ಕಾರು-ಬೈಕ್ ಡಿಕ್ಕಿ: 3 ಸಾವು

0
195

ಕೋಲಾರ ಪ್ರತಿನಿಧಿ ವರದಿ
ಬೈಕ್ ಗೆ ಕಾರು ಡಿಕ್ಕಿಯಾದ ಪರಿಣಾಮ ಬೈಕ್ ನಲ್ಲಿ ತೆರಳುತ್ತಿದ್ದ ಮೂವರು ಸಾವನ್ನಪ್ಪಿದ್ದ ಘಟನೆ ಕೋಲಾರ ತಾಲೂಕಿನ ಮುದುವಾಡಿ ಬಳಿ ಸಂಭವಿಸಿದೆ.
ಕೋಲಾರ ನಿವಾಸಿಗಳಾದ ಹಾಜೀರ್(25), ಸಲೀಂ(27, ಆಂಧ್ರದ ವಿಜಯವಾಡ ಮೂಲದ ಪವನ್(29) ಸಾವನ್ನಪ್ಪಿದ್ದ ದುರ್ದೈವಿಗಳಾಗಿದ್ದಾರೆ.
 
 
ಕಾರಿನಲ್ಲಿದ್ದ ಇಬ್ಬರಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೂವರೂ ಒಂದೇ ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದರು. ಕೋಲಾರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here