ಕಳ್ಳರ ಅಟ್ಟಹಾಸ

0
219

ಬೆಂಗಳೂರು ಪ್ರತಿನಿಧಿ ವರದಿ
ಇಂದು ಬೆಳ್ಳಂಬೆಳಗ್ಗೆ ಬೆಂಗಳೂರಿನ ಮೂರು ಕಡೆಗಳಲ್ಲಿ ಸರಗಳ್ಳರು ಕೈಚಳಕ ತೋರಿಸಿದ್ದಾರೆ. ಜಯನಗರ, ರಾಜಗೋಪಾಲನಗರ ಮತ್ತು ಸಿದ್ಧಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ನಡೆದಿದೆ.
 
 
 
ಇಂದು ಮುಂಜಾನೆ 6.30ಕ್ಕೆ ಜಯನಗರದ 3ನೇ ಬ್ಲಾಕ್ ನಲ್ಲಿ ಕಳ್ಳತನವಾಗಿದೆ. ಹಾಲಿನ ಪ್ಯಾಕೆಟ್ ನೀಡುವ ನೆಪದಲ್ಲಿ ಮಹಿಳೆಯ ಸರಗಳವು ಆಗಿದೆ. ಶಾಂತ ರಾಮಮೂರ್ತಿ(56) ಎಂಬುವವರ ಕತ್ತಿನಲ್ಲಿದ್ದ 40 ಗ್ರಾಂ ಚಿನ್ನದಸರ ಕಳ್ಳತನವಾಗಿದೆ. ಕಳ್ಳರು ಮನೆಯ ಬಾಗಿಲು ತೆರೆದಿಟ್ಟಿದ್ದನ್ನು ಗಮನಿಸಿ ಕಳ್ಳರು ಈ ಕೃತ್ಯ ಎಸಗಿದ್ದಾರೆ.
 
 
ಇಂದು ಬೆಳಗ್ಗೆ 7.10ರ ಸುಮಾರಿಗೆ ರಾಜಗೋಪಾಲನಗರದಲ್ಲೀ ಕಳ್ಳತನ ನಡೆದಿದೆ. ಬೈಕ್ ನಲ್ಲಿ ಬಂದಿದ್ದ ದುಷ್ಕರ್ಮಿಗಳು ಮಹಿಳೆಯ ಕತ್ತಿನಲ್ಲಿದ್ದ 20 ಗ್ರಾಂ.ಚಿನ್ನದಸರ ಕಸಿದು ಪರಾರಿಯಾಗಿದ್ದಾರೆ.
 
 
ನಂತರ 7.30ಕ್ಕೆ ಸಿದ್ದಾಪುರ ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳತನವಾಗಿದೆ. ಸುಶೀಲಾ(53) ಎಂಬುವವರ ಕುತ್ತಿಗೆಯಲ್ಲಿದ್ದ 25 ಗ್ರಾಂ ಚಿನ್ನದ ಸರ ಕಳ್ಳತನವಾಗಿದೆ. ಮನೆ ಮುಂದೆ ನೀರು ಹಾಕುತ್ತಿದ್ದಾಗ ಕಳ್ಳರು ಈ ಕೃತ್ಯ ಎಸಗಿದ್ದಾರೆ. ಮೂರು ಪೋಲಿಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here