ಕಾರ್ಡ್ ಬಳಸಿ ಲಡ್ಡು ಖರೀದಿಸಿ!

0
293

ರಾಷ್ಟ್ರೀಯ ಪ್ರತಿನಿಧಿ ವರದಿ
ಆಂಧ್ರದ ತಿರುಮಲ ತಿಮ್ಮಪ್ಪನಿಗೂ ಚಿಲ್ಲರೆ ಬಿಸಿ ತಟ್ಟಿದೆ. ಇದು 1000, 500 ರೂ. ನೋಟ್ ಬ್ಯಾನ್ ಎಫೆಕ್ಸ್ ಹೌದು. ನೋಟ್ ಬ್ಯಾನ್ ಆದಾಗಿನಿಂದ ತಿಮ್ಮಪ್ಪನ ಭಕ್ತರು ಚಿಲ್ಲರೆಗಾಗಿ ಪರದಾಡುತ್ತಿದ್ದಾರೆ.
 
 
 
ತಿಮ್ಮಪ್ಪನ ಭಕ್ತರ ಸಂಕಷ್ಟ ನಿವಾರಣೆಗೆ ಟಿಟಿಡಿ ಒಂದು ಪ್ಲಾನ್ ಮಾಡಿದೆ. ತಿರುಮಲ ಭಕ್ತಾಧಿಗಳಿಗೆ ಕ್ಯಾಶ್ ಲೆಸ್ ಸರ್ವೀಸ್ ನೀಡಲು ಟಿಟಿಡಿ ನಿರ್ಧರಿಸಿದೆ. ಇದರಿಂದ ಚಿಲ್ಲರೆಗಾಗಿ ಪರದಾಡುವ ಭಕ್ತರ ಸಮಸ್ಯೆಗೆ ಪರಿಹಾರ ಸಿಕ್ಕಿದಂತಾಗುತ್ತದೆ.
 
 
 
ಕಾರ್ಡು ಬಳಸಿ ಲಡ್ಡು ಖರೀದಿಸಲೂ ಕೂಡ ಅವಕಾಶ ನೀಡಲಾಗಿದೆ.ಹೀಗಾಗಿ ದೇವಸ್ತಾನಕ್ಕೆ ಬರುವ ಭಕ್ತರ ಕೈಯಲ್ಲಿ ಚಿಲ್ಲರೆ ಬೇಡ, ಬದಲಾಗಿ ಡೆಬಿಟ್, ಕ್ರೆಡಿಟ್ ಕಾರ್ಡ್ ಇದ್ದರೆ ಸಾಕು. ಅಲ್ಲದೆ ಆಂಧ್ರದ ತಿರುಮಲ ದೇಗುಲ ದೇಶದ ನಗದು ರಹಿತ ದೇವಸ್ಥಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

LEAVE A REPLY

Please enter your comment!
Please enter your name here