ಕಾರ್ಯಕಾರಿಣಿ ಸಭೆ

0
315

ಮಂಗಳೂರು ಪ್ರತಿನಿಧಿ ವರದಿ
ಬಿ.ಜೆ.ಪಿ ಯುವಮೋರ್ಚಾ ದ.ಕ ಜಿಲ್ಲೆಯ ಜಿಲ್ಲಾ ಕಾರ್ಯಕಾರಿಣಿಯು ದಿನಾಂಕ 20/03/2017ರಂದು ಜಿಲ್ಲಾ ಕಚೇರಿಯಲ್ಲಿ ನಡೆಯಿತು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಕಾರ್ಯಕ್ರಮವನ್ನು ಉದ್ಗಾಟಿಸಿದರು.
 
ಸಂಭ್ರಮದ ದಿನದಲ್ಲಿ ನಾವು ಇದ್ದೇವೆ ಎಲ್ಲಾ ಚುನಾವಣೆಯಲ್ಲಿಯೂ ಜನ ಬಿ.ಜೆ.ಪಿ ಯನ್ನು ಬೆಂಬಲಿಸಿ ಹಿಂದುತ್ವ ಮತ್ತು ಅಭಿವೃದ್ಧಿಯ ಮೂಲಕ ಅನೇಕ ರಾಜ್ಯ ಹಾಗೂ ರಾಷ್ಟ್ರದಲ್ಲಿ ಜನ ಸಮನ್ವಯ ವಿಶ್ವಾಸ ಉಳಿಸಿಕೊಂಡು ಅಧಿಕಾರವನ್ನು ನಡೆಸುತ್ತಿದೆ. ಯುವಮೋರ್ಚಾವು ಮುಂದಿನ ಕರ್ನಾಟಕದ ಚುನಾವಣೆಯಲ್ಲಿ ಬಿ.ಜೆ.ಪಿಯನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರುವಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ನಡೆಸಬೇಕು ಎಂದು ತಿಳಿಸಿದರು.
 
 
ಅಧ್ಯಕ್ಷತೆ ವಹಿಸಿದ ಯುವಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್ ಪೂಂಜ ಮುಂದಿನ ದಿನದಲ್ಲಿ ಸಂಘಟನಾತ್ಮಕವಾಗಿ ಕಾರ್ಯಕರ್ತರ ನಿರ್ಮಾಣವನ್ನು ಮಾಡಲು ಯಾವ ರೀತಿಯ ಕಾರ್ಯಕ್ರಮ ಮತ್ತು ಕಾರ್ಯ ಯೋಜನೆಯನ್ನು ಮಾಡಲಿದೆ ಎಂದು ತಿಳಿಸಿದರು.
 
 
ಸಭೆಯಲ್ಲಿ ಜಿಲ್ಲಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಹರೀಶ್ ಮೂಡುಶೆಡ್ಡೆ ಎಲ್ಲಾ ಮಂಡಲದ ವರದಿಯನ್ನು ಪಡೆದುಕೊಂಡರು. ಜಿಲ್ಲಾ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಸಂದೇಶ ಶೆಟ್ಟಿ ವಂದಿಸಿದರು.

LEAVE A REPLY

Please enter your comment!
Please enter your name here