ಕಾಡಾನೆ ಹಾವಳಿ

0
482

ಚಾಮರಾಜನಗರ ಪ್ರತಿನಿಧಿ ವರದಿ
ರೈತರ ಜಮೀನುಗಳಿಗೆ ನುಗ್ಗಿ 8 ಕಾಡಾನೆಗಳು ಪುಂಡಾಟಿಕೆ ನಡೆಸಿದ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬಾಚಳ್ಳಿ ಗ್ರಾಮದಲ್ಲಿ ಕಳೆದ ತಡರಾತ್ರಿ ಸಂಭವಿಸಿದೆ.
 
 
ರೈತ ಶೇಖರ್ ನಂಜಪ್ಪ ಎಂಬುವರಿಗೆ ಸೇರಿದ ಜಾಗದಲ್ಲಿ ಬೆಳೆ ನಾಶವಾಗಿದೆ. 8 ಜಾಗದಲ್ಲಿ ಬೆಳೆದಿದ್ದ ಕಲ್ಲಂಗಡಿ, ಬಾಳೆ ಬೆಳೆಗಳನ್ನು ಆನೆಗಳು ನಾಶಮಾಡಿದೆ.
 
 
ಬಂಡೀಪುರ ರಾಷ್ಟ್ರೀಯ ಉದ್ಯಾವನ ವ್ಯಾಪ್ತಿಯ ಪ್ರದೇಶದಲ್ಲಿ ಕಾಡಾನೆ ಹಿಂಡುಗಳು ಹಾವಳಿ ಹೆಚ್ಚಾಗಿದೆ.ಕಳೆದ 1 ವಾರದಿಂದಲೂ ನಿರಂತರವಾಗಿ ಕಾಡಾನೆಗಳು ದಾಳಿ ನಡೆಸುತ್ತಿದೆ. ಇದರಿಂದ ಅರಣ್ಯ ಇಲಾಖೆ ವಿರುದ್ಧ ಸ್ಥಳೀಯ ನಿವಾಸಿಗಳು ಆಕ್ರೋಶಗೊಂಡಿದ್ದಾರೆ.

LEAVE A REPLY

Please enter your comment!
Please enter your name here