ದೇಶಪ್ರಮುಖ ಸುದ್ದಿವಾರ್ತೆ

ಕಾರ್ಗಿಲ್‌ ಯೋಧ ವಿವರಿಸಿದ ಕಾರ್ಗಿಲ್‌ ಕದನ!

ಹೀಗೊಂದು ವಿಶೇಷ ಕಾರ್ಯಕ್ರಮ
ಮೂಡುಬಿದಿರೆ: ಜವನೆರ್ ಬೆದ್ರ ಸಂಘಟನೆಯ ಆಶ್ರಯದಲ್ಲಿ ೨೦ನೇ ವರ್ಷದ ಕಾರ್ಗಿಲ್ ವಿಜಯ ದಿವಸ್ ಆಚರಣೆ ಪುತ್ತಿಗೆ ಸೋಮನಾಥ ದೇವಸ್ಥಾನದ ಕಲಾ ಮಂಟಪದಲ್ಲಿ ಭಾನುವಾರ ನಡೆಯಿತು. ಭಾರತ್ ಮಾತಾ ಹಾಗೂ ಅಮರ್ ಜವಾನ್ ಭಾವಚಿತ್ರಕ್ಕೆ ಅತಿಥಿಗಳು ಹಾಗೂ ಸರ್ವ ಸದಸ್ಯರು ಪುಷ್ಪಾರ್ಚನೆ ನಮನ ಸಲ್ಲಿಸಿದರು.

ಮಾಜಿ ಯೋಧ ಕಾರ್ಗಿಲ್ ಯುದ್ಧದಲ್ಲಿ ಸೇವೆ ಸಲ್ಲಿಸಿದ ಮೂಡಬಿದ್ರೆಯ ಎಂ.ಕೆ.ರಾಜೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಕಾರ್ಗಿಲ್‌ ಯುದ್ಧ ಸಂದರ್ಭದಲ್ಲಿ ದೇಶದ ಯೋಧರ ಕಾದಾಟದ ಬಗ್ಗೆ ಅನುಭವ ಹಂಚಿಕೊಂಡರು.
ಮಾಜಿ ಸೈನಿಕ ಸುಬೇದರ್ ಮೇಜರ್ ರಾಜೇಂದ್ರ ಜಿ ಯುದ್ಧದ ವಿಚಾರಗಳನ್ನು ವಿವರಿಸಿದರು. ಅತಿಥಿಗಳಾಗಿ ನಾಗರಾಜ್ ಕರ್ಕೇರ, ನಾಗವರ್ಮ ಜೈನ್ , ಪ್ರಕಾಶ್ ಶೆಟ್ಟಿಗಾರ್, ಪುತ್ತಿಗೆ ರವಿ ಭಟ್ ಸಂಘಟನೆಯ ಸ್ಥಾಪಕ ಅಮರ್ ಕೋಟೆ ಉಪಸ್ಥಿತರಿದ್ದರು .ಸುನೀಲ್ ಪಣಪಿಲ ನಿರೂಪಿಸಿದರು

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here