ಕಾರಿಂಜ ಶ್ರೀ ಮಹಾದೇವ ದೇವಳದ ಜಾತ್ರಾ ಮಹೋತ್ಸವ

0
278

ನಮ್ಮ ಪ್ರತಿನಿಧಿ ವರದಿ
ಕಾರಿಂಜ ಇಚ್ಲಂಪಾಡಿ ಶ್ರೀ ಮಹಾದೇವ ಶಾಸ್ತಾರ ಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸವವು 11-03-2017 ಶನಿವಾರ ಮತ್ತು 12-03-2017 ರವಿವಾರ ವಿವಿಧ ದೈವಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬಹಳ ವಿಜೃಂಭಣೆಯಿಂದ ಜರಗಲಿರುವುದು.
 
 
ಶನಿವಾರ ಬೆಳಿಗ್ಗೆ ಗಣಪತಿ ಹೋಮ, ನವಕಾಭಿಷೇಕ, ನಂತರ ಊರ ಪರವೂರ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ತಾಳಮದ್ದಳೆ, ಮಧ್ಯಾಹ್ನ ಅನ್ನ ಸಂತರ್ಪಣೆ, ಸಂಜೆ ಮಹಾದೇವಿ ಭಜನಾ ಮಂಡಳಿ ಕಳತ್ತೂರು ಇವರಿಂದ ದಾಸ ಸಂಕೀರ್ತನೆ, ಕಾಳಿಕಾಂಬಾ ಭಜನಾ ಮಂಡಳಿ, ಆರಿಕ್ಕಾದಿ ಇವರಿಂದ ಭಜನೆ, ರಾತ್ರಿ ಭೋಜನ, ದೀಪಾರಾಧನೆ, ತಾಯಂಬಕ, ಪೂಜೆ, ಶ್ರೀ ಭೂತಬಲಿ, ಬೆಡಿ ಸೇವೆ, ರಾಜಾಂಗಣ ಪ್ರಸಾದ, ಮಹಾಪೂಜೆ, ಮಂತ್ರಾಕ್ಷತೆಗಳು ನಡೆಯಲಿವೆ.
 
 
ರವಿವಾರ ದಂದು ಮುಂಜಾನೆ ರಕ್ತೇಶ್ವರಿ ದೈವದ ಕೋಲ, ಪ್ರಸಾದ ವಿತರಣೆ, ಪ್ರಾತಃಕಾಲ್ ಅನುಜ್ಞಾ ಕಲಶ, ಪೂಜೆ, ಬೆಳಗ್ಗೆ ನಾಗ ಹಾಗೂ ವನ ದೇವತೆಗಳಿಗೆ ತಂಬಿಲ ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನದ ಅನಂತರ ಪುತ್ತಿಗೆ ಆನಾಡಿಪಳ್ಳದಲ್ಲಿ ೩೯ ದೈವಗಳ ತಂಬಿಲ ಜರಗಲಿರುವುದು.

LEAVE A REPLY

Please enter your comment!
Please enter your name here