ಕಾರ್ಯಕ್ರಮ ಸಂಘಟನೆ

0
1036

 
ಶಿಕ್ಷಣ ಚಿಂತನೆ: ಅರವಿಂದ ಚೊಕ್ಕಾಡಿ

ಮುಂದುವರಿದ ಭಾಗ…

ಸಂಘಟಕರ ಮನೋಭಾವ
ನೀವು ಸಂಘಟಕರಾಗಿದ್ದರೆ ನಿಮ್ಮ ಮನೋಭಾವ ಏನು ಎನ್ನುವುದು ಕೂಡ ಬಹಳ ಮುಖ್ಯವಾಗಿದೆ. ಸಂಘಟಕರಲ್ಲಿರುವ ಮನೊಭಾವವೂ ಕಾರ್ಯಕ್ರಮದ ಯಶಸ್ವಿನಲ್ಲಿ ಪ್ರಮುಖ ಪಾತ್ರ ವಹಸಿಸುತ್ತದೆ. ಸಾಮಾನ್ಯವಾಗಿ ಕಂಡುಬರುವ ಮನೊಭಾವಗಳು ಹೀಗಿರುತ್ತದೆ:
 
* ಒಣ ಪ್ರತಿಷ್ಠೆ ಹಾಗೂ ಇತರರನ್ನು ಕೀಳಾಗಿ ಕಾಣುವ ಸರ್ವಾಧಿಕಾರಿ ಮನೋಭಾವ.
* ಯಾರೋ ಒಬ್ಬರನ್ನು ಅವಲಂಬಿಸಿಕೊಂಡಿರುವ ಅವಲಂಬಿ ಪ್ರವೃತ್ತಿ.
* ಯಾರದೋ ಕಣ್ಣಿಗೆ ಕಾಣುವುದಕ್ಕಾಗಿಯಷ್ಟೇ ಏನನ್ನಾದರೂ ಮಾಡಲು ತೊಡಗುವ ನಾಮಮಾತ್ರ ನಾಯಕತ್ವ ಪ್ರವೃತ್ತಿ.
* ಸದಸ್ಯರ ನಡುವೆ ವಿಚಾರ ಸಹಿತ ಅಸಮಧಾನಗಳು ಇರುವ ಅಸಮಧಾನ ಮತ್ತು ಅಸಂತೋಷದ ಪ್ರವೃತ್ತಿ.
* ಏನನ್ನಾದರೂ ಮಾಡಲು ಯಾರೂ ಆಸಕ್ತಿಯನ್ನು ತಳೆಯದೆ ಇರುವ ಅರಾಜಕ ಪ್ರವೃತ್ತಿ.
* ನಿರ್ದಿಷ್ಟ ವಿಷಯದ ನಿರ್ದಿಷ್ಟ ರೀತಿಯ ಕಾರ್ಯಕ್ಕೆ ಮಾತ್ರ ಸೀಮಿತರಾಗಿದ್ದು ಅದಕ್ಕಿಂತ ಭಿನ್ನವಾದ ಏನನ್ನೂ ನಿರ್ವಹಿಸಲು ಆಗದೆ ಇರುವ ಸ್ಥಿರೀಕೃತ ಕೌಶಲ್ಯದ ಪ್ರವೃತ್ತಿ.
ನಿಜವಾಗಿ ಒಂದು ಸಂಘಟನೆಯು ಯಶಸ್ವಿಯಾಗಬೇಕಾದರೆ ಅಲ್ಲಿ ಪ್ರಜಾಸತ್ತಾತ್ಮಕ ಪ್ರವೃತ್ತಿ ಇರಬೇಕು. ಪ್ರಾಸತ್ತಾತ್ಮಕ ಪ್ರವೃತ್ತಿಯವರು ಯಾವ ರೀತಿ ವರ್ತಿಸುತ್ತಾರೆ? ಇವರು ಒಂದು ಕಾರ್ಯಕ್ರಮದ ಸ್ವರೂಪವನ್ನು ಮೊದಲು ಸ್ಪಷ್ಟಪಡಿಸಿಕೊಳ್ಳುತ್ತಾರೆ. ಉದ್ದೇಶವನ್ನು ಹೇಗೆ ಸಾಧಿಸಬೇಕೆಂದು ಅರ್ಥ ಮಾಡಿಕೊಳ್ಳುತ್ತಾರೆ. ತಾರತಮ್ಯದ ಮನೋಭಾವವನ್ನು ಹೊಂದಿರುವುದಿಲ್ಲ. ಜವಾಬ್ದಾರಿಯನ್ನು ಹಂಚಿಕೆ ಮಾಡಿಕೊಂಡಿರುತ್ತಾರೆ. ಸದಸ್ಯರು ನಾಯಕನ ಸಲಹೆಯನ್ನು ಪಡೆಯುತ್ತಾರೆ. ಆದರೆ ಅವರು ನಾಯಕನ ಅವಲಂಬಿಗಳಾಗಿರುವುದಿಲ್ಲ. ನಾಯಕನಿಗೆ ಇಡೀ ಕಾರ್ಯಕ್ರಮದ ಮೇಲೆ ನಿಯಂತ್ರಣವಿರುತ್ತದೆ. ಆದರೆ ನಾಯಕ ಸದಸ್ಯರ ಸ್ವಾತಂತ್ರ್ಯಕ್ಕೆ ಧಕ್ಕೆ ತರುವುದಿಲ್ಲ. ೀ ನಡವಳಿಕೆ ಯಾವುದೆ ಸಂಘಟನೆಗೆ ಅಗತ್ಯವಾಗಿರುತ್ತದೆ.
 
 
 
ಕಾರ್ಯಕ್ರಮ ನಿರ್ವಾಹಕರ ಅಗತ್ಯಗಳು:
ಕಾರ್ಯಕ್ರಮ ನಿರ್ವಹಣೆಯ ಯಾವುದೇ ಕಾರ್ಯಕ್ರಮದ ಬಹುಮುಖ್ಯ ಅಗತ್ಯವಾಗಿದೆ. ಕಾರ್ಯಕ್ರಮ ನಿರ್ವಹಣೆಯನ್ನು ಹೇಗೆ ಮಾಡಬೇಕು ಎನ್ನುವುದಕ್ಕಿಂತ ಮೊದಲು ಏನನ್ನು ಮಾಡಬಾರದು ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಯಾಕೆಂದರೆ ಕಾರ್ಯಕ್ರಮ ನಿರ್ವಹಣೆಯಲ್ಲಿನ ಎಡವಟ್ಟುಗಳೇ ಸಾಮಾನ್ಯ ರೂಢಿಯಾಗಿದೆ:
* ಅಗತ್ಯವಿದ್ದರೂ ಇಲ್ಲದಿದ್ದರೂ ಉದ್ದುದ್ದಕ್ಕೆ ಸಂಸ್ಕೃತ ಮತ್ತು ಇಂಗ್ಲೀಷ್ ಭಾಷೆಯ ನುಡಿಗಟ್ಟುಗಳನ್ನು ಬಳಸುವುದು.
* ಅಧ್ಯಕ್ಷರ ಅನುಮತಿಯನ್ನು ಪಡೆಯದೆಯೇ ಭಾಷಣಕಾರರಿಗೆ ಭಾಷಣ ನಿಲ್ಲಿಸುವಂತೆ ಸೂಚಿಸುವ ಚೀಟಿಯನ್ನು ಕೊಡುವುದು. ಕೆಲವೊಮ್ಮೆ ಕಾರ್ಯಕ್ರಮ ನಿರ್ವಾಹಕರು ಅಧ್ಯಕ್ಷರಿಗೇನೆ ಚೀಟಿ ಕೊಟ್ಟುಬಿಡುತ್ತಾರೆ.
* ಭಾಷಣಕಾರರು ಭಾಷಣವನ್ನು ಮುಗಿಸಿದ ನಂತರ ಭಾಷಣಕಾರರು ಹೇಳಿದ್ದನೆಲ್ಲ ಮತ್ತೆ ಹೇಳುವುದು. ಒಮದು ರೀತಿಯಲ್ಲಿ ಇದು ಮಾಡಿದ ಭಾಷಣವನ್ನು ಎರಡನೆಯ ಬಾರಿ ಮಾಡಿದಂತಿರುತ್ತದೆ. ಹೀಗೆ ಮರು ಭಾಷಣವನ್ನು ಮಾಡುವಾಗ ಅನೇಕ ಬಾರಿ ಭಾಷಣಕಾರ ಹೇಳಿದ್ದೇ ಒಂದು, ನಿರ್ವಾಹಕರು ಹೇಳುವುದೇ ಇನ್ನೊಂದು ಎಂದೂ ಆಗುತ್ತದೆ.
* ಪ್ರತಿಯೊಬ್ಬರ ಭಾಷಣ ಮುಗಿದಾಗಲೂ ಧನ್ಯಾವದ ಸಮರ್ಪಣೆಯನ್ನು ಮಾಡುವುದು. ‘ಧನ್ಯವಾದ ಸಮರ್ಪಣೆ’ ಎಂದು ಪ್ರತ್ಯೇಕವಾದ ಕಾರ್ಯಕ್ರಮವೇ ಇರುವಾಗ ಹೆಜ್ಜೆ ಹೆಜ್ಜೆಗೂ ಧನ್ಯವಾದ ಸಮರ್ಪಣೆ ಮಾಡುವುದು ಅರ್ಥಪೂರ್ಣವಲ್ಲ.
* ಸಭೆಯ ಸ್ವರೂಪವನ್ನು ಅರ್ಥ ಮಾಡಿಕೊಳ್ಳದೆ ಬೇಕು ಬೇಕಾದ ಹಾಗೆ ಬೇಡದ್ದನ್ನೆಲ್ಲ ಮಾತನಾಡುವುದು.
* ಶಬ್ದಗಳ ಸರಿಯಾದ ಅರ್ಥ ಗೊತ್ತಿಲ್ಲದೆ ಮಾತನಾಡುವುದು.
ಈ ರೀತಿ ಅನೇಕ ಎಡವಟ್ಟುಗಳು ಕಾರ್ಯಕ್ರಮದ ನಿರ್ವಾಹಕರಿಂದ ಆಗುತ್ತದೆ. ಆದ್ದರಿಂದ ಕಾರ್ಯಕ್ರಮದ ನಿರ್ವಹಣೆಯನ್ನು ಹೇಗೆ ಮಾಡಬೇಕು ಎಂದು ಸರಿಯಾಗಿ ತಿಳಿದುಕೊಳ್ಳಬೇಕು.
ಅ. ಕಾರ್ಯಕ್ರಮ ನಿರ್ವಾಹಕನ ಔಚಿತ್ಯವನ್ನು ಅರ್ಥ ಮಾಡಿಕೊಳ್ಳಬೇಕು:
ಕಾರ್ಯಕ್ರಮ ನಿರ್ವಾಹಕರು ಕಾರ್ಯಕ್ರಮದ ನಿಯಂತ್ರಕರಲ್ಲ. ಆದ್ದರಿಂದ ಚೀಟಿಕೊಡುವ ಕಾರ್ಯಕ್ರಮದ ತಿದ್ದುಪಡಿಯನ್ನು ಮಾಡುವ ಅಧಿಕಾರವು ಕಾರ್ಯಕ್ರಮದ ನಿರ್ವಹಕರಿಗೆ ಇರುವುದಿಲ್ಲ. ಈ ಎಲ್ಲಾ ಅಧಿಕಾರಗಳು ಕಾರ್ಯಕ್ರಮದ ಅಧ್ಯಕ್ಷರಿಗೆ ಮಾತ್ರವಿರುತ್ತದೆ. ಸಮಯ ಪಾಲನೆಯ ಜವಾಬ್ದಾರಿಯು ಅಧ್ಯಕ್ಷರದ್ದು. ಭಾಷಣಕಾರರಿಗೆ ಚೀಟಿ ಕಳಿಸಿ ಭಾಷಣವನ್ನು ಮೊಟಕುಗೊಳಿಸಬೇಕು ಎಂದು ಅನಿಸಿದಾಗ ಅಧ್ಯಕ್ಷರ ಸೂಚನೆ ಮೇರೆಗೆ ಮಾತ್ರ ಕಾರ್ಯಕ್ರಮದ ನಿರ್ವಾಹಕರು ಚೀಟಿಯನ್ನು ತಂದು ಕೊಡಬಹುದು ಅಷ್ಟೇ. ಕಾರ್ಯಕ್ರಮ ನಿರ್ವಾಹಕರಿಗೇನಾದರೂ ನಿರ್ಧಾರವನ್ನು ತೆಗೆದುಕೊಳ್ಳಬೇಕೆಂದು ಅನಿಸಿದರೆ ಅದನ್ನು ಸಭೆಯ ಅಧ್ಯಕ್ಷರ ಗಮನಕ್ಕೆ ತಮದು ಅವರ ಅನುಮತಿಯನ್ನು ಪಡೆದ ಮೆಲೆ ನಿರ್ಧಾರವನ್ನು ಅನುಷ್ಠಾನಕ್ಕೆ ತರಬೇಕು. ಯಾವುದನ್ನು ಕೂಡ ಸ್ವತಂತ್ರವಾಗಿ ನಿರ್ಧಾರವನ್ನು ತೆಗೆದುಕೊಂಡು ಅನುಷ್ಠಾನಗೊಳಿಸುವ ಅಧಿಕಾರ ಕಾರ್ಯಕ್ರಮ ನಿರ್ವಾಹಕರಿಗಿರುವುದಿಲ್ಲ.
ಕಾರ್ಯಕ್ರಮದ ಸ್ವರೂಪವನ್ನು ಅರ್ಥಮಾಡಿಕೊಳ್ಳಬೇಕು:
ಪ್ರತಿಯೊಂದು ಕಾರ್ಯಕ್ರಮಕ್ಕೂ ತನ್ನದೆ ಆದ ಸ್ವರೂಪವಿರುತ್ತದೆ. ಆ ಸ್ವರೂಪಕ್ಕೆ ತಕ್ಕಂತಹ ನಡೆವಳಿಕೆಯ ಕಾರ್ಯಕ್ರಮದಲ್ಲಿ ಕಂಡುಬರಬೇಕು. ಯಾರೋ ಒಬ್ಬಭಾಷಣಕಾರನ ಸ್ವರೂಪವನ್ನು ಅರ್ಥಮಾಡಿಕೊಳ್ಳದೆ ಮಾತನಾಡಿದರೆ ಕೇವಲ ಆ ಒಂದು ಭಾಷಣವಷ್ಟೇ ಕೆಡುತ್ತದೆ. ಆದರೆ ಕಾರ್ಯಕ್ರಮದ ಉದ್ದಕ್ಕೂ ಕಾಣಿಸಿಕೊಳ್ಳುವ ಕಾರ್ಯಕ್ರಮ ನಿರ್ವಾಹಕ ಕಾರ್ಯಕ್ರಮಕ್ಕೆ ತಕ್ಕುದಾಗಿ ವರ್ತಿಸದೆ ಇದ್ದರೆ ಇಡೀ ಕಾರ್ಯಕ್ರಮವೇ ಕೆಟ್ಟುಹೋಗುತ್ತದೆ. ಆದ್ದರಿಂದ ಕಾರ್ಯಕ್ರಮ ನಿರ್ವಾಹಕರು ಕಾರ್ಯಕ್ರಮದ ಸ್ವರೂಪವನ್ನು ಅರ್ಥ ಮಾಡಿಕೊಂಡು ಅದಕ್ಕೆ ತಕ್ಕಂತೆ ನಡವಳಿಗೆ ಮತ್ತು ಮಾತಿಗಾರಿಕೆಯನ್ನು ಹೊಂದಿರಬೇಕು.
ಕಾರ್ಯಕ್ರಮದ ರಚನೆಯನ್ನು ತಿಳಿದಿರಬೇಕು:
ಕಾರ್ಯಕ್ರಮದ ನಿರ್ವಹಣೆಯನ್ನು ಸಮಾರಂಭದ ಸಂಪೂರ್ಣ ರಚನೆಯನ್ನು ಬಲ್ಲವರೇ ಮಾಡುವುದು ಅತ್ಯುತ್ತಮ. ಅನಿವಾರ್ಯವಾಗಿ ಅಪರಿಚಿತರು ಅಥವಾ ಅಲ್ಪ ಪರಿಚಿತರನ್ನು ಕಾರ್ಯಕ್ರಮ ನಿರ್ವಾಹಕರಾಗಿ ಕರೆಸಿದೂ ಅವರಿಗೆ ಮೂಮಚಿತವಾಗಿ ಸಂಘಟನೆಯ ಪೂರ್ಣ ಪರಿಚಯ ಮತ್ತು ಕಾರ್ಯಕ್ರಮದ ಹಿನ್ನೆಲೆಯನ್ನು ತಿಳಿಸಿರಬೇಕು. ಕಾರ್ಯಕ್ರಮದ ನಿರ್ವಾಹಕರು ಕಾರ್ಯಕ್ರಮ ಶುರುವಾಗುವಷ್ಟೇ ಕನಿಷ್ಠ ಒಂದು ಗಂಟೆಗೆ ಮೊದಲು ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಬಂದಿರಬೇಕು. ಕಾರ್ಯಕ್ರಮವನ್ನು ಸಂಘಟಿಸಿದವರ ಬಳಿ ಕಾರ್ಯಕ್ರಮದ ಎಲ್ಲ ಹಂತಗಳ ರೂಪುರೇಷೆಯನ್ನು ಕೇಳಿ ತಿಳಿದುಕೊಂಡಿರಬೇಕು. ಯಾವ ಯಾವ ಹಂತದಲ್ಲಿ ವಸವ್ತುಗಳು ಬೇಕು ಎಂದು ತಿಳಿದುಕೊಮಡು ಅವುಗಳ ಕ್ಲಪ್ತ ಸಮಯಕ್ಕೆ ಒದಗುವಂತೆ ವ್ಯವಸ್ಥೆ ಮಾಡಿಕೊಳ್ಳಬೇಕು. ಒಟ್ಟಿನಲ್ಲಿ ಕಾರ್ಯಕ್ರಮ ನಿರ್ವಾಹಕನಿಗೆ ಕಾರ್ಯಕ್ರಮ ಪ್ರಾರಂಭವಾಗುವ ವೇಳೆಗೆ ಅದು ಹೇಗೆ ಮುಂದುವರಿಯುವುದು ಹೇಗೆ ಕೊನೆಗೊಳ್ಳಲಿದೆ ಎಂಬುದರ ಸ್ಪಷ್ಟ ಚಿತ್ರಣ ಇರಬೇಕು.
ಧ್ವನಿ ವಿನ್ಯಾಸ:
ಯಶಸ್ವೀ ಕಾರ್ಯಕ್ರಮ ನಿರ್ವಾಹಕನ ಯಶಸ್ವಿನಲ್ಲಿ ಆತನ ಧ್ವನಿಯೂ ಪ್ರಮುಖ ಪಾತ್ರ ವಹಿಸುತ್ತದೆ. ಗಂಡಸರಿಗೆ ಮೃದುವಾದ ಗಂಭೀರ ಧ್ವನಿ ಅನುಕೂಲಕರವಾಗುತ್ತದೆ. ಹೆಂಗಸರಿಗೆ ಕೋಮಲ ಧ್ವನಿಯೂ ಅನುಕೂಕಾರಿಯಾಗದೆ. ಒಂದೊಮ್ಮೆ ಒಳ್ಳೆಯ ಧ್ವನಿ ವಿನ್ಯಾಸವಿಲ್ಲದೆ ಇದ್ದರೆ ಚಿಂತೆತೇನಿಲ್ಲ. ಉಳಿದ ಅಂಶಗಳು ಚೆನ್ನಾಗಿದ್ದರೆ ಧ್ವನಿಯ ದೌರ್ಬಲ್ಯವು ದೊಡ್ಡ ಸಮಸ್ಯೆಯಾಗುವುದಿಲ್ಲ.
ವಾಚಾಳಿತನ ಇರವಾರದು:
ಕಾರ್ಯಕ್ರಮ ನಿರ್ವಾಹಕರೆಂದರೆ ಕಾರ್ಯಕ್ರಮದ ಒಂದು ಹಂತದಿಂದ ಇನ್ನೊಂದು ಹಂತಕ್ಕೆ ಸಂಪರ್ಕವನ್ನು ಕಲ್ಪಿಸಲು ಇರುವ ಕೊಂಡಿ ಅಷ್ಟೇ. ಆ ರೀತಿಯ ಸಂಪರ್ಕವನ್ನು ಸಾಧಿಸಲು ಎಷ್ಟು ಬೇಕೋ ಅಷ್ಟೇ ಮಾತನಾಡಬೇಕು. ಈ ಹಿನ್ನೆಲೆಯಲ್ಲಿ ಕೆಲವು ಮೂಲಭೂತ ಸಂಗತಿಗಳನ್ನು ತಿಳಿದಿರಬೇಕು.
ಯಾರೂ ಕೂಡ ಕಾರ್ಯಕ್ರಮ ನಿರ್ವಾಹಕರ ಮಾತುಗಳನ್ನು ಕೇಳುವುದಕ್ಕಾಗಿ ಬಂದಿರುವುದಿಲ್ಲ. ಭಾಷಣಕಾರರ ಮಾತುಗಳನ್ನು ಕೇಳಲು ಬಂದಿರುತ್ತಾರೆ. ಆದ್ದರಿಂದ ಭಾಷಣಕಾರರ ಮಾತುಗಳನ್ನು ಕೇಳಿಸುವುದು ಕಾರ್ಯಕ್ರಮ ನಿರ್ವಾಹಕರ ಕರ್ತವ್ಯವಾಗಿರುತ್ತದೆಯೆ ಹೊರತು ತಾನೇ ಮಾತನಾಡುವುದಲ್ಲ.
ಕಾರ್ಯಕ್ರಮ ನಿರ್ವಾಹಕರು ಒಂದು ಹಂತದಿಂದ ಇನ್ನೊಂದು ಹಂತಕ್ಕೆ ಸಂಪರ್ಕ ಕಲ್ಪಿಸುವ ಸಂದರ್ಭದಲ್ಲಿ ಮಿತಿ ಮೀರಿ ಮಾತನಾಡುವುದರಿಂದ ರಸಭಂಗವಾಗುತ್ತದೆ. ಈ ರಸಭಂಗವಾಗದಂತೆ ಕಾರ್ಯಕ್ರಮ ನಿರ್ವಾಹಕರು ಎಚ್ಚರ ವಹಿಸಬೇಕು.
ಒಂದು ಹಂತದಿಂದ ಇನ್ನೊಂದು ಹಂತಕ್ಕೆ ಸಂಪರ್ಕ ಕಲ್ಪಿಸುವುದನ್ನು ಎರಡು ಮೂರು ವಾಕ್ಯಗಳಲ್ಲಿ ಹೇಳಿ ಮುಗಿಸಬೇಕು.
ಪ್ರತಿ ಹಂತದಲ್ಲಿಯೂ ಧನ್ಯವಾದವನ್ನು ಹೇಳಲು ಹೋಗಬಾರದು.
ಒಂದು ಭಾಷಣ ಮುಗಿದ ಮೇಲೆ ಆ ಭಾಷಣದ ವಿವರಗಳನ್ನು ಹೇಳುವುದು ಕೇಳುಗರಿಗೆ ಬೋರ್ ಹೊಡೆಸುತ್ತದೆ. ಅಲ್ಲದೆ ಕಾರ್ಯಕ್ರಮ ನಿರ್ವಾಹಕರ ಬೌದ್ಧಿಕ ಮಟ್ಟಕ್ಕಿಂತ ಪ್ರಬುದ್ಧವಾದ ಭಾಷಣವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಆಗದೆ ತಪ್ಪುತಪ್ಪಾಗಿ ವಿವರಿಸಲು ಹೊರಟರೆ ಆಭಾಸವೂ ಆಶಯವನ್ನು ವಿವರಿಸುವುದು ಮತ್ತು ಭಾಷಣದಲ್ಲಿ ವಿಶೇಷವಾಗಿ ಉಲ್ಲೇಖವಾಗಿ ಅಂಶಗಳಿದ್ದರೆ ಅದನ್ನು ಕಾರ್ಯಕ್ರಮ ನಿರ್ವಾಹಕರು ಹೇಳಬಹುದು. .
ಅರವಿಂದ ಚೊಕ್ಕಾಡಿ
[email protected]
 
 

LEAVE A REPLY

Please enter your comment!
Please enter your name here