ಕಾನೂನು ಅರಿವು ಕಾರ್ಯಕ್ರಮ

0
294

 
ನಮ್ಮ ಪ್ರತಿನಿಧಿ ವರದಿ
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು, ಮಂಗಳೂರು ವಕೀಲರ ಸಂಘ, ಮಂಗಳೂರು ಮತ್ತು ಜಿಲ್ಲಾ ಕಾರಾಗೃಹ, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಜು.12ರಂದು ಜಿಲ್ಲಾ ಕಾರಾಗೃಹ್ರ, ಮಂಗಳೂರು ಇಲ್ಲಿ ವಿಚಾರಣಾಧೀನ ಬಂಧಿಗಳಿಗಾಗಿ ವಿಚಾರಣಾಧೀನ ಬಂಧಿಗಳ ಹಕ್ಕುಗಳು ಮತ್ತು ಮನವಿ ಚೌಕಾಸಿ (ಪ್ಲೀ ಬಾರ್ಗೈನಿಂಗ್) ಬಗ್ಗೆ ಕಾನೂನು ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
 
 
ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಮತಿ ಎಸ್.ಹೆಚ್, ಪುಷ್ಪಾಂಜಲಿದೇವಿ, ಗೌರವಾನ್ವಿತ 3 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಲ್ಲನಗೌಡ, ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸದಸ್ಯ ಕಾರ್ಯದರ್ಶಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ದ.ಕ., ಮಂಗಳೂರು, ಸಂತೋಷ್ ಎಸ್ ಕುಂದರ್, ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳು (2 ನೇ ನ್ಯಾಯಾಲಯ) ಮತ್ತು ಶ್ರೀ ಮಂಜುನಾಥ. ಆರ್., ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳು (3 ನೇ ನ್ಯಾಯಾಲಯ), ಮಂಗಳೂರು ಮತ್ತು ಎಸ್.ಪಿ. ಚಂಗಪ್ಪ, ಅಧ್ಯಕ್ಷರು, ಮಂಗಳೂರು ವಕೀಲರ ಸಂಘ, ಮಂಗಳೂರುರವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ವಿ. ಕೃಷ್ಣಮೂರ್ತಿ, ಅಧೀಕ್ಷಕರು, ಜಿಲ್ಲಾ ಕಾರಾಗೃಹ, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರುರವರು ವಹಿಸಿದ್ದರು.
 
 
ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಶ್ರೀ ರವೀಂದ್ರ ಮುನ್ನಿಪಾಡಿ, ನ್ಯಾಯವಾದಿ ಮತ್ತು ಕಾನೂನು ಸಲಹೆಗಾರರು, ಕಾನೂನು ಸಲಹಾ ಕೇಂದ್ರ, ಜಿಲ್ಲಾ ಕಾರಾಗೃಹ, ಮಂಗಳೂರು ರವರು ವಿಚಾರಣಾಧೀನ ಬಂಧಿಗಳ ಹಕ್ಕುಗಳು ಮತ್ತು ಮನವಿ ಚೌಕಾಸಿ (ಪ್ಲೀ ಬಾರ್ಗೈನಿಂಗ್) ಬಗ್ಗೆ ಮಾಹಿತಿ ನೀಡಿದರು.

LEAVE A REPLY

Please enter your comment!
Please enter your name here