ಕಳ್ಳ ಬರುತ್ತಾನೆ ಎಂಬ ಮೂನ್ಸೂಚನೆ ನನಗಿತ್ತು…!

0
1040

ನಿತ್ಯ ಅಂಕಣ:೨೪

ಕೃಷ್ಣ ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿ ಇರುವ ಕಾಣಿಕೆ ಹಣವನ್ನು ಎಣಿಕೆ ಮಾಡುವಂತೆ ದೇವಾಸ್ಥನದ ಸೇವಾಕರ್ತರಲ್ಲಿ ನಿತ್ಯಾನಂದ ಗುರುಗಳು ಆಜ್ಞಾಪಿಸುತ್ತಾರೆ. ಎಣಿಕೆಯ ಸಮಯ ಬಂದಿಲ್ಲ. ಎಣಿಕೆ ಮಾಡಿ ಕೆಲವು ದಿನಗಳು ಮಾತ್ರ ಕಳೆದಿವೆ, ಹುಂಡಿ ತುಂಬಿರಲಿಕ್ಕಿಲ್ಲ..! ಎಂದು ಸೇವಾಕರ್ತರು ಗುರುಗಳಲ್ಲಿ ಹೇಳುತ್ತಾರೆ. ಆಗ ಗುರುಗಳು.. ಪರವಾಗಿಲ್ಲ, ಸಂಗ್ರಹಗೊಂಡ ಒಟ್ಟು ಮೊತ್ತದಲ್ಲಿ ಕಾಲಂಶ ಮಾತ್ರ ಹುಂಡಿಯಲ್ಲಿ ಪುನಃ ಹಾಕಿಡಿ. ಉಳಿದದ್ದು ಭಂಡಾರದೊಳಗೆ ಜಮಾಮಾಡಿ ಎಂದು ಹೇಳುತ್ತಾರೆ. ಗುರುಗಳು ಹೇಳಿದಂತೆ ಸೇವಾಕರ್ತರು ರಾತ್ರಿಯ ಸಮಯದಲ್ಲಿ ಕಾಣಿಕೆ ಹಣವನ್ನು ಎಣಿಸುವ ಕೆಲಸ ನಿರ್ವಹಿಸುತ್ತಾರೆ. ಎಣಿಕೆ ಕಾರ್ಯ ಮುಗಿದ ಬಳಿಕ ಸೇವಾಕರ್ತರು ಮಲಗುತ್ತಾರೆ.

ನಸುಕಿನ ಜಾವದಲ್ಲಿ ಎದ್ದಾಗ ಸೇವಾಕರ್ತರಿಗೆ ಕಾಣಿಕೆ ಹುಂಡಿಯ ಬೀಗ ಒಡೆದಿರುವುದು ಕಂಡುಬರುತ್ತದೆ. ಪರಿಶೀಲಿಸಿದಾಗ ಹುಂಡಿಯಲ್ಲಿ ಉಳಿಸಿಟ್ಟ ಎಲ್ಲಾ ಕಾಣಿಕೆ ಹಣವು ಕಳವಾಗಿರವುದು ಗೋಚರಿಸುತ್ತದೆ. ಗಾಭರಿಯಾದ ಸೇವಾಕರ್ತರು ನಿತ್ಯಾನಂದ ಸ್ವಾಮಿಯಲ್ಲಿಗೆ ಬಂದು, ಕಾಣಿಕೆ ಹುಂಡಿಯ ಹಣ ಕಳವಾದ ಬಗ್ಗೆ ವಿಷಯ ಮುಟ್ಟಿಸುತ್ತಾರೆ. ಆದರೆ ಸ್ವಾಮಿಗಳು ಗಾಭರಿ…! ಅಚ್ಚರಿ..! ವ್ಯಕ್ತಪಡಿಸುವುದಿಲ್ಲ. ಎಲ್ಲವು ತಿಳಿದಿರುವಂತೆ ಸುಮ್ಮನಿರುತ್ತಾರೆ. ಗುರುಗಳು ಮೌನ ವಹಿಸಿರುವುದು ಸೇವಾಕರ್ತರಿಗೂ ಅಚ್ಚರಿ ಅನಿಸುತ್ತದೆ. ಆವಾಗ ಸ್ವಾಮಿಗಳು ‘ಕಳ್ಳ ಬರುತ್ತಾನೆ ಎಂಬ ಮೂನ್ಸೂಚನೆ ನನಗಿತ್ತು…!’ ಅದಕ್ಕಾಗಿಯೇ ನಿಮ್ಮಲ್ಲಿ ಕಾಣಿಕೆ ಹುಂಡಿಯ ಹಣ ಎಣಿಸಿ ಭಂಡಾರದೊಳಗೆ ಜಮಾ ಮಾಡಲು ಹೇಳಿದ್ದು. ಸ್ವಾಮಿಗಳೇ ತಾವು ಕಾಲಾಂಶ ಹಣ ಇಡಲು ಹೇಳಿದ್ದು ಯಾಕೆ..? ಅದು ಕೂಡವು ಕಳ್ಳರ ಪಾಲಾಯಿತಲ್ಲ…! ಎಂದು ಸೇವಾಕರ್ತರು ಪ್ರಶ್ನಿಸುತ್ತಾರೆ.

ನಿನ್ನೆಯ ದಿನ ಬಂದ ಭಕ್ತಗಡಣದಲ್ಲಿ ಅಸಹಾಯಕನಾಗಿದ್ದ ಬಡ ಭಕ್ತನೊರ್ವನು ‘ನಾನು ಹಣಕಾಸಿನ ಸಮಸ್ಯೆಯಲ್ಲಿ ಸಿಲುಕಿದ್ದೇನೆ. ಅಗತ್ಯವಾಗಿ ಹಣ ಬೇಕಾಗಿದೆ. ಅದಕ್ಕಾಗಿ ಇಂದು ರಾತ್ರಿಯ ಹೊತ್ತು ಕೃಷ್ಣ ದೇವರ ಗುಡಿಯ ಕಾಣಿಕೆ ಹುಂಡಿ ಹಣವನ್ನು ಕಳ್ಳತನ ಮಾಡುತ್ತೇನೆ. ನಾನು ಕಳ್ಳನಲ್ಲ..! ಕಳ್ಳತನವನ್ನು ಮಾಡಬೇಕಾದ ಅನಿವಾರ್ಯ ಪರಿಸ್ಥಿತಿಯು ನನಗೆ ಎದುರಾಗಿದೆ. ಕ್ಷಮಿಸ ಬೇಕು ಗುರುದೇವ ಎಂದು ಮನದೊಳಗೆ ಪ್ರಾರ್ಥಿಸಿದ್ದಾನೆ. ಆತನ ಪ್ರಾರ್ಥನೆಯಲ್ಲಿ ಅಪರಾಧ ಭಾವನೆಯೂ ಇತ್ತು..! ನನಗೆ ಅವನ ಅಳಲು ಅರ್ಥವಾಯಿತು. ಪ್ರಾರ್ಥನೆಗೆ ಅನುಮತಿ ನೀಡ ಬೇಕಾದ ಪರಿಸ್ಥಿತಿಯು ನನಗೆ ಬಂತು. ಹಾಗಾಗಿಯೇ ತಮ್ಮಲ್ಲಿ ಕಾಲಂಶ ಹಣವನ್ನು ಹುಂಡಿಯಲ್ಲಿ ಉಳಿಸಿಡಲು ಹೇಳಿದ್ದು. ಆತ ಕಳ್ಳತನ ಮಾಡಿದ ಹಣವು ಆತನ ಸಮಸ್ಯೆ ಬಗೆಹರಿಸಿತು. ಮತ್ತೆ ಆತ ಕಳ್ಳತನವನ್ನೇ ವೃತ್ತಿ ಮಾಡಿಕೊಂಡರೆ ಮುಂದೆ ಆತನಿಗೆ ಖಂಡಿತ ಕ್ಷಮೆ ಇಲ್ಲ.. ಎಂದು ಗುರುದೇವರು ಹೇಳುತ್ತಾರೆ. ಈ ಘಟನೆ ಗಣೇಶಪುರಿಯಲ್ಲಿ 1955 ರಲ್ಲಿ ನಡೆದಿರುವುದು. ಗುರು ದೇವರು ಹಾಗೆಯೇ ಸುಳ್ಳು ನುಡಿಯುವನು ಆಗಿರಲಿ, ಕಳ್ಳತನ ಮಾಡುವನು ಆಗಿರಲಿ, ವಂಚಿಸುವನು ಆಗಿರಲಿ. ಯಾರೇ ಆದರೂ ಅವರ ಸಂಕಷ್ಟಗಳಿಗೆ ಸ್ಪಂದಿಸುತ್ತಿದ್ದರು. ಕ್ಷಮಿಸುತ್ತಿದ್ದರು. ಹೊಸಜೀವನ ನಡೆಸಲು ಅವಕಾಶ ನೀಡಿಯೂ… ದುರ್ಗುಣಗಳ ದೂರ ಮಾಡದೆ, ಅಪರಾಧಗಳು ಮತ್ತೆ ಮತ್ತೆ ನಡೆಸುತ್ತ ಹೋದರೆ ಮತ್ತೆ ಯಾವತ್ತೂ ನಿತ್ಯಾನಂದ ಸ್ವಾಮಿಗಳು ಕ್ಷಮಿಸುತ್ತಿರಲಿಲ್ಲ.

ತಾರಾನಾಥ್‌ ಮೇಸ್ತ ಶಿರೂರು.

Advertisement

LEAVE A REPLY

Please enter your comment!
Please enter your name here