ಕಾರಂತರ ವಿಚಾರಗಳು ಧಿಗ್ಭ್ರಮೆ ಮೂಡಿಸುವಂತಹುದು : ಕೋಟ ಶ್ರೀನಿವಾಸ್ ಪೂಜಾರಿ

0
478

ನಮ್ಮ ಪ್ರತಿನಿಧಿ ವರದಿ
ಡಾ.ಶಿವರಾಮ ಕಾರಂತರ ಪ್ರತೀ ಹಂತಗಳು , ವಿಚಾರಗಳು ಧಿಗ್ಭ್ರಮೆ ಮೂಡಿಸುತ್ತದೆ;ಆದರೆ ಅವರ ಎಲ್ಲಾ ವಿಚಾರಗಳು ಆಸಕ್ತಿದಾಯವಾದವುಗಳಾಗಿವೆ. ಹೊಸ ಚಿಂತನೆಗಳನ್ನು ನಿರಂತರ ಹುಟ್ಟುಹಾಕುತ್ತಿರುತ್ತವೆ ಎಂದು ಕೋಟ ಶ್ರೀನಿವಾಸ್ ಪೂಜಾರಿ ಅಭಿಪ್ರಾಯ ಪಟ್ಟಿದ್ದಾರೆ.
 
mood_shiv-k-award1
ಮೂಡಬಿದಿರೆ ಎಂ.ಸಿ.ಎಸ್ ಬ್ಯಾಂಕ್ ಸಭಾಂಗಣದಲ್ಲಿ ಶನಿವಾರ ನಡೆದ ಶಿವರಾಮ ಕಾರಂತ ಪ್ರಶಸ್ತಿ, ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಡೆದಾಡುವ ವಿಶ್ವಕೋಶ ಡಾ.ಶಿವರಾಮ ಕಾರಂತರ ಆದರ್ಶಗಳನ್ನು ಒಟ್ಟುಗೂಡಿಸುವ ಕಾರ್ಯ ನಮ್ಮೆಲ್ಲರಿಂದ ಆಗಬೇಕಾಗಿದೆ ಎಂದ ಅವರು ಕಾರಂತರಿಗೆ ಕಾರಂತರೇ ಸಾಟಿ ಎಂದರು.
 
mood_shiv-k-award
 
ಪ್ರಶಸ್ತಿ – ಪುರಸ್ಕಾರ
ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಅವರಿಗೆ ಶಿವರಾಮ ಕಾರಂತ ಪ್ರಶಸ್ತಿ ಹಾಗೂ ಡಾ.ನಾ ಮೊಗಸಾಲೆ ಅವರಿಗೆ ಶಿವರಾಮ ಕಾರಂತ ಪುರಸ್ಕಾರವನ್ನು ನಗದು ಸಹಿತ ಪ್ರದಾನ ಮಾಡಲಾಯಿತು.
ಶಿವರಾಮ ಕಾರಂತ ಪ್ರತಿಷ್ಠಾನ (ರಿ.) ಮೂಡಬಿದಿರೆ ಎಂ.ಸಿ.ಎಸ್ ಬ್ಯಾಂಕ್ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ ವಹಿಸಿದ್ದರು. ಬ್ಯಾಂಕ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಂ.ಚಂದ್ರಶೇಖರ್ ಉಪಸ್ಥಿತರಿದ್ದರು. ಪ್ರತಿಷ್ಠಾನದ ಕೋಶಾಧಿಕಾರಿ ಕೃಷ್ಣರಾಜ ಹೆಗ್ಗೆ ಸ್ವಾಗತಿಸಿದರು. ಸಾಹಿತಿ ಜಯಪ್ರಕಾಶ್ ಮಾವಿನಕುಳಿ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here