ಕಾನೂನು ಚೌಕಟ್ಟಿನಲ್ಲಿ ಕಾರ್ಯ ನಿರ್ವಹಿಸಿ

0
464

ಬೆಂಗಳೂರು ಪ್ರತಿನಿಧಿ ವರದಿ
ಯಾವುದೇ ಒತ್ತಡ ಹಾಗೂ ಒತ್ತಾಯಗಳಿಗೆ ಮಣಿಯದೆ ಕಾನೂನು ಚೌಕಟ್ಟಿನಲ್ಲಿ ಕಾರ್ಯ ನಿರ್ವಹಿಸಿ ಎಂದು ಕನ್ನಡ ಮತ್ತು ಸಂಸ್ಕøತಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿ ಡಾ: ಎನ್.ಎಸ್. ಚನ್ನಪ್ಪಗೌಡ ಅವರು ತಿಳಿಸಿದರು.
 
 
ನಗರದ ವಾರ್ತಾ ಸೌಧದಲ್ಲಿ ಸೋಮವಾರ ಆಯೋಜಿಸಿದ್ದ ರಾಜ್ಯ ವಾರ್ತಾ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆಯ ರಾಜ್ಯಮಟ್ಟದ ಅಧಿಕಾರಿಗಳ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು ಸರ್ಕಾರಿ ಸೇವೆಗೆ ಸೇರಿದ ಮೇಲೆ ವರ್ಗಾವಣೆಗೆ ಅಂಜಬಾರದು ಎಂದರು.
 
 
 
ಸರ್ಕಾರ ರೂಪಿಸಿರುವ ಹಾಗೂ ರೂಪಿಸುವ ಯೋಜನೆಗಳಿಗೆ ವಿವಿಧ ಮಾಧ್ಯಮಗಳ ಪ್ರಚಾರ ದೊರಕಿಸಿಕೊಡುವ ಮಹತ್ತರ ಕಾರ್ಯನವನ್ನು ನಿರ್ವಹಿಸುತ್ತಿರುವ ವಾರ್ತಾ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆಯು ಸರ್ಕಾರದ ವರ್ಚಸ್ಸು ವೃದ್ಧಿಸುವಲ್ಲಿ ಉತ್ತಮ ಪಾತ್ರ ನಿರ್ವಹಿಸುತ್ತಿದೆ. ಈ ಹಿನ್ನೆಲೆಯಲ್ಲಿ 2016-17 ನೇ ಸಾಲಿನಲ್ಲಿ ರಾಜ್ಯ ಆಯವ್ಯಯದಲ್ಲಿ ಗಣನೀಯ ಏರಿಕೆ ಉಂಟಾಗಿದೆ ಎಂದು ಅವರು ಹೇಳಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕ ಶ್ರೀ ಎನ್.ಆರ್. ವಿಶುಕುಮಾರ್, ಜಂಟಿ ನಿರ್ದೇಶಕರಾದ ಶ್ರೀ ಎಂ. ರವಿಕುಮಾರ್ ಮತ್ತು ಶ್ರೀ ಎನ್. ಭೃಂಗೀಶ್ ಅವರೂ ಸೇರಿದಂತೆ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

LEAVE A REPLY

Please enter your comment!
Please enter your name here