ಕಾಡಾನೆ ಹಿಂಡು ಪ್ರತ್ಯಕ್ಷ

0
212

ತುಮಕೂರು ಪ್ರತಿನಿಧಿ ವರದಿ
ತುಮಕೂರು ಜಿಲ್ಲೆಯಲ್ಲಿ ಮತ್ತೆ ಕಾಡಾನೆ ಹಿಂಡು ಪ್ರತ್ಯಕ್ಷವಾಗಿದೆ. ಕಳೆದ 1 ತಿಂಗಳಿನಿಂದಲೂ ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ.
 
 
ಜಿಲ್ಲೆಯ ತಿಪಟೂರು ಬಳಿ ಗೊರಗೊಂಡನಹಳ್ಳಿಯಲ್ಲಿ ಆನೆಗಳ ಹಿಂಡು ಪ್ರತ್ಯಕ್ಷವಾಗಿದೆ. ಕಾಡಾನೆಗಳ ಹಿಂಡು ಕಂಡು ಗ್ರಾಮಸ್ಥರು ತೀವ್ರ ಆತಂಕಗೊಂಡಿದ್ದಾರೆ. ಇದರಿಂದ ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.
 
 
 
ಕಳೆದ ರಾತ್ರಿಯಿಂದಲೂ ಆನೆಗಳ ಚಲನವಲನ ಪರಿಶೀಲನೆ ನಡೆಸಲಾಗಿದೆ. ಯಾರೂ ಕೂಡ ತೋಟ, ಗದ್ದೆಗಳಿಗೆ ತೆರಳದಂತೆ ಸೂಚನೆ ನೀಡಲಾಗಿದೆ. ಗಲಾಟೆ, ಗದ್ದಲ ಮಾಡದಂತೆ ಅರಣ್ಯ ಸಿಬ್ಬಂದಿಗಳು ಗ್ರಾಮಸ್ಥರಿಗೆ ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here