಹಾಗೂ ನವೀಕರಿಸುವ ಕುರಿತು ದಕ್ಷಿಣಕನ್ನಡ ಜಿಲ್ಲೆಯ ಎಲ್ಲಾ ಖಾಸಗಿ ಆಯುಷ್ ಆಸ್ಪತ್ರೆಗಳು ಹಾಗೂ ನೋಂದಾಯಿತ ಆಯುಷ್ ವೈದ್ಯರುಗಳಿಗೆ ಮಾಹಿತಿ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ.
ಸಂಪನ್ಮೂಲ ವ್ಯಕ್ತಿಗಳಾಗಿ ಮಂಗಳೂರು ತಾಲ್ಲೂಕು ಆರೋಗ್ಯಾಧಿಕಾರಿ ಡಾ||ನವೀನ್ ಕುಲಾಲ್, ಹಾಗೂ ಆಯುಷ್ ವೈದ್ಯಾಧಿಕಾರಿ ಡಾ: ಮುರಳೀಧರ್ ಆಶ್ರಿತ್ ಇವರು ಭಾಗವಹಿಸಿ ಸೂಕ್ತ ಮಾಹಿತಿ ನೀಡಲಿರುವರು. ಜಿಲ್ಲೆಯ ಎಲ್ಲಾ ಆಯುಷ್ ವೈದ್ಯರು/ಆಯುಷ್ ಆಸ್ಪತ್ರೆ ಆಡಳಿತಾಧಿಕಾರಿಗಳು ತಪ್ಪದೆ ಹಾಜರಾಗಿ ಈ ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳಬೇಕಾಗಿ ಕೋರಲಾಗಿದೆ.