ಕಾರ್ಯಕಾರಿಣಿ ಸಭೆ

0
272

ಮಂಗಳೂರು ಪ್ರತಿನಿಧಿ ವರದಿ
ಮಂಗಳೂರು ನಗರ ದಕ್ಷಿಣ ಮಂಡಲದ ಕಾರ್ಯಕಾರಿಣಿ ಸಭೆ ಡಿ.ವೇದವ್ಯಾಸ ಕಾಮತ್ ಅಧ್ಯಕ್ಷತೆಯಲ್ಲಿ ಸೋಮವಾರ ನಡೆಯಿತು. ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಕ್ಯಾ|ಗಣೇಶ್ ಕಾರ್ಣಿಕ್ ದೀಪ ಬೆಳಗಿಸಿ ಕಾರ್ಯಕಾರಿಣಿ ಉದ್ಘಾಟಿಸಿ, ಕೇಂದ್ರ ಸರಕಾರದ ಜನಪರ ಯೋಜನೆಗಳ ಮಾಹಿತಿಯನ್ನು ಜನ ಸಾಮಾನ್ಯರಿಗೆ ಮುಟ್ಟಿಸಲು ಕಾರ್ಯಕರ್ತರು ಶ್ರಮಿಸಬೇಕು. ರಾಜ್ಯ ಸರಕಾರದ ವೈಫಲ್ಯದ ಬಗ್ಗೆ ಜನ ಜಾಗೃತಿಗೊಳಿಸಬೇಕು ಎಂದರು. ಮಂಡಲದ ಅಧ್ಯಕ್ಷ ವೇದವ್ಯಾಸ ಕಾಮತ್ರವರು ಅಧ್ಯಕ್ಷೀಯ ಭಾಷಣ ಮಾಡಿದರು.
 
 
ಸಮಾರೋಪ ಭಾಷಣ ಮಾಡಿದ ಜಿಲ್ಲಾ ಪ್ರಧಾನಕಾರ್ಯದರ್ಶಿ ಸುದರ್ಶನ ಎಂ ಬಿಜೆಪಿ ಜಗತ್ತಿನ ಅತಿ ದೊಡ್ಡ ರಾಜಕೀಯ ಪಕ್ಷವಾಗಿ ಬೆಳೆಯಲು 3 ಪ್ರಮುಖ ಕಾರಣಗಳಿವೆ.1.ನಮ್ಮ ಸಿದ್ದಾಂತ 2.ಕಾರ್ಯಪದ್ದತಿ 3.ನಮ್ಮ ನಿರಂತರ ಪರಿಶ್ರಮ ಹಾಗೂ ನಮ್ಮ ಕಾರ್ಯದ ಗುರಿ ಕೇವಲ ಚುನಾವಣೆ ಮಾತ್ರವಲ್ಲ, ರಾಷ್ಟ್ರೀಯ ಪುನರ್ ನಿರ್ಮಾಣವೇ ನಮ್ಮ ಪ್ರಮುಖ ಗುರಿ ಎಂದರು. ಈ ಕಾರ್ಯಕ್ರಮದಲ್ಲಿ ಮಾಜಿ ಎಂ.ಎಲ್.ಸಿ ಮೋನಪ್ಪ ಭಂಡಾರಿ, ಮಾಜಿ ಉಪಸಭಾಪತಿ ಯೋಗೀಶ್ ಭಟ್, ಜಿಲ್ಲಾ ಪ್ರಧಾನಕಾರ್ಯದರ್ಶಿ ಉಮಾನಾಥ ಕೋಟ್ಯಾನ್, ಜಿಲ್ಲಾ ಉಪಾಧ್ಯಕ್ಷ ಆನಂದ ಬಂಟ್ವಾಳ, ಮಂಡಲ ಪ್ರಧಾನಕಾರ್ಯದರ್ಶಿ ಭಾಸ್ಕರಚಂದ್ರ ಶೆಟ್ಟಿ, ಬಿಜೆಪಿ ಮಹಿಳಾ ಪ್ರಮುಖರಾದ ಪ್ರಭಾಮಾಲಿನಿ, ರೂಪ ಡಿ.ಬಂಗೇರಾ, ಸಂಧ್ಯಾವೆಂಕಟೇಶ್ ಉಪಸ್ಥಿತರಿದ್ದರು.
ರಮೇಶ ಕಂಡೆಟ್ಟು ಸ್ವಾಗತಿಸಿದರು. ಮಂಡಲ ಉಪಾಧ್ಯಕ್ಷ ರವೀಂದ್ರ ಕುಮಾರ ಕಾರ್ಯಕ್ರಮ ನಿರೂಪಿಸಿದರು, ಮಂಡಲದ ಕಾರ್ಯದರ್ಶಿ ಅನಿಲ ರಾವ್ ವಂದಿಸಿದರು.
 
 
 
ಕಾಂಗ್ರೆಸ್ ಸುಳ್ಳು ಹೇಳುವುದನ್ನು ನಿಲ್ಲಿಸಲಿ
ಕೇಂದ್ರದಲ್ಲಿ ಬಿಜೆಪಿ ಸರಕಾರ ಆಡಳಿತಕ್ಕೆ ಬಂದ ಬಳಿಕ ದೇಶದ ಆರ್ಥಿಕ ಮಟ್ಟವು ತೀಕ್ಷ್ಣವಾಗಿ ಬೆಳವಣಿಗೆ ಕಂಡಿರುವುದಕ್ಕೆ ಶೇಕಡ 4ರಷ್ಟೇ ಭಾರತದ ಜೆಡಿಪಿಯು ಶೇಕಡ 8ರ ಹತ್ತಿರ ತಲುಪಿರುವುದೇ ಸ್ಪಷ್ಟ ನಿದರ್ಶನ. 2014 ರ ನಂತರ ಭಾರತ ವಿಶ್ವದಲ್ಲಿ ಚೀನಾ ಸೇರಿದಂತೆ ಅನೇಕ ರಾಷ್ಟ್ರಗಳನ್ನು ಹಿಮ್ಮೆಟ್ಟಿಸಿ ಬಂಡವಾಳ ಹೂಡಿಕೆಗೆ ವಿಶ್ವದ ನಂ 1 ರಾಷ್ಟ್ರವಾಗಿ ಪರಿವರ್ತನೆ ಆಗಿರುವುದಷ್ಟೇ ಅಲ್ಲದೆ ಲಕ್ಷಾಂತರ ಕೋಟಿರೂಪಾಯಿಗಳು ಭಾರತದಲ್ಲಿ ಈಗಾಗಲೇ ಹೂಡಿಕೆಯಾಗಿದ್ದು ಮತ್ತಷ್ಟು ಹರಿದು ಬರುವ ಒಡಂಬಡಿಕೆಗಳು ಸಹಿಯಾಗಿವೆ, ಪರಿಣಾಮವಾಗಿ ದೇಶದಲ್ಲಿ ನಿರುದ್ಯೋಗದ ಸಮಸ್ಯೆ ಕ್ಷೀಣಿಸಿದೆ ಎಂಬುದಕ್ಕೆ ಅಧಿಕೃತ ಅಂಕಿ ಅಂಶಗಳೇ ಧೃಡೀಕರಿಸಿದೆ. ಮಹಿಳಾ ,ಪರಿಶಿಷ್ಟ ಜಾತಿ ಮತ್ತು ಪಂಗಡ ಸಮಾಜದಲ್ಲಿ ಔದ್ಯೋಗಿಕ ಕ್ರಾಂತಿಯನ್ನು ಸೃಷ್ಠಿಸುವಲ್ಲಿ ಸ್ಟಾಂಡ್-ಅಪ್ ಇಂಡಿಯಾ ಯೋಜನೆಯು ಯಶಸ್ವಿಯಾಗಿದೆ. ತಳಮಟ್ಟದ ಹಾಗೂ ಆರ್ಥಿಕವಾಗಿ ಹಿಂದುಳಿದವರನ್ನು ರಾಷ್ಟ್ರದ ಮುಖ್ಯ ವಾಹಿನಿಗೆ ತರುವ ದೃಷ್ಠಿಯಿಂದ ಜನಧನ ಯೋಜನೆ ಜಾರಿಯಾಗಿದ್ದೂ ಲಕ್ಷಾಂತರ ಬಡಕುಟುಂಬಗಳಿಗೆ ಸೌಲತ್ತುಗಳು ನೇರವಾಗಿ ತಲುಪುವಂತಾಗಿದೆ. ಸುಮಾರು 65 ಸಾವಿರ ಕೋಟಿರೂಪಾಯಿಗಳಷ್ಟು ಕಪ್ಪು ಹಣ ಇಗಾಗಲೆ ಘೋಷಣೆಯಾಗಿದ್ದು, ಸರಕಾರಕ್ಕೆ ಜಮೆಯಾಗಿದ್ದರು ಕಾಂಗ್ರೆಸ್ಗೆ ಇದರ ಬಗ್ಗೆ ಜಾಣ ಕುರುಡು ಪ್ರದರ್ಶಿಸುತ್ತಿದೆ. ಸಮರ್ಥ ನಾಯಕತ್ವ ಹಾಗೂ ದೂರದೃಷ್ಠಿಯುಳ್ಳ ನೀತಿಗಳ ಫಲವಾಗಿ ಇಂದು ದೇಶ ಅತ್ಯಂತ ವೇಗವಾಗಿ ಮುನ್ನಡೆಯಿತಿರುವುದು ಅಷ್ಟೇ ಅಲ್ಲದೆ ದೇಶದ ಸಮಸ್ತ ನಾಗರೀಕರ ಪ್ರಗತಿಗೆ ಸರಕಾರ ಯೋಜನೆಗಳನ್ನು ರೂಪಿಸಿರುವುದನ್ನು ಅರಗಿಸಿಕೊಳ್ಳಲಾಗದೇ ಕಾಂಗ್ರೆಸ್ ಸುಳ್ಳು ಹೇಳತೋಡಗಿರುವುದು ಹಾಸ್ಯಾಸ್ಪದ. ಬಿಜೆಪಿಯನ್ನು ಠೀಕಿಸುವ ಮೊದಲು ಕಾಂಗ್ರೆಸ್ ತನ್ನನ್ನು ತಾನು ಸರಿಮಾಡಿಕೊಳ್ಳುವುದು ಉತ್ತಮ ಎಂದು ಬಿಜೆಪಿ ವಕ್ತಾರ ವಿಕಾಸ್ ಪುತ್ತೂರು ಸಲಹೆ ಕೊಟ್ಟಿದ್ದಾರೆ.

LEAVE A REPLY

Please enter your comment!
Please enter your name here