ಕಾರ್ಮಿಕರಿಗೆ ಕಾನೂನು ಅರಿವು

0
359

 
ಉಡುಪಿ ಪ್ರತಿನಿಧಿ ವರದಿ
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾರ್ಮಿಕ ಇಲಾಖೆ, ವಕೀಲರ ಸಂಘ (ರಿ), ಮತ್ತು ಎಕ್ತಾ ಡೆವೆಲಪರ್ಸ್, ಸಂತೆಕಟ್ಟೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಅಂತಾರಾಪ್ಟ್ರಿಯ ಕಾರ್ಮಿಕ ದಿನಾಚರಣೆಯ ಅಂಗವಾಗಿ ಕಟ್ಟಡ ಕಾರ್ಮಿಕರಿಗೆ ಕಾನೂನು ಅರಿವು ಮತ್ತು ನೋಂದಣಿ ಕಾರ್ಯಕ್ರಮವು ಮೇ 4ರಂದು ಎಕ್ತಾ ಹೈಟ್ಸ್, ಸಂತೆಕಟ್ಟೆ, ಉಡುಪಿಯಲ್ಲಿ ನಡೆಯಿತು.
 
 
ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಫಾಟಿಸಿದ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ನಾಗಜ್ಯೋತಿ ಕೆ. ಎ ಇವರು ಮಾತನಾಡಿ, ನಮ್ಮದು ಪ್ರಜಾಸತ್ತಾತ್ವಕ ದೇಶ, ನಾವು ಪ್ರಜೆಗಳಾಗಿ ನಮಗಾಗಿ ನಾವೇ ಕಾನೂನನ್ನು ರಚಿಸಿರುತ್ತೇವೆ. ನಮ್ಮ ದೇಶದಲ್ಲಿ ಹಲವಾರು ವರ್ಗಗಳ ಒಳಿತಿಗಾಗಿ ಕಾನೂನು ರಚಿಸಲ್ಪಟ್ಟಿದ್ದು ಕಾರ್ಮಿಕ ವರ್ಗಕ್ಕೂ ವಿಶೇಷ ಕಾನೂನನ್ನು ಮಾಡಲಾಗಿದೆ. ಸಮಾಜ ಬೆಳೆದ ಹಾಗೆ ಕಾನೂನು ಬದಲಾವಣೆ ಆಗುತ್ತಾ ಹೋಗಿದೆ. ಹೊಸ ಕಾನೂನುಗಳು ಸೇರ್ಪಡೆಯಾಗುತ್ತಾ ಹೋಗಿದೆ. ಕಾರ್ಮಿಕರ ಒಳಿತಿಗಾಗಿ ಮಾಡಿದ ಕಾನೂನು ಕಾರ್ಮಿಕರಿಗೆ ಸಲ್ಲತಕ್ಕದ್ದು. ಕಾನೂನಿನ ಅರಿವು ಎಲ್ಲರಿಗೂ ತಿಳಿದಿರತಕ್ಕದ್ದು. ಆದ್ದರಿಂದ ಕಾನೂನಿನ ಅರಿವು ಮೂಡಿಸುವುದು ಪ್ರಾಧಿಕಾರದ ಮೂಲ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು ಪ್ರತಿಯೊಬ್ಬರೂ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿಯೂ ಕಾರ್ಮಿಕರನ್ನು ಸಂಘಟತರನ್ನಾಗಿ ಮಾಡಿ ಅವರ ನೋಂದಣಯನ್ನು ಮಾಡಿ ಅವರಿಗೆ ನೀಡಲ್ಪಡುವ ಗುರುತಿನ ಚೀಟಿಯ ಮೂಲಕ ಸಿಗಬಹುದಾದ ಪ್ರತಿಯೊಂದು ಸವಲತ್ತುಗಳನ್ನು ಎಲ್ಲಾ ಕಾರ್ಮಿಕರು ಪಡೆದುಕೊಳ್ಳಿ ಎಂದು ಸಲಹೆಯನ್ನು ನೀಡಿದರು.
 
 
ಎಕ್ತಾ ಡೆವೆಲಪರ್ಸ್ ನ ವ್ಯವಸ್ಥಾಪಕ ಪಾಲುದಾರರಾದ ಬ್ಯಾಪ್ಟಿಸ್ಟ್ ಡಯಾಸ್ ಅದ್ಯಕ್ಷತೆಯನ್ನು ವಹಿಸಿದ್ದರು. ನ್ಯಾಯವಾದಿ ಸುನಿಲ್ ಎಸ್ ಮೂಲ್ಯ ಕಾರ್ಮಿಕರ ಕಾನೂನಿನ ಬಗ್ಗೆ ಉಪನ್ಯಾಸವನ್ನು ನೀಡಿದರು. ಉಡುಪಿ-2ನೇ ವೃತ್ತದ ಕಾರ್ಮಿಕ ನಿರೀಕ್ಷಕ ಜೀವನ್ ಕುಮಾರ್ ಕಟ್ಟಡ ಕಾರ್ಮಿಕರಿಗೆ ಸರ್ಕಾರದಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ವಕೀಲರ ಸಂಘದ ಅದ್ಯಕ್ಷರಾದ ಕೆ ದಯಾನಂದ ಉಪಸ್ಥಿತರಿದ್ದರು. ಜೋಸೆಫ್ ರೆಬೆಲ್ಲೂ ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here