ಕಾಮಾಲೆ ಕಣ್ಣಿನವನಿಗೆ ಕಾಣೋದೆಲ್ಲ ಹಳದಿಯೆ!

0
2710

ಪ್ರೊಪೆಸರ್ ಕೆ ಭಗವಾನರ ಹೊಸ ಪುಸ್ತಕ ರಾಮ ಮಂದಿರ ಯಾಕೆ ಬೇಕು? ಅನ್ನೋದು ಬಿಡುಗಡೆ ಯಾಗ್ತಿದೆ, ಈ ಯಪ್ಪನಿಗೆ ರಾಮನ ಕಂಡರೆ ಅದ್ಯಾವ ಕೋಪವೋ ಗೊತ್ತಿಲ್ಲ, ಪದೆ ಪದೆ ರಾಮ ಅದನ್ನ ಮಾಡ್ತಿದ್ದ, ಇದನ್ನ ಮಾಡ್ತಿದ್ದ ಅವರು ಹಾಗೆ ಇವರು ಹೀಗೆ ಅಂತೆಲ್ಲ ಅರಚಾಡಿ, ಎಗರಾಡಿ, ತನ್ನ ಪುಸ್ತಕಗಳಿಗೊಂದಷ್ಟು ಓದುಗರನ್ನ ಕಲೆ ಹಾಕ್ತಾನೆ, ಈ ಹಿಂದೆ ೨೦೧೫ ರಲ್ಲಿ ಶಂಕರಾಚಾರ್ಯರಿಗೆ, ಮಧ್ವಾಚಾರ್ಯರಿಗೆ ಮನುಷತ್ವವಿಲ್ಲ ಎಂದಿದ್ದ ಪುಣ್ಯಾತ್ಮ, ಇನ್ನೊಮ್ಮೆ ಆಸ್ತಿ ಮೋಡೋರೆಲ್ಲ ಆಸ್ತಿಕರು ಎಂದು ನಗೆಪಾಟಲಿಗೊಳಗಾಗಿದ್ದ! ಇದೀಗ ರಾಮ ನಾನ್ ವೆಜಿಟೆರಿಯನ್, ರಾಮ ಒಬ್ಬ ಕುಡುಕ ಅಂತೆಲ್ಲ ಒಂದಷ್ಟು ಹಲುಬಿದನಲ್ಲದೆ ಮಹಾತ್ಮ ಗಾಂಧಿ ಒಬ್ಬ ಮತಾಂಧ ಅಂದು ಬಿಡೋದ ಈ ಯಪ್ಪ!

ರಾಮ ಒಬ್ಬ ಕ್ಷತ್ರಿಯನಾಗಿದ್ದ, ಅವನು ಮಾಂಸಹಾರಿಯಾಗಿದ್ದ ಅನ್ನೋದು ಈಗಿನ ವಾದವಲ್ಲ, ಕುವೆಂಪು ಕಾಲದ್ದು, ಕುವೆಂಪು ತಮ್ಮ ರಾಮಯಣ ದರ್ಶನಂನಲ್ಲಿ ರಾಮ ಮಾಂಸಹಾರ ಸೇವಿಸುವ ವಿಷಯಗಳನ್ನು ಉಲ್ಲೇಖಿಸಿದ್ದಾರೆ, ಮೂಲ ರಾಮಾಯಣದಲ್ಲಿ ಈ ಬಗ್ಗೆ ಕೆಲವೊಂದಿಷ್ಟು ಉಲ್ಲೇಖಗಳು ಸಿಗುತ್ವೆ,
“चतुर्दश हि वर्षाणि वत्स्यामि विजने वने |
मधु मूल फलैः जीवन् हित्वा मुनिवद् आमिषम् || २-२०-२९”
ಈ ಶ್ಲೋಕದ ಅರ್ಥ ಹೀಗಿದೆ “ನಾನು ಅರಣ್ಯದಲ್ಲಿ ಸಂತರಂತೆ ಜೀವಿಸಬೇಕಾಗಿದೆ, ನಾನು ಜೇನುತುಪ್ಪ ಮತ್ತು ಹಣ್ಣುಗಳ ಹೊರತು ಮಾಂಸದ ಪದಾರ್ಥ ಸೇವಿಸೆನು” ಇದೊಂದೆ ಶ್ಲೋಕವಲ್ಲ,
“न मांसं राघवो भुङ्क्ते न चापि मधुसेवते |
वन्यं सुविहितं नित्यं भक्तमश्नाति पञ्चमम् || ५-३६-४१”
“ನಾನು ಎಂದಿಗೂ ಮಾಂಸ ಹಾಗೂ ಮತ್ತು ತರುವ ಪಾನಿಯಗಳನ್ನ ಎಂದಿಗೂ ಸೇವಿಸಲಾರೆ, ನಾನು ಸೇವಿಸುವುದು ಕೇವಲ ಹಣ್ಣು ಹಂಪಲುಗಳಷ್ಟೆ!”

ಹೋಗಲಿ ಬಿಡಿ ರಾಮನೇ ದೇವರೆಂದು ಒಪ್ಪಿಕೊಂಡಾಗ ಆತನೇ ಸೃಷ್ಟಿಸಿದ ಜೀವಿಗಳನ್ನ ತನ್ನಲ್ಲೇ ಲೀನವಾಗಿಸಿಕೊಳ್ಳುವುದು ತಪ್ಪೆನಿಸುವುದಿಲ್ಲ, ಅವೆಲ್ಲವೂ ಆತನ ಆದರ್ಶ ತತ್ವಗಳಿಂದ ಆತನನ್ನ ದೇವರೆಂದು ಭಾವಿಸುತ್ತೀವಿ, ಆತನೊಬ್ಬ ಕುಡುಕ ಅಂತ ಹೇಳಿ ಒಂದು ಧರ್ಮೀಯರ ಭಾವನೆಗಳಿಗೆ ದಕ್ಕೆ ತರುವ ಅವಶ್ಯಕತೆ ಇದೆಯಾ? ಸುಮ್ಮನೆ ನಗು ಬಂದು ಬಿಡುತ್ತೆ! ವಿಚಿತ್ರ ನೋಡಿ, ಒಂದು ಧರ್ಮೀಯರ ನಂಬಿಕೆ ಮತ್ತು ಭಾವನೆಗಳ ವಿರುದ್ಧ ಪದೇ ಪದೇ ಹೇಳಿಕೆ ನೀಡುವ ಭಗವಾನ್ ಸಾಹೇಬರು ಖುಲ್ಲಂ ಖುಲ್ಲಾ ಹೊರಗಡೆ ತಿರುಗ್ತಿದ್ದಾರೆ, ಹಿಂದೂಗಳು ಸಹಿಷ್ಣುಗಳು ಏನು ಹೇಳಿದ್ರೂ ಸಹಿಸಿಕೊಳ್ತಾರೆ ಅಂತ ಇಲ್ಲ ಸಲ್ಲದ್ದನ್ನ ಹೇಳೊದನ್ನು ಸಹಿಸಿ ಕೊಳ್ಳಬೇಕಾ? ಗಾಂಧಿ ಒಬ್ಬ ಮತಾಂಧ ಅಂತ ಆರೆಸ್ಸೆಸ್ಸಿನ ಮುಖಂಡನೋ ಹೋಗಲಿ ಬಿಡಿ ಯಾವುದೋ ಒಬ್ಬ ಹಿಂದೂ ಹುಡುಗನೋ ಪೇಸ್ಬುಕ್ಕಿನಲ್ಲಿ ಬರೆದಿದ್ದರೆ ಸಾಕಿತ್ತು, ಮಾಧ್ಯಮದಲ್ಲಿ ಇದಕ್ಕಿಂತ ದೊಡ್ಡ ಸುದ್ದಿಯಾಗೋದು, ಒಂದಷ್ಟು ಮಂದಿ ಬುದ್ದಿಜೀವಿಗಳು ಪೆನೆಲ್ ಚರ್ಚೆಗೆ ಬಂದು ಗಂಟೆಗಂಟಲೆ ಗಂಟಲು ಹರಿದುಕೊಂಡು ಬಿಡೋರು, ಒಂದಷ್ಟು ಮಂದಿ ಹೋರಾಟಕ್ಕಿಳಿದು ಬಿಡೋರು! ಹೋಗಲಿ ಬಿಡಿ ಈ ಹಿಂದೆ ಇಂತಹುದುದ್ದೆಲ್ಲ ಕಣ್ಮುಂದೆಯೆ ನಡೆದಿದೆಯಲ್ಲ?

ಇನ್ನು ರಾಮನ ಬಗ್ಗೆ ಕೊಟ್ಟ ಹೇಳಿಕೆ ಅಲ್ಲಾಹ್ನ ಬಗ್ಗೆ ಕೊಟ್ಟರೆ ಒಂದಷ್ಟು ಮೌಲ್ವಿಗಳು ಪತ್ವಾ ಹೊರಡಿಸಿ ಬಿಡುತ್ತಿದ್ದರು, ಮಂಗ್ಳೂರ್ ಮುಸ್ಲಿಂ ಪೇಜು ಖುಲ್ಲಂ ಖುಲ್ಲಾ ಧಮ್ಕಿ ಹಾಕಿ ಬಿಡುತ್ತಿತ್ತು, “ರಾಮ ಮಂದಿರ ಯಾಕೆ ಬೇಕು?” ಅಂತ ಬರೆಯೋ ಬದಲು “ಬಾಬ್ರಿ ಮಸ್ಜಿದ್ ಯಾಕೆ ಬೇಕು?” ಅಂತ ಬರೆದಿದ್ದರೆ ಭಗವಾನ್ ಭಗವಾನನ ಪಾದ ಸೇರೊದಕ್ಕೆ ಮೂರೆ ಗೇಣು! ಒಗ್ಗಟ್ಟನ್ನ ಮುಸಲ್ಮಾನರನ್ನ ನೋಡಿ ಕಲಿಯಬೇಕು, ಭಗವಾನ್ ಎಂಬ ಪುಣ್ಯಾತ್ಮ ಪದೆ ಪದೆ ಹಿಂದೂಗಳನ್ನ ಟಾರ್ಗೆಟ್ ಮಾಡೋದಕ್ಕೆ ನಾವು ಅತಿಯಾಗಿ ಸಹಿಷ್ಣುಗಳಾಗಿದ್ದು ಬಿಡ್ತಿವಿಲ್ಲ, ಅದೇ ಕಾರಣಕ್ಕೆ ಅನ್ನಿಸುತ್ತೆ, ಮೊನ್ನೆ ಸುವರ್ಣ ನ್ಯೂಸಿನ ಪ್ಯಾನೆಲ್ ಡಿಸ್ಕಷನ್ ಅಲ್ಲಿ ಅಜಿತ್ ಹನುಮಕ್ಕನವರು ಹೇಳಿದ್ದ ಸಣ್ಣ ಹೇಳಿಕೆಗೆ ಇಡೀ ಮುಸಲ್ಮಾನ ಸಮಾಜ ಅವರನ್ನ ಕ್ಷಮೆ ಕೇಳುವಂತೆ ಮಾಡಿತ್ತು, ವಾಟ್ ಅಬೌಟ್ ಭಗವಾನ್? ಹಿಂದೂಗಳು ಮಲಗಿದ್ದೇವಾ? ಶಂಕರಾಚಾರ್ಯರು, ಮಧ್ವಾಚಾರ್ಯರು, ಭಗವದ್ಗೀತೆ, ಕೃಷ್ಣ, ರಾಮ ಎಲ್ಲರನ್ನೂ ತೆಗಳಿದ್ದಾಯ್ತು, ಇಂತವರ ಹುಚ್ಚಾಟಕ್ಕೆ ನಮ್ಮವರ ಹೋರಾಟವೇ ಇಲ್ಲವಾ? ಸರ್ಕಾರ ಅರವತ್ತು ಲಕ್ಷ ಆತನ ಸೆಕ್ಯುರಿಟಿಗೆ ಸುರಿಯುತ್ತೆ ಅಂದರೆ ಅರ್ಥವೇನು?

ಇದೆಲ್ಲ ಬಿಡಿ, ಈ ಹಿಂದೆ ವಾಲ್ಮಿಕಿ ವರ್ಣಪುತ್ರ ಎಂಬ ಕಾನ್ಸೆಪ್ಟ್ ಇಟ್ಟುಕೊಂಡು ನಾರಾಯಣಾಚಾರ್ಯರು ಪುಸ್ತಕ ಬರೆಯೋದಕ್ಕೆ ಮುಂದಾಗ್ತಾರೆ, ಇದರಿಂದಾಗಿ ಅವರೆದುರಿಸಿದ್ದ ಕಷ್ಟವಂತು ಹೇಳೊದಕ್ಕೆ ತೀರದು! ಇನ್ನೊಂದು ಮಹಾತ್ಮ ಗಾಂಧಿಯ ಬಗ್ಗೆ, ಗಾಂಧಿ ಅವರನ್ನ ಮತಾಂಧ ಅನ್ನೋದಾಗಿದ್ರೆ ಇವತ್ತು ಭಾರತದಲ್ಲಿ ಬರೀ ಹಿಂದೂಗಳೆ ಇರುತ್ತಿದ್ದರೇನೋ, ಧರ್ಮದ ಆಧಾರದಲ್ಲಿ ಭಾರತ-ಪಾಕ್ ಬೇರ್ಪಟ್ಟಾಗ ಗಾಂಧಿ ಮೂವತ್ತು ಸೆಕೆಂಡ್ ಸುಮ್ಮನಿದ್ದರೆ ಸಾಕಿತ್ತು, ಇವತ್ತು ಭಾರತ “ಸೆಕ್ಯುಲರ್” ಆಗಿರುತ್ತಿರಲಿಲ್ಲ, ಶಿಟ್! ಅನ್ನಿಸಿ ಬಿಡುತ್ತೆ….

ಇನ್ನೊಂದು ವಿಚಾರ, ಸಿನೆಮಾದಲ್ಲಿ ಹೀರೋ ಸಿಗರೇಟ್ ಸೇದ್ತಾನೆ ಅಂತ ನೀವು ಸಿಗರೇಟ್ ಸೇದೋದಾದ್ರೆ ಅದೊಂದು ಮೂರ್ಖತನವಲ್ವಾ? ಹೀರೋ ವಿಲನ್ಗೆ ಹೊಡೆದ್ರೆ ನಾವು ಚಪ್ಪಾಳೆ ತಟ್ಟಿ, ಶಿಳ್ಳೆ ಹೊಡಿತೀವಿ ಯಾಕಂದ್ರೆ ಆತನಲ್ಲಿ ನೆಗೆಟಿವ್ ಗಿಂತ ಪಾಸಿಟಿವ್ ಜಾಸ್ತಿ ಇರುತ್ತೆ, ರಾಮನಲ್ಲೂ ನೆಗೆಟಿವ್ ಇರಬಹುದು ಆದರೆ ಆತ ದೇವರಾಗಿದ್ದು ಆತನ ಪಾಸಿಟಿವ್ನೆಸ್ ನಿಂದ! ಇನ್ನು ರಾಮ ಮಂದಿರ ಆಗೋದ್ರಿಂದ, ಒಂದಷ್ಟು ಮಂದಿ ಬದುಕೋದಕ್ಕೆ ಅವಕಾಶವಾಗುತ್ತೆ, ಪ್ರವಾಸೋದ್ಯಮ ಬೆಳೆಯುತ್ತೆ, ಹುಂಡಿಗೆ ಹಣ ಬಿದ್ದರೆ ಸರ್ಕಾರದ ಬೊಕ್ಕಸ ತುಂಬುತ್ತೆ, ಇನ್ನು ಅದೆಷ್ಟೋ ಲಾಭ ಇದೆ! ಕಾಮಾಲೆ ಕಣ್ಣಿನವನಿಗೆ ಕಾಣೋದೆಲ್ಲ ಹಳದಿಯಂತೆ, ಸೇಮ್ ನಿಮಗೂ ಅಷ್ಟೆ ಮೊಸರಲ್ಲಿ ಕಲ್ಲು ಹುಡುಕಿಯೇ ಭ್ಯಾಸಅವಾಗಿರ ಬಹುದೇನೋ….

LEAVE A REPLY

Please enter your comment!
Please enter your name here