ಕಾಡಾನೆಗೆ ಬಸ್ ಡಿಕ್ಕಿ: ಆನೆ ಗಂಭೀರ

0
329

 
ರಾಷ್ಟ್ರೀಯ ಪ್ರತಿನಿಧಿ ವರದಿ
ಕಾಡಾನೆಗೆ ಸರ್ಕಾರಿ ಬಸ್ ಡಿಕ್ಕಿಯಾದ ಪರಿಣಾಮ ಕಾಡಾನೆ ಗಂಭೀರ ಗಾಯಗಳಾದ ಘಟನೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಸೂಳಗಿರಿ ಬಳಿ ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಸಂಭವಿಸಿದೆ.
 
ಪಶು ವೈದ್ಯಕೀಯ ಆಸ್ಪತ್ರೆ ವೈದ್ಯರು ಕಾಡಾನೆಗೆ ಚಿಕಿತ್ಸೆ ನೀಡುತ್ತಿದ್ದಾರೆ. ಕಾಡಾನೆಗೆ ತಮಿಳುನಾಡು ಸರ್ಕಾರಿ ಸಾರಿಗೆ ಸಂಸ್ಥೆ ಬಸ್ ಡಿಕ್ಕಿ ಹಿಡೆದಿದೆ. ಬಸ್ ಕೃಷ್ಣಗಿರಿಯಿಂದ ಬೆಂಗಳೂರುಗೆ ತೆರಳುತ್ತಿತ್ತು.
 
 
ಹೆದ್ದಾರಿಯಲ್ಲಿ ದಟ್ಟ ಮಂಜು ಕವಿದ ವಾತಾವರಣದಿಂದಾಗಿ ಬಸ್ ಚಾಲಕನಿಗೆ ರಸ್ತೆ ದಾಟುತ್ತಿದ್ದ ಆನೆಗಳು ಕಾಣಲಿಲ್ಲ ಎಂದು ಹೇಳಲಾಗಿದೆ. ಸುಮಾರು 15ವರ್ಷದ ಆನೆಯ ಹಿಂಬದಿ ಎರಡೂ ಕಾಲುಗಳಿಗೆ ತೀವ್ರ ಗಾಯವಾದ ಕಾರಣ ಎದ್ದು ನಿಲ್ಲಲು ಸಾಧ್ಯವಾಗದೆ ತೀವ್ರ ಅಸ್ವಸ್ಥವಾಗಿತ್ತು.

LEAVE A REPLY

Please enter your comment!
Please enter your name here