ಚಾಮರಾಜನಗರ ಪ್ರತಿನಿಧಿ ವರದಿ
ಕಾಡಾನೆ ಸಾವನ್ನಪ್ಪಿದ್ದ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಟಿಬೆಟಿಯನ್ ಕಾಲೋನಿ ಡಿ ವಿಲೇಜ್ ಬಳಿ ಸಂಭವಿಸಿದೆ. ಜಮೀನಿನಲ್ಲಿ ತಂತಿ ಬೇಲಿಗೆ ವಿದ್ಯುತ್ ಸಂಪರ್ಕ ಕೊಟ್ಟ ಹಿನ್ನೆಲೆಯಲ್ಲಿ ಕಾಡಾನೆಗೆ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿರುವ ಶಂಕೆಯಿದೆ.
ಬೈಲೂರು ವಲಯದಲ್ಲಿನ ದೊಂಡಯ್ಯ ಎಂಬುವರ ಜಮೀನಿನಲ್ಲಿ ಕಾಡಾನೆ ಶವಪತ್ತೆಯಾಗಿದ್ದು, ಸ್ಥಳಕ್ಕೆ ಬೈಲೂರು ಆರ್ ಎಫ್ ಒ ಮಂಜುನಾಥ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಬಿಳಿಗಿರಿ ರಂಗನಾಥ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.