ಕಾರ್ಯಕ್ರಮ ಸಂಘಟನೆ

0
395

ಶಿಕ್ಷಣ ಚಿಂತನೆ ಅಂಕಣ: ಅರವಿಂದ ಚೊಕ್ಕಾಡಿ

ಮುಂದುವರಿದ ಭಾಗ…

ಆಮಂತ್ರಣ ಪತ್ರಿಕೆ ಹೇಗಿರಬೇಕು?
ಅನೇಕ ಬಗೆಯ ವರ್ಣರಂಜಿತವಾದ ಆಮಂತ್ರಣ ಪತ್ರಿಕೆಗಳು, ಅಲಂಕಾರವೇ ತುಂಬಿದ ಆಮಂತ್ರಣ ಪತ್ರಿಕೆಗಳು, ಚಿತ್ರಗಳೇ ತುಂಬಿದ ಆಮಂತ್ರಣ ಪತ್ರಿಕೆಗಳು, ಊಟಕ್ಕೆ ಬಳಸುವ ಎಲೆಯ ಗಾತ್ರದ ಆಮಂತ್ರಣ ಪತ್ರಿಕೆಗಳು-ಮುಂತಾಗಿ ವಿಚಿತ್ರ ರೀತಿಯ ಆಮಂತ್ರಣ ಪತ್ರಿಕೆಗಳು ಬರುತ್ತಿದೆ. ಆಮಂತ್ರಣ ಪತ್ರಿಕೆಯ ಆದ್ದೂರಿತನವೇ ಪ್ರತಿಷ್ಠೆಯ ವಿಚಾರವಾಗುತ್ತಿದೆ.
 
ಆದರೆ ಯಾವುದೇ ಆಮಂತ್ರಣ ಪತ್ರಿಕೆಯೂ ಅದರ ಗಾಂಭೀರ್ಯವನ್ನು ಕಳೆದುಕೊಳ್ಳಬಾರದು. ಆಮಂತ್ರಣ ಪತ್ರಿಕೆಯು ಅದ್ದೂರಿಯಾಗಿ ಕಾಣಿಸುವುದಕ್ಕಿಂತ ಹೆಚ್ಚಾಗಿ ಅಚ್ಚುಕಟ್ಟಾಗಿ ಕಾಣಿಸಬೇಕು. ಆಮಂತ್ರಣ ಪತ್ರಿಕೆಯು ಬಿಳಿ ಕಾರ್ಡ್ ಅಥವಾ ತೆಳು ವರ್ಣದ ಕಾರ್ಡ್ ಆಗಿದ್ದರೆ ವಿವರಗಳು ಅಹಿತಕರವಲ್ಲದ ಡಾರ್ಕ್ ಬಣ್ಣದಲ್ಲಿ ಮುದ್ರಿತವಾಗಬೇಕು. ಅಕ್ಷರಗಳು ಮಬ್ಬುಮಬ್ಬಾಗದಂತೆ, ಎರಡೆರಡಾಗಿ ಮೂಡಿಬರದಂತೆ ಎಚ್ಚರಿಕೆ ವಹಿಸಬೇಕು.(ಅಕ್ಷರದ ವಿನ್ಯಾಸವೇ ಎರಡೆರಡಾಗಿ ಮೂಡಿಬರುವಂತೆ ಇದ್ದರೆ ಆಗ ಈ ವಿಚಾರವು ಅನ್ವಯಿಸುವುದಿಲ್ಲ). ಬಣ್ಣಗಳು ಎಲ್ಲೆಂದರಲ್ಲಿ ಚೆಲ್ಲಿ ಹೋಗಬಾರದು . ಈ ಎಲ್ಲ ಅಂಶಗಳು ಒಳಗೊಂಡ ಹಾಗೆ ಆಮಂತ್ರಣ ಪತ್ರಿಕೆಯಲ್ಲಿ ಏನೇನಿರಬೇಕು ಎಂದು ನೋಡೋಣ:
1. ಸಂಘಟನೆಗೆ ತನ್ನದೇ ಆದ ಸಂಕೇತವಿದ್ದರೆ ಅದನ್ನು ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಬೇಕು.
2. ಯಾವ ಸಂಘಟನೆಯು ಕಾರ್ಯಕ್ರಮವನ್ನು ನಡೆಸುತ್ತದೆ ಎಂಬುದನ್ನು ಅದರ ಪೂರ್ಣ ಹೆಸರಿನೊಂದಿಗೆ ಮುದ್ರಿಸಬೇಕು.
3. ಸಂಘಟನೆಯ ಯಾವ ಕಾರ್ಯಕ್ರಮವನ್ನು ನಡೆಸುತ್ತಿದೆ ಎನ್ನುವುದು ಸ್ಪಷ್ಟವಾಗಿ ಗೊತ್ತಾಗುವಂತೆ ಮುದ್ರಿಸಬೇಕು.
4. ನಿರ್ದಿಷ್ಟ ಕಾರ್ಯಕ್ರಮವು ಯಾವ ದಿನಾಂಕದಂದು, ಯಾವ ಸ್ಥಳದಲ್ಲಿ, ಎಷ್ಟು ಹೊತ್ತಿಗೆ ನಡೆಯುತ್ತದೆ ಎಂಬುದನ್ನು ಮುದ್ರಿಸಬೇಕು. ಯಾವ ವಾರ ಎಂಬುದನ್ನು ಮುದ್ರಿಸಿದರೆ ಬಹಳ ಒಳ್ಳೆಯದು.
ಸಾಮಾನ್ಯವಾಗಿ ಎಲ್ಲ ಸಂಘಟಕರು ದಿನಾಂಕ ಮತ್ತು ಸ್ಥಳವನ್ನು ಹಾಗೂ ಸಮಯವನ್ನು ಮುದ್ರಿಸುತ್ತಾರೆ. ಆದರೆ ಸಮಯವನ್ನು ಮುದ್ರಿಸುವಾಗ ಮಾತ್ರ ಶೇ. 99ರಷ್ಟು ಆಮಂತ್ರಣ ಪತ್ರಿಕೆಗಳಲ್ಲಿ ಕಾರ್ಯಕ್ರಮ ಪ್ರಾರಂಭವಾಗುವ ಸಮಯವನ್ನು ನಮೂದಿಸಲಾಗುತ್ತದೆ ಹೊರತು ಕಾರ್ಯಕ್ರಮವು ಮುಕ್ತಾಯವಾಗುವ ಸಮಯವನ್ನು ನಮೂದಿಸುವ ಪರಿಪಾಠ ಇಲ್ಲ. ಆದರೆ ಕಾರ್ಯಕ್ರಮ ಮುಕ್ತಾಯವಾಗುವ ಸಮಯವನ್ನೂ ನಮೂದಿಸಬೇಕಾದ ಅಗತ್ಯವಿದೆ. ಯಾಕೆಂದರೆ ಕೆಲವರಿಗೆ, “ನಿರ್ದಿಷ್ಟ ಗಂಟೆಯ ನಂತರ ಬೇರೆಲ್ಲಿಗೋ ಹೋಗಲಿಕ್ಕಿದೆ. ಅದಕ್ಕಿಂತ ಮೊದಲು ಮುಗಿಯುವುದಾದರೆ ಬರಬಹುದು” ಎನ್ನುವಂತಹ ಸ್ಥಿತಿ ಇರುತ್ತದೆ. ಆದ್ದರಿಂದ ಕಾರ್ಯಕ್ರಮ ಪ್ರಾರಂಭವಾಗುವಷ್ಟೇ ಮುಖ್ಯ ಅದು ಮುಗಿಯುವುದು ಕೂಡ. ಅಂದಾಜು ಯಾವ ಘಂಟೆಗೆ ಮುಗಿಯಬಹುದೋ ಅದನ್ನು ನಮೂದಿಸಬೇಕು ಸಮೂದಿಸಿದ ಸಮಯಕ್ಕಿಂತ ಸ್ವಲ್ಪ ಜಾಸ್ತಿ ಅಥವಾ ಕಡಿಮೆ ಆಗುತ್ತದೆ. ಅದು ಸಹಜ:
5. ಕಾರ್ಯಮ್ರಮದಲ್ಲಿ ಅಧ್ಯಕ್ಷರೇ ಮೊದಲಿಗರು. ಆದ್ದರಿಂದ ಅಧ್ಯಕ್ಷರ ಹೆಸರನ್ನೇ ಮೊದಲು ಮುದ್ರಿಸಬೇಕು.
6. ಅಧ್ಯಕ್ಷರು ಯಾರೆಂದು ಸಮೂದಿಸಿದ ನಂತರ ಅತಿಥಿಗಳ ಹೆಸರುಗಳು ಬರಬೇಕು. ನಂತರ ಕೊನೆಯಲ್ಲಿ ಆಹ್ವಾನಿಸುವವರು ಯಾರೆಂದು ಬರಬೇಕು.
 

ಮುಂದುವರಿಯುತ್ತದೆ…

ಅರವಿಂದ ಚೊಕ್ಕಾಡಿ

Advertisement

[email protected]

LEAVE A REPLY

Please enter your comment!
Please enter your name here