ಕಾನ್ಪುರದಲ್ಲಿ ಮೋದಿ ಮಾತು

0
312

ರಾಷ್ಟ್ರೀಯ ಪ್ರತಿನಿಧಿ ವರದಿ
ಸಂಸತ್ ಬಂದ್ ಮಾಡುವುದು ವಿಪಕ್ಷಗಳ ಅಜೆಂಡಾವಾಗಿದೆ. ಅಪ್ರಾಮಾಣಿಕರ ರಕ್ಷಣೆಗಾಗಿ ಸಂಸತ್ ನಲ್ಲಿ ಕೋಲಾಹಲ ಉಂಟಾಗಿದೆ. ವಿರೋಧ ಪಕ್ಷಗಳ ಸದಸ್ಯರಿಂದ ಸಂಸತ್ ನಲ್ಲಿ ಗಲಾಟೆ ಉಂಟಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
 
 
ಉತ್ತರಪ್ರದೇಶದ ಕಾನ್ಪುರದಲ್ಲಿ ನಡೆದ ಬಿಜೆಪಿ ಪರಿವರ್ತನಾ ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು ಉತ್ತರಪ್ರದೇಶದಲ್ಲಿ ಪರಿವರ್ತನೆಯ ಕಾಲ ಬರುತ್ತಿದೆ. ಉತ್ತರಪ್ರದೇಶದಲ್ಲಿ ಪರಿವರ್ತನೆ ತರಲು ನಮ್ಮ ಸಂಕಲ್ಪವಾಗಿದೆ. ಯುವಕರಿಗಾಗಿ ಕೌಶಲ್ಯಾಭಿವೃದ್ಧಿ ಯೋಜನೆಗಳ ಜಾರಿಯಾಗಲಿದೆ. ಕಪ್ಪುಹಣ ತಡೆಗೆ ಚುನಾವಣಾ ಆಯೋಗ ಶಿಫಾರಸು ಮಾಡಿದೆ. ಚುನಾವಣಾ ಆಯೋಗದ ಶಿಫಾರಸಿಗೆ ಬಿಜೆಪಿ ಬೆಂಬಲ ನೀಡಿದೆ ಎಂದು ಪ್ರಧಾನಿ ಅವರು ಚುನಾವಣಾ ಆಯೋಗಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
 
 
 
ಯುವಶಕ್ತಿಯ ತಾಕತ್ತನ್ನು ವಿಶ್ವಕ್ಕೆ ತೋರಿಸಬಹುದಾಗಿದೆ. ಉತ್ತರಪ್ರದೇಶದಲ್ಲಿ ಹಲವು ಹಳ್ಳಿಗಳಲ್ಲಿ ವಿದ್ಯುತ್ ಸಂಪರ್ಕವಿಲ್ಲ. 15ರಿಂದ 16 ಸಾವಿರ ಹಳ್ಳಿಗಳಲ್ಲಿ ವಿದ್ಯುತ್ ಸಂಪರ್ಕವಿಲ್ಲ. ಉತ್ತರಪ್ರದೇ ಸರ್ಕಾರ ತಡೆಯೊಡ್ಡದಿದ್ರೆ ವಿದ್ಯುತ್ ಪೂರೈಕೆಯಾಗುತ್ತಿತ್ತು. ಶೀಘ್ರವೇ ಉತ್ತರಪ್ರದೇಶದ ಹಳ್ಳಿಹಳ್ಳಿಗೆ ವಿದ್ಯುತ್ ಪೂರೈಕೆ ಮಾಡುತ್ತೇವೆ ಎಂದು ಪ್ರಧಾನಿ ಹೇಳಿದ್ದಾರೆ.

LEAVE A REPLY

Please enter your comment!
Please enter your name here