ಕಾನೂನು ಪ್ರಕಾರ ಕ್ರಮ ಜರುಗಿಸಲಿ: ರೈ

0
360

 
ಮಂಗಳೂರು ಪ್ರತಿನಿಧಿ ವರದಿ
ನನ್ನ ಮಗ ತಪ್ಪು ಮಾಡಿದರೆ ಕಾನೂನಿನಂತೆ ಕ್ರಮ ಜರುಗಿಸಲಿ ಎಂದು ರಾಜ್ಯ ಅರಣ್ಯ ಹಾಗೂ ಪರಿಸರ ಖಾತೆ ಸಚಿವ ರಮಾನಾಥ ರೈ ಹೇಳಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಸಚಿವರು, ನನ್ನ ರಾಜಕೀಯ ವಿಚಾರದಲ್ಲಿ ನನ್ನ ಮಗ ಮೂಗು ತೂರಿಸಿಲ್ಲ. ಸಾರ್ವಜನಿಕವಾಗಿ ಆತನ ಪರಿಚಯ ಜಿಲ್ಲೆಯ ಜನರಿಗೆ ಇಲ್ಲ. ‘ಮಕ್ಕಳು ಎಲ್ಲಿ ಹೀಗಿ ಏನು ತಪ್ಪು ಮಾಡುತ್ತಾರೆ? ಹಿಂದೆ ಹೋಗಿ ನೋಡಲು ಸಾಧ್ಯವಿಲ್ಲ ಎಂದು ರೈಗಳು ಹೇಳಿದ್ದಾರೆ.
 
 
ಬೇರೆಯವರ ಮಕ್ಕಳು ತಪ್ಪು ಮಾಡಿದಾಗಲೂ ಟೀಕಿಸಿಲ್ಲ. ಹೀಗಾಗಿ ತಪ್ಪು ಮಾಡಿದ್ದಾನೆ ಅಂತಾದ್ರೆ ಕ್ರಮ ಜರುಗಿಸಲಿ. ಕಾನೂನು ಪ್ರಕಾರ ಕ್ರಮ ಜರುಗಿಸಲಿ ಎಂದು ರಮಾನಾಥ ರೈ ಹೇಳಿದ್ದಾರೆ.
 
 
ಸಾರ್ವಜನಿಕವಾಗಿ ಅನುಚಿತವಾಗಿ ವರ್ತಿಸಿದ್ದ ಆರೋಪ ಹಿನ್ನೆಲೆಯಲ್ಲಿ ನಿನ್ನೆ ಸಚಿವ ರೈಗಳ ಪುತ್ರ ದೀಪಕ್ ರೈ ವಿರುದ್ಧ ಕೇಸ್ ದಾಖಲಾಗಿತ್ತು. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.
 
 
ಮಾಜಿ ಗ್ರಾಮ ಪಂಚಾಯತ ಸದಸ್ಯರ ಮನೆ ಮುಂದೆ ಕಾರು ನಿಲ್ಲಿಸಿ, ಗೆಳೆಯರೊಡನೆ ಎಣ್ಣೆ ಪಾರ್ಟಿ ಮಾಡುತ್ತಿದ್ದ ರಾಜ್ಯ ಅರಣ್ಯ ಹಾಗೂ ಪರಿಸರ ಖಾತೆ ಸಚಿವರ ರಮಾನಾಥ ರೈ ಅವರ ಪುತ್ರ ದೀಪು ರೈ, ಅನುಚಿತ ವರ್ತನೆ ತೋರಿ ಪುಂಡಾಟಿಕೆ ಮೆರೆದಿದ್ದಾರೆ ಎಂದು ಹೇಳಲಾಗುತ್ತಿದೆ.
 
ಸಾರ್ವಜನಿಕ ಸ್ಥಳದಲ್ಲಿ ಅನುಚಿತ ವರ್ತನೆ ತೋರಿ ಪುಂಡಾಟಿಕೆ ಮೇರೆದಿರುವುದನ್ನು ಪ್ರಶ್ನಿಸಿದ ಸ್ಥಳೀಯರಿಗೆ ನಾನು ಮಂತ್ರಿ ಮಗ ನಿಮ್ಮನ್ನೆಲ್ಲಾ ಜೈಲಿಗೆ ಕಳುಹಿಸುತ್ತೇನೆ ಎಂದು ಧಮ್ಕಿ ಹಾಕಿದ್ದಲ್ಲದೆ, ಸ್ನೇಹಿತರೊಂದಿಗೆ ಸ್ಥಳೀಯರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಆಕ್ರೋಶಗೊಂಡ ಸ್ಥಳಿಯರು ಮಂತ್ರಿ ಪುತ್ರನನ್ನು ಬಾರಕೋಲಿನಿಂದ ಬಾರಿಸಿ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

LEAVE A REPLY

Please enter your comment!
Please enter your name here