ಕಾಂತಾಜೆ ಈಶ್ವರ ಭಟ್ಟರಿಗೆ ಚಾತುರ್ಮಾಸ್ಯ ಪ್ರಶಸ್ತಿ

0
323

ಬೆಳ್ತಂಗಡಿ ಪ್ರತಿನಿಧಿ ವರದಿ
ಉಪ್ಪಿನಂಗಡಿ ಮಂಡಲದಿಂದ ಅಧಿಕೃತ ಆಹ್ವಾನ
ಬೆಳ್ತಂಗಡಿ ತಾಲೂಕಿನ ಉದ್ಯಮಿ, ಸಮಾಜಸೇವಕ, ಹವ್ಯಕ ಮುಖಂಡ ಕಾಂತಾಜೆ ಈಶ್ವರ ಭಟ್ಟರಿಗೆ ಹೊಸನಗರ ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳ `ಗೋಚಾತುರ್ಮಾಸ್ಯ’ದ ಸೀಮೋಲ್ಲಂಘನ ಕಾರ್ಯಕ್ರಮದ ಸಂದರ್ಭದಲ್ಲಿ `ಚಾತುರ್ಮಾಸ್ಯ ಪ್ರಶಸ್ತಿ’ಯನ್ನು ಶ್ರೀಗಳು ಪ್ರದಾನ ಮಾಡಲಿದ್ದಾರೆ.
 
venur_vaarte1
img_0308
ಉಪ್ಪಿನಂಗಡಿ ಹವ್ಯಕಮಂಡಲದ ಪ್ರಮುಖರು ಈಶ್ವರ ಭಟ್ಟರ ನಿವಾಸಕ್ಕೆ ತೆರಳಿ ಅಧಿಕೃತ ಆಹ್ವಾನ ನೀಡಿದರು. ಈ ಸಂದರ್ಭದಲ್ಲಿ ಉಪ್ಪಿನಂಗಡಿ ಹವ್ಯಕ ಮಂಡಲದ ದಿಗ್ದರ್ಶಕ ಬಾಲ್ಯ ಶಂಕರ ಭಟ್, ಕಾರ್ಯದರ್ಶಿ ಶ್ರೀಧರ್ ಭಟ್, ವೇಣೂರು ವಲಯಾಧ್ಯಕ್ಷ ಹನ್ಯಾಡಿ ಗೋಪಾಲಕೃಷ್ಣ ಭಟ್, ಹವ್ಯಕ ಸಂಘಟನೆಯ ಪದಾಧಿಕಾರಿಗಳಾದ ಉಂಡೆಮನೆ ನಾರಾಯಣ ಭಟ್, ಮುರ್ಗಜೆ ರವಿಶಂಕರ, ಕೇಶವ ಭಟ್ ಪದ್ಯಾಣ, ರವೀಶ್ ಭಟ್ ಅತ್ತಾಜೆ, ದಡ್ಡು ಬಾಲಕೃಷ್ಣ ಭಟ್, ಶ್ಯಾಂ ಭಟ್ ಅತ್ತಾಜೆ, ಹೇರಂಭ ಶಾಸ್ತ್ರಿ, ದಿವಾಕರ ಶಾಸ್ತ್ರಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here