ಕಾನೂನು ಶಿಕ್ಷಣ ಭವಿಷ್ಯದ ಬೆಳಕು

0
540

ನಮ್ಮ ಪ್ರತಿನಿಧಿ ವರದಿ
ಸರಕಾರಿ ಪದವಿ ಪೂರ್ವ ಕಾಲೇಜು ಸಿದ್ದಕಟ್ಟೆಯಲ್ಲಿ ಕಾನೂನು ಮಾಹಿತಿ ಕಾರ್ಯಕ್ರಮವು ಡಿ.9ರಂದು ನಡೆಯಿತು. ಕಾರ್ಯಕ್ರಮವನ್ನು ಕಾನೂನು ಕಾಲೇಜಿನ ಉಪನ್ಯಾಸಕಿಯಾದ ಕು|| ಶಕ್ತಿತ್ರಯ ಸ್ವಾಗತಿಸಿ ಪ್ರಸ್ಥಾವನೆಗೈದರು.
 
 
 
ಮುಂದುವರೆದು ಮಾತನಾಡುತ್ತಾ ಇಂದು ಕಾನೂನು ಶಿಕ್ಷಣವನ್ನು ಪಡೆಯುವುದು ಅತ್ಯಗತ್ಯ ,ಇದರಲ್ಲೂ ಮಹಿಳೆಯರು ಇಂದು ಅತ್ಯಂತ ದೌರ್ಜನ್ಯಕ್ಕೊಳಗಾಗುತ್ತಿರುವುದರಿಂದ ಅವರ ಹಕ್ಕುಗಳ ಬಗೆಗೆ ತಿಳಿದುಕೊಳ್ಳಲು ಕಾನೂನು ಅರಿವು ಅವಶ್ಯವೆಂದರು.
 
 
 
ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಪದ್ಮನಾಭ ರೈ ಅಧ್ಯಕ್ಷೀಯ ನೆಲೆಯಲ್ಲಿ ಮಾತುಗಳನ್ನಾಡುತ್ತಾ ವಿವೇಕಾನಂದ ಕಾನೂನು ಕಾಲೇಜು ಜನಸಾಮಾನ್ಯರಿಗೆ ಅದರಲ್ಲೂ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಕಾರ್ಯಕ್ರಮ ನೀಡುತ್ತಾ ಬರುತ್ತಿರುವುದು ಶ್ಲಾಘನಾರ್ಹ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
 
 
 
ಸಂಪನ್ಮೂಲ ವ್ಯಕ್ತಿಗಳಾಗಿ ಕಾನೂನು ಕಾಲೇಜಿನ ವಿದ್ಯಾರ್ಥಿಗಳಾದ ಮನೋಜ್ ಇವರು ಗ್ರಾಹಕರ ಹಕ್ಕು ಮತ್ತು ಕರ್ತವ್ಯಗಳು, ಅರುಣೋದಯ ಇವರು ಪ್ರಥಮ ವರ್ತಮಾನ ವರದಿ ಯ ಬಗೆಗೆ ಮಾಹಿತಿಯನ್ನು ನೀಡಿದರು , ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ನ್ಯಾಯವಾದಿ ಗಿರೀಶ್ ಮುಳಿಯಾಲ ರವರು ಉಪಸ್ಥಿತರಿದ್ದರು.ಕಾನೂನು ಕಾಲೇಜು ವಿದ್ಯಾರ್ಥಿನಿ ಶಿವಾನಿ ನಿರೂಪಿಸಿದರು.

LEAVE A REPLY

Please enter your comment!
Please enter your name here