ಕಾಂಗ್ರೆಸ್ ನಾಯಕರ ವಿರುದ್ಧ ಮತ್ತೆ ಗುಡುಗು

0
151

ಮಂಗಳೂರು ಪ್ರತಿನಿಧಿ ವರದಿ
ಹಣ ಕೊಟ್ಟು ಕಾಂಗ್ರೆಸ್ ಸಮಾವೇಶಕ್ಕೆ ಜನರನ್ನು ಕರೆತರಲ್ವಾ? 1 ಲಕ್ಷ ಜನರ ಸೇರಿಸಲು 500, 1000ರೂ. ಕೊಡೊದಿಲ್ವಾ? ಎಂದು ಕಾಂಗ್ರೆಸ್ ನಾಯಕರಿಗೆ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ನೇರಪ್ರಶ್ನೆ ಹಾಕಿದ್ದಾರೆ.
 
 
 
ಮಂಗಳೂರಿನಲ್ಲಿ ಮಾತನಾಡಿದ ಕಾಂಗ್ರೆಸ್ಸಿಗ ಜನಾರ್ದನ ಪೂಜಾರಿ 1ರೂ. ನೋಟು ಕೊಟ್ಟು ಸಮಾವೇಶಕ್ಕೆ ಜನರ ಸೇರಿಸ್ತಾರಾ? ಹಣ ಕೊಟ್ಟು ಜನರನ್ನು ಕರೆತರುತ್ತಾರೆಂದು ಪರೋಕ್ಷ ಟೀಕಿಸಿದ್ದಾರೆ.
 
 
ಇಂದಿರಾ ಹೆಸರಿನಲ್ಲಿ ನಡೆಯುವ ಸಮಾವೇಶ ಸರಳವಾಗಿರಲ್ಲ. ಸಮಾವೇಶದಲ್ಲಿ ಶಾಸಕರು, ಸಚಿವರು ಘೋಷಣೆ ಮಾಡಬೇಕು. ಇನ್ಮುಂದೆ ಸರ್ಕಾರಿ ಭತ್ಯೆ ಸ್ವೀಕರಿಸಲ್ಲವೆಂದು ಘೋಷಿಸಬೇಕು. ಬರಗಾಲ ಹಿನ್ನೆಲೆಯಲ್ಲಿ ಭತ್ಯೆ ಬೇಡವೆಂದು ಘೋಷಿಸಬೇಕು. ಸುಮ್ಮನೆ ಬಂದು ವಾಪಸಾದರೆ ಈ ಪೂಜಾರಿ ಬಿಡುವುದಿಲ್ಲ. ಇಂದು ನಡೆಯುವ ಸಮಾವೇಶಕ್ಕೆ ನಾನು ಹೋಗುವುದಿಲ್ಲ ಎಂದು ಕಾಂಗ್ರೆಸ್ ಮುಖಂಡನೇ ಕಾಂಗ್ರೆಸ್ ನಾಯಕರಿಗೆ ಟಾಂಗ್ ಇಟ್ಟಿದ್ದಾನೆ.

LEAVE A REPLY

Please enter your comment!
Please enter your name here