ಕಾನೂನು ಜನರ ರಕ್ಷಣೆಗಿರುವುದೇ ವಿನಃ ಹೆದರಬೇಕಿಲ್ಲ : ಪ್ರದೀಪ್

0
232

ನಮ್ಮ ಪ್ರತಿನಿಧಿ ವರದಿ
ಸರಕಾರಿ ಪದವಿ ಪೂರ್ವ ಕಾಲೇಜು ಬೆಳಿಯೂರುಕಟ್ಟೆ ನಲ್ಲಿ ಸಂವಿಧಾನ ಶಿಲ್ಪಿ ಡಾ|| ಬಿ.ಆರ್.ಅಂಬೇಡ್ಕರ್ ರವರ 125ನೇ ವರ್ಷಾಚರಣೆಯ ಸಂಬಂಧ ಸಾಂವಿಧಾನಿಕ ಕರ್ತವ್ಯಗಳ ಅರಿವು ಜಾಗೃತಿ ಕಾರ್ಯಕ್ರಮದ ಪ್ರಯುಕ್ತ ಶನಿವಾರ ಕಾನೂನು ಮಾಹಿತಿ ಕಾರ್ಯಕ್ರಮ ನಡೆಯಿತು.
 
 
 
ಕಾರ್ಯಕ್ರಮವನ್ನು ಕಾನೂನು ಕಾಲೇಜಿನ ಉಪನ್ಯಾಸಕಿ ಹಾಗೂ ಕಾನೂನು ಅರಿವು ಮಾಹಿತಿ ಘಟಕದ ಮುಖ್ಯಸ್ಥೆ ಅಕ್ಷತಾ ಸ್ವಾಗತಿಸಿ ಪ್ರಸ್ಥಾವಿಸಿದರು. ವೈಭವಿ ಗ್ರಾಹಕರ ಹಕ್ಕುಗಳು ಎಂಬ ವಿಷಯದ ಮೇಲೆ ಮಾಹಿತಿ ನೀಡಿದರು. ಪ್ರದೀಪ್ ಪ್ರಥಮ ವರ್ತಮಾನ ವರದಿ ಹಾಗೂ ಆರೋಪಿತರ ಹಕ್ಕುಗಳು, ತೇಜಸ್ ಮೂಲಭೂತ ಕರ್ತವ್ಯಗಳು ಹಾಗೂ ವಿವೇಕ್ ಕೃಷ್ಣ ಸಾಮಾನ್ಯ ಕಾನೂನುಗಳು ಮತ್ತು ಕಾನೂನು ಕಲಿಕೆ ಮಹತ್ವ ಹಾಗೂ ಉದ್ಯೋಗಾವಕಾಶಗಳು ಬಗ್ಗೆ ಮಾಹಿತಿ ನೀಡಿದರು. ಕಾಲೇಜಿನ ಪ್ರಾಂಶುಪಾಲರಾದ ಗೀತಾಶ್ರೀ ಅಧ್ಯಕ್ಷೀಯ ನೆಲೆಯಲ್ಲಿ ಮಾತುಗಳನ್ನಾಡಿ ಶುಭ ಹಾರೈಸಿದರು . ವೇದಿಕೆಯಲ್ಲಿ ಉಪನ್ಯಾಸಕರಾದ ಹರಿಪ್ರಸಾದ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here